ಬಲ್ಲಾಳ ದುರ್ಗದ ಭೀಕರ ಕಮರಿ ( ಮಲೆನಾಡಿನ ರೋಚಕ ಕತೆಗಳು ಭಾಗ-11 )

ಬಲ್ಲಾಳ ದುರ್ಗದ ಭೀಕರ ಕಮರಿ ( ಮಲೆನಾಡಿನ ರೋಚಕ ಕತೆಗಳು ಭಾಗ-11 )

Regular price
$7.49
Sale price
$7.49
Regular price
Sold out
Unit price
per 
Shipping does not apply

 

ಪ್ರಕಾಶಕರು: ಗಿರಿಮನೆ ಪ್ರಕಾಶನ

Publisher: Girimane Prakashana

 

ಕರೆದಾಗ ಮೆದುಳಿ೦ದ ಎದ್ದು ಬರುವ ನೆನಪುಗಳೇ ಸೃಷ್ಟಿಯ ಅದ್ಭುತ. ಅದರಲ್ಲೂ ವೈವಿಧ್ಯಮಯವಾದ ಮಲೆನಾಡಿನ ರೋಚಕ ಘಟನೆಗಳ ನೆನಪುಗಳು ಎಂದರೆ ಮೊಗೆದಷ್ಟೂ ಮುಗಿಯದೆ ಉಕ್ಕುವ ನೀರಿನ ಚಿಲುಮೆಯ ಹಾಗೆ! ಐದಾರು ದಶಕಗಳು ಕಳೆದರೂ ಮಲೆನಾಡಿನ
ಬಾಲ್ಯದ ನೆನಪು ಮಾಸಿಲ್ಲ; ಮಾಸುವುದೂ ಇಲ್ಲ. ನ೦ತರ ಅದರ ಪಕ್ಕದ ಹೇಮಾವತಿ ನದಿಯಲ್ಲಿ ಅದೆಷ್ಟೋ ಲಕ್ಷ ಟಿ.ಎಮ್‌.ಸಿ. ನೀರು ಹರಿದು ಹೋಗಿದೆ. ಹೊಸ ನೀರು ಬಂದು ಹಳೆ ನೀರನ್ನು ಕೊಚ್ಚಿಕೊಂಡು ಹೋದುತ್ತಿದ್ದ೦ತೆ ನೀರಿನ ಹರಿವಿನ ಜೊತೆಗೇ ಬದುಕೂ ಬದಲಾಗಿದೆ. ಏನೇ ಬದಲಾದರೂ ಮನುಷ್ಯರ ಗುಣ ಸ್ವಭಾವಗಳೇನೂ ಬದಲಾದುವುದಿಲ್ಲವಲ್ಲ!

ಆಧುನಿಕ ತ೦ತ್ರಜ್ಞಾನ ಇಷ್ಟು ಮುಂದುವರೆದಿದ್ದು ಕೇವಲ ಒಂದೆರಡು ಶತಮಾನಗಳಿಂದ. ಅದರಲ್ಲೂ ಒಂದೈವತ್ತರಿ೦ದ ಅರವತ್ತು ವರ್ಷಗಳಿಂದೀಚೆಗೆ. ಆಗಿನ ಪಶ್ಚಿಮಘಟ್ಟದ ಸೆರಗಿನಲ್ಲಿರುವ ಮಲೆನಾಡಿನ ಹಚ್ಚ ಹಸಿರಾದ ಒ೦ದು ಹಳ್ಳಿಯ ರೋಚಕ ನೆನಪುಗಳನ್ನು ಸವಿಯಲು ಅಲ್ಲಿಗೆ ನಿಮ್ಮನ್ನು ಕರೆದುಹೊ೦ಡು ಹೋದರೆ ಹೇರುತ್ತದೆ? ಆಗ ಅದರ ಸವಿ ತಿಳಿಯಲಾಗದೆ ಈಗ ಅದರ ಸೊಗಸನ್ನು ಇಲ್ಲಿ ಕಟ್ಟಿ ಕೊಡಲು ಯತ್ನಿಸಿದ್ದೇನೆ. “ಬದುಕು , ಹೂವಿನ ಹಾಸಿಗೆಯೂ ಅಲ್ಲ; ಮುಳ್ಳಿನ ಹೊದಿಕೆಯೂ ಅಲ್ಲ'. ಕಷ್ಟ-ಸುಖಗಳ ಮಿಶ್ರಣದ ಬದುಕು ನಮ್ಮದು. ಹಾಗೆ ಕಳೆದ ಮಲೆನಾಡಿನ ಬಾಲ್ಯದ ಒಂದೊ೦ದು ಅನುಭವವೂ ನನಗೆ  ಗಟ್ಟಿತನ ಕಲಿಸಿದ್ದು ಸುಳ್ಳಲ್ಲ. ಅಲ್ಲಿ ಆಗ  ನಡೆದ ಫಟನೆಗಳನ್ನೇ ಯಥಾವತ್ತಾಗಿ ಮಲೆನಾಡಿನ ರೋಚಕ ಕತೆಗಳ ಸರಣಿಯ ಎ೦ಟನೆಯ ಭಾಗದ ರೂಪದಲ್ಲಿ ಈಗ ನಿಮ್ಮೊಂದಿಗೆ ಹ೦ಚಿಕೊಳ್ಳುತ್ತಿದ್ದೇನೆ 

 

- ಗಿರಿಮನೆ ಶ್ಯಾಮರಾವ್

 

ಪುಟಗಳು : 253