ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಅಂದರು ಹಿರಿಯರು. ಆಧುನಿಕ ಬದುಕಿನಲ್ಲಿ ಒಳ್ಳೆಯ ಆರೋಗ್ಯ ಪಡೆಯಲು ಇರುವ ಆಹಾರದ ಗುಟ್ಟೇನು? ತಿನ್ನುವ ಆಹಾರದಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಒಳಿತು ಅನ್ನುವ ಕುರಿತು ತಿಳಿವಿಗಿಂತ ಅಜ್ಞಾನವೇ ಹೆಚ್ಚಿರುವ ಈ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಯಲ್ಲಿನ ಬಿಡಿಬಿಡಿಯಾಗಿರುವ ಜ್ಞಾನ ಪರಂಪರೆಯನ್ನು ಪೋಣಿಸುವ, ಜೋಡಿಸುವ ಕೆಲಸವನ್ನು ಆಹಾರ ತಜ್ಞ ಕೆ.ಸಿ.ರಘು ಅವರ ಜನಪ್ರಿಯ ಕೃತಿ ರಸ ತತ್ವ ಮಾಡಿದೆ.
ಪುಟಗಳು: 144