ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ...

ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ...

Regular price
$3.99
Sale price
$3.99
Regular price
Sold out
Unit price
per 
Shipping does not apply

GET FREE SAMPLE

ಜನವರಿ 28, 1991 ರಲ್ಲಿ ಜನಿಸಿದ ಶ್ರುತಿಯವರ ಊರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಾಣಿಗ ಗ್ರಾಮ. ಮೂಲತಃ ಹರಿದ್ರಾವತಿ ಮನೆತನಕ್ಕೆ ಸೇರಿದ ಶ್ರೀಪಾದರಾವ್ ಮತ್ತು ಸೀಮಾ ಅವರ ಜೇಷ್ಠ ಪುತ್ರಿಯಾದ ಇವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿಯೇ ಪಡೆದರು. ನಂತರ ಪಿ.ಯು.ಸಿ.ಯನ್ನು ವಿಜ್ಞಾನ ವಿಷಯದಲ್ಲಿ ಹೊಂಗಿರಣ ಇಂಡಿಪೆಂಡೆಂಟ್ ಪಿ.ಯು. ಕಾಲೇಜ್, ಅಮಟೆಕೊಪ್ಪ, ಸಾಗರದಲ್ಲಿ ಮುಗಿಸಿದರು. ಬಳಿಕ ಶಿವಮೊಗ್ಗ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಡಿಪ್ಲಮೋಗೆ ಸೇರ್ಪಡೆಯಾಗಿ ನಾಲ್ಕು ತಿಂಗಳುಗಳಾಗುವ ಮುನ್ನವೇ ಕ್ಯಾನ್ಸರ್‌ಗೆ ತುತ್ತಾಗಿ, ವಿದ್ಯಾಭ್ಯಾಸವನ್ನು ತೊರೆದು ಚಿಕಿತ್ಸೆಗಾಗಿ ಮಣಿಪಾಲ್‍ಗೆ ತೆರಳಬೇಕಾಯಿತು.

‘ಆಸ್ಟಿಯೋ ಸರ್ಕೋಮಾ’ದಂತಹ ಮಾರಣಾಂತಿಕ ರೋಗದಿಂದ ಬಳಲುತ್ತಿದ್ದ ಶ್ರುತಿ ಅವರು, ತಮ್ಮ ಅನುಭವವನ್ನು ಈ ಕೃತಿಯಲ್ಲಿ ಹಂಚಿಕೊಂಡಿದ್ದಾರೆ. ಈ ಕೃತಿ ಓದುಗರ ಸಹೃದಯರ ಮೆಚ್ಚುಗೆಗಳಿಸಿದಲ್ಲದೇ ‘ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಧಾರವಾಡದ ಮಾತ್ರೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ’ ಮತ್ತು ‘ಮಂಡ್ಯದ ಅಡ್ವೈಸರ್ ಸಾಹಿತ್ಯ ಪ್ರಶಸ್ತಿ’ ಗಳನ್ನು ತನ್ನದಾಗಿಸಿಕೊಂಡಿದೆ.

 

ಪುಟಗಳು: 120

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

ವಿಮರ್ಶೆ