ಶ್ರೀ ರಾಮಾಯಣ ದರ್ಶನಂ

ಶ್ರೀ ರಾಮಾಯಣ ದರ್ಶನಂ

Regular price
$15.99
Sale price
$15.99
Regular price
Sold out
Unit price
per 
Shipping does not apply

ಪ್ರಕಾಶಕರು: ಉದಯರವಿ ಪ್ರಕಾಶನ

Publisher: Udayaravi Prakashana

 

ಶ್ರೀ ರಾಮಾಯಣ ದರ್ಶನಂ"ವು ಮಹಾಕಾವ್ಯವಾದ ರಾಮಾಯಣವನ್ನು[೧]ಆಧರಿಸಿ ಕುವೆಂಪುರವರು ರಚಿಸಿದ ಆಧುನಿಕ ಕನ್ನಡ ಸಾಹಿತ್ಯದ ಮೇರು ಕೃತಿಯಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ೧೯೬೮ ರಲ್ಲಿ 'ಜ್ಞಾನಪೀಠ ಪ್ರಶಸ್ತಿ'ಯನ್ನು ಕುವೆಂಪುರವರಿಗೆ ತಂದೊದಗಿಸಿದೆ.

ಶ್ರೀರಾಮಾಯಣ ದರ್ಶನಂ ಆಧುನಿಕ ಕನ್ನಡ ಸಾಹಿತ್ಯದ ಮಹೋನ್ನತ ಕೃತಿ. ಮಹಾಕಾವ್ಯಗಳ ರಚನೆಯ ಯುಗ ಮುಗಿದೇ ಹೋಯಿತು ಎನ್ನುವಾಗಲೇ ಸೃಷ್ಟಿಯಾದ ಆಧುನಿಕ ಮಹಾಕಾವ್ಯ. ವಾಲ್ಮೀಕಿಯ ಕಥಾ ಹಂದರದ ಮೇಲೆ ಸರ್ವೋದಯ ಸಮನ್ವಯ ತತ್ವಗಳನ್ನು ಪ್ರತಿಪಾದಿಸಿ ರಚಿತವಾದ ಈ ಕೃತಿ ’ಕುವೆಂಪುವ ಸೃಜಿಸಿದ’ ಮಹಾಕೃತಿಯೂ ಹೌದು.

ಹಳೆಯ ಕಥೆ ಹೊಸ ಯುಗಧಮವನ್ನು ಮೈಗೂಡಿಸಿಕೊಂಡು, ಎಷ್ಟರಮಟ್ಟಿಗೆ ಹೊಸದಾಗಬಹುದು ಎಂಬುದಕ್ಕೆ ಈ ಮಹಾಕಾವ್ಯ ಉಜ್ವಲ ಉದಾಹರಣೆಯಾಗಿದೆ. ಮಿಲ್ಟನ್‌ ಕವಿಯ ʼಪ್ಯಾರಡೈಸ್‌ ಲಾಸ್ಟ್‌ʼ ʼಪ್ಯಾರಡೈಸ್‌ ರಿಗೇನ್ಡ್‌ʼ ಆದ ಮೇಲೆ ಯಾವ ಭಾಷೆಯಲ್ಲೇ ಆಗಲಿ ಈ ಪ್ರಮಾಣದ ಒಂದು ಮಹಾಕಾವ್ಯ ಬಂದದ್ದನ್ನು ಕಾಣೆ -ಎಂದು ರಾಷ್ಟ್ರಕವಿ ಗೋವಿಂದ ಪೈ ಅವರು ಹೇಳಿದ್ದರೆ, ಶ್ರೀ ದೇವೇಂದ್ರ ಕುಮಾರ ಹಕಾರಿಯವರು ಇಪ್ಪತ್ತನೆಯ ಶತಮಾನದ ಜಟಿಲ ಮತ್ತು ಸಂಕೀರ್ಣ ಅನುಭವಗಳನ್ನು ಅಭಿವ್ಯಕ್ತಿಯ ಸಂಭವನೀಯ ಆಯಾಮಗಳಿಗೆ ಅಳವಡಿಸಿ, ಅದಕ್ಕನುಗುಣವಾದ ಬೃಹತ್‌ ಪರಿಧಿಗಳನ್ನು ಸೃಷ್ಟಿಸಿ ರೂಪಗೊಂಡ ಶ್ರೀ ಕುವೆಂಪು ಅವರ ʼಶ್ರೀರಾಮಾಯಣ ದರ್ಶನಂʼ ಸಹಜ ಸಂವೇದನೆಯ ಒಂದು ಮಹೋನ್ನತ ಕೃತಿ ಎಂದಿದ್ದಾರೆ.

- ವಿಕಿಪಿಡೀಯ ಪರಿಚಯ (http://bit.ly/34Qo1C1)

 

ಪುಟಗಳು: 885

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !