ಆರೋಗ್ಯದತ್ತ ನಮ್ಮ ಪಯಣ (ಇಬುಕ್)

ಆರೋಗ್ಯದತ್ತ ನಮ್ಮ ಪಯಣ (ಇಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ನಾಲ್ಕು ದಶಕಗಳಿಂದ ವೈದ್ಯರು, ಆಸ್ಪತ್ರೆಗಳು ತುಂಬಾ ಕಡಿಮೆ ಇದ್ದವು. ಜನಸಂಖ್ಯೆಯೂ ಅಷ್ಟೇ ಕಡಿಮೆ ಇತ್ತು. ಆದರೆ ಈಗ ಎಷ್ಟೊಂದು ವಿಧದ ಆಸ್ಪತ್ರೆಗಳು ಹುಟ್ಟಿಕೊಂಡಿವೆ ಅಷ್ಟೇ ರೋಗಗಳೂ !! ಅಷ್ಟೇ ವಿಧದ ಹೊಸ ಹೊಸ ವೈರಾಣುಗಳೂ ಪತ್ತೆಯಾಗುತ್ತಿವೆ. ಈ ಥರ ಹಾವಳಿ ವೈರಾಣುಗಳು / ರೋಗಾಣುಗಳ ಮಧ್ಯದಲ್ಲಿ ನಮ್ಮ ನಿರೋಧಕತೆಯನ್ನು ಉದ್ದೀಪನಗೊಳಿಸಿ ಆರೋಗ್ಯ ಕಾಪಾಡಿಕೊಳ್ಳುವುದೊಂದೇ ನಮಗುಳಿದಿರುವ ಮಾರ್ಗ.

ಸರಳ ಜೀವನ, ಸಂತೃಪ್ತ ಮನೋಭಾವ, ಸಾಕಷ್ಟು ನೆಮ್ಮದಿಯ ನಿದ್ರೆ, ದೈಹಿಕ ಚಟುವಟಿಕೆ ಮತ್ತು ರೋಗ / ಸಮಸ್ಯೆಗಳ ಅರಿವು ಹಾಗೂ ಬೇಕೇ ಬೇಕಾದ ಮುನ್ನೆಚ್ಚರಿಕೆಗಳ ವಿವರಣೆಯ ಪುಸ್ತಕ ಈಗ ನಿಮ್ಮ ಕೈಯಲ್ಲಿದೆ. ನಮ್ಮ ಜೀವನ ಮಟ್ಟದಲ್ಲಿ ಈಗ ಸಾಕಷ್ಟು ವ್ಯತ್ಯಾಸಗಳಿವೆ. ಬರಿಯ ಸ್ವಿಚ್ ಒತ್ತಿದರೆ ಅಡಿಗೆ / ಬಟ್ಟೆ ಕೆಲಸ ಮುಗಿಯುವ ಕಾಲ ಇದು. ಹೆಚ್ಚು ಸಮಯವನ್ನು ನಾವು ಕುಳಿತೋ, ಮಲಗಿಯೋ ಕಳೆಯಲು ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೇವೆ. ಹಾಗಾಗಿ ಬೊಜ್ಜು ನಮ್ಮಲ್ಲಿ ಹೆಚ್ಚಾಗುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಬೊಜ್ಜಿನ ಕುರಿಗಳಾಗುತ್ತಿದ್ದಾರೆ. ಪ್ರಪಂಚದಲ್ಲಿಯೇ ನಮ್ಮ ಭಾರತೀಯರಲ್ಲಿ ಅತಿ ಹೆಚ್ಚು ಮಧುಮೇಹಿಗಳು ಸಿಗುತ್ತಾರೆ. ಇನ್ನೊಂದು ದಶಕ ಕಳೆದರೆ ಮಧುಮೇಹಿಗಳ ತವರೆಂದರೆ ಎಲ್ಲರೂ ಭಾರತದ ಕಡೆಗೆ ನೋಡುತ್ತಾರೆ !! ಅಲ್ಲದೇ ಅವೈಜ್ಞಾನಿಕ ಚಿಂತನೆಗಳು ಅರೋಗ್ಯದೆಡೆಗಿನ ನಿರ್ಲಕ್ಷ, ಪಕ್ಕದವರಿಗೆ ಹಾರ್ಟ್ಅಟ್ಯಾಕ್ ಆದರೂ ನನಗಾದಾಗ ನೋಡಿಕೊಳ್ಳೋಣ ಎನ್ನುವ ಉದಾಸೀನತೆ ನಮಗಿದೆಲ್ಲ ಗೊತ್ತೇ ಇಲ್ಲ ಎನ್ನುವ ಬೋಳೇತನ ನಮ್ಮಲ್ಲಿ ಹೆಚ್ಚು. ಜೊತೆಗೆ ನಿಯಂತ್ರಣವಿಲ್ಲದ ಜನಸಂಖ್ಯಾ ಸ್ಪೋಟ ! ಸಾವಿರಾರು ಸಮಸ್ಯೆಗಳ ನಡುವೆಯೂ ನೆಮ್ಮದಿಯಾಗಿ ಗುಂಡುಹಾಕಿ ಎರಡು ದಮ್ಮೆಳೆದು ಮಿಕ್ಕಲ್ಲ ಹಣೆಬರಹ ಎನ್ನುವ ಜನಾಂಗ ನಮ್ಮದು.

ಇಂದು ರೋಗ ರುಜಿನಗಳಿಗೆ ಧ್ಯೇಯ ಭೂತ, ಕರ್ಮ ಸಿದ್ಧಾಂತಗಳಿಗೇ ನಾವು ನಮ್ಮೆಲ್ಲ ಕಷ್ಟಗಳನ್ನು ಅನಾರೋಗ್ಯವನ್ನೂ ಅರ್ಪಿಸಿ ಧನ್ಯರಾಗುತ್ತಿದ್ದೇವೆ. ಈಗಲಾದರೂ ನಾವು ಎಚ್ಚೆತ್ತು ಕೊಳ್ಳಲೇಬೇಕು. ಸರಳ ಜೀವನ ನಡೆಸಿ ಚಟುವಟಿಕೆಗಳ ಆಗರವಾಗಿ ನಮ್ಮ ಆರೋಗ್ಯವನ್ನು ಬದುಕಿರುವ ತನಕ ಜತಸ್ಥವಾಗಿ ಕಾಯ್ದುಕೊಳ್ಳುವುದು ನಮ್ಮದೇ ಜವಾಬ್ದಾರಿ ಎಂದು ಈಗಲಾದರೂ ಅರ್ಥೈಸಿಕೊಳ್ಳೋಣಾ, ಧೃಢ ಆರೋಗ್ಯದೆಡೆಗೆ ನಡೆಯೋಣ !!!. ಬಹಳಷ್ಟು ಪುಸ್ತಕಗಳಲ್ಲಿ ಈ ವಿಷಯಗಳು ಬಂದಿವೆ. ಆದರೆ ಲೇಖಕರು ಬಹಳ ಆಸಕ್ತಿ ವಹಿಸಿ ವಿವರಗಳಾಗಿ ಗಮನವಿಟ್ಟು ಅಂಶಗಳನ್ನು ನೀಡಿರುತ್ತಾರೆ.

- ಡಾ|| ಕೆ. ಎಸ್. ಶ್ಯಾಮ್ ಪ್ರಸಾದ್
ಜನರಲ್ ಫಿಜಿಷಿಯನ್ ಕಾರ್ಡಿಯಾಲಾಜಿ
ಅಧ್ಯಕ್ಷರು, ಭಾರತೀಯ ವೈದ್ಯಕೀಯ ಸಂಸ್ಥೆ, ದೊಡ್ಡಬಳ್ಳಾಪುರ.

 

ಪುಟಗಳು : 154

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !