ಬರಹಗಾರರು: ಗುರುಪಾದ ಬೇಲೂರ್
ಈಗಿನ ಮಾಹಿತಿ ಯುಗದಲ್ಲಿ, ನಮ್ಮ ಕಲ್ಪನಾ ಸಾಮರ್ಥ್ಯಕ್ಕಿಂತ ಹೆಚ್ಚಿನ ವೇಗದಲ್ಲಿ ಸಾಮಾಜಿಕ ಜೀವನದ ಬದಲಾವಣೆಗಳಾಗುತ್ತಿವೆ. ಈ ವೇಗ ಎಷ್ಟಿದೆ ಎಂದರೆ, ಒಂದು ಸಣ್ಣ ಅಪಘಾತವಾದರೂ ಇಡೀ ಸಾಮಾಜಿಕ ನೆಲೆಗಟ್ಟು, ಮತ್ತೆ ಚೇತರಿಸಿಕೊಳ್ಳಲಾಗದಂತೆ ನಾಶವಾಗುವ ವೇಗ. ಈ ವೇಗಕ್ಕೆ ಕಡಿವಾಣ ಹಾಕುವ ಮಾತನಾಡಿದರೆ, ಪ್ರಗತಿ ವಿರೋಧಿ ಎನಿಸಿಕೊಳ್ಳಬೇಕಾಗುತ್ತದೆಯೋ ಏನೋ. ಎಲ್ಲೋ ಒಂದು ಕಡೆ ನಮ್ಮ ಸಾಂಸ್ಕೃತಿಕ ಹಿನ್ನೆಲೆಯನ್ನೂ ಬಿಡದೆ, ಪ್ರಗತಿಯನ್ನೂ ತಿರಸ್ಕರಿಸದೆ, ಎಚ್ಚರಿಕೆಯಿಂದ ಸಮಾಜವನ್ನು ಮುನ್ನಡೆಸಬೇಕಾದ ಅನಿವಾರ್ಯತೆ ಇದೆ ಅನ್ನಿಸುತ್ತದೆ. ಅಂತಹ ಆಶಯ ಇಲ್ಲಿನ ಎಲ್ಲ ಕಥೆಗಳಲ್ಲೂ ಕಾಣಿಸುತ್ತದೆ.
ನೀರಾವರಿ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿರುವ ಗುರುಪಾದ ಬೇಲೂರು ಅವರು ಬರೆದಿರುವ ಕಥೆಗಳು ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ.