ಒಂದಾನೊಂದು ಊರಲ್ಲಿ... (ಆಡಿಯೋ  ಬುಕ್)

ಒಂದಾನೊಂದು ಊರಲ್ಲಿ... (ಆಡಿಯೋ ಬುಕ್)

Regular price
$5.99
Sale price
$5.99
Regular price
Sold out
Unit price
per 
Shipping does not apply

ಪ್ರಕಾಶಕರು: ಸಾವಣ್ಣ

Publisher: Sawanna

 

ಓದಿದವರು: ಪ್ರತಿಬಿಂಬ ತಂಡ 

ಆಡಿಯೋ ಪುಸ್ತಕದ ಅವಧಿ : 1 ಗಂಟೆ 43 ನಿಮಿಷ

 

ಬರಹಗಾರರು: ಜೋಗಿ

ಮುಲ್ಲಾ ನಸ್ರುದ್ದೀನ್ ಹೆಸರು ಕೇಳದವರು ಯಾರಿದ್ದಾರೆ? ನಸ್ರುದ್ದೀನ್‌ ಹುಟ್ಟಿದ್ದು ಟರ್ಕಿಯ ಸಮೀಪದ ಹಳ್ಳಿಯಲ್ಲಿ. ಅವನ ಕಾಲ 13ನೇ ಶತಮಾನ. ಅವನೊಬ್ಬ ತತ್ವಜ್ಞಾನಿ, ಜನಪ್ರಿಯ ಜಾಣ, ಹಾಸ್ಯಗಾರ, ಬುದ್ಧಿವಂತ, ದಡ್ಡ, ಹುಂಬ- ಎಲ್ಲವೂ ಆಗಿದ್ದ. ಸತ್ಯಜಿತ್‌ ರೇ, ಇದ್ರಿಸ್‌ ಷಾ ಮುಂತಾದವರನ್ನು ಪ್ರಭಾವಿಸಿದ ಮುಲ್ಲಾ ನಸ್ರುದ್ದೀನ್‌ ಕುರಿತು ಒಂದು ಧಾರಾವಾಹಿ ಕೂಡ ದೂರದರ್ಶನದಲ್ಲಿ ಬಂದಿತ್ತು. ಎಷ್ಟೋ ರಾಷ್ಟ್ರಗಳಲ್ಲಿ ಅವನ ಕತೆಗಳನ್ನು ಸಾಮ್ರಾಜ್ಯಶಾಹಿಗಳ ವಿರುದ್ಧ ಗೇಲಿ ಮಾಡಲು ಬಳಸಲಾಗುತ್ತದೆ. ಅಪ್ಪಟ ಮಾನವತಾವಾದಿ ನಸ್ರುದ್ದೀನ್‌ ಎಂದು ಅವನ ಆರಾಧಕರು ಹೇಳುತ್ತಾರೆ. ಅವನ ಹುಟ್ಟೂರಲ್ಲಿ ಜುಲೈ 5ರಿಂದ ಜುಲೈ 10ರ ತನಕ ನಸ್ರುದ್ದೀನ್‌ ಉತ್ಸವ ನಡೆಯುತ್ತದೆ. ಕತೆಗಳಲ್ಲಿ ಸಿಗುವ ನಸ್ರುದ್ದೀನ್‌ ಒಬ್ಬನೇ ವ್ಯಕ್ತಿಯಲ್ಲ. ಅವನಿಗೆ ಒಂದು ಉದ್ಯೋಗವಿಲ್ಲ. ಒಂದೇ ಪುಸ್ತಕದಲ್ಲಿ ಅವನು ವಿವಿಧ ರೂಪಗಳಲ್ಲಿ ಪ್ರತ್ಯಕ್ಷವಾಗುತ್ತಾನೆ. ಒಮ್ಮೆ ನ್ಯಾಯಾಧೀಶ ಮತ್ತೊಮ್ಮೆ ಆರೋಪಿ, ಒಮ್ಮೆ ವೈದ್ಯ, ಮತ್ತೊಮ್ಮೆ ರೋಗಿ, ಒಮ್ಮೆ ಕವಿ, ಮತ್ತೊಮ್ಮೆ ರಾಜಕಾರಣಿ- ಹೀಗೆ ಅವನು ಏನು ಬೇಕಾದರೂ ಆಗಬಲ್ಲ ಬಹುರೂಪಿ. ಹೀಗಾಗಿಯೇ ಅವನು ನಮ್ಮೊಳಗೊಬ್ಬ ಆಗುತ್ತಾನೆ. ಹೀಗಾಗಿಯೇ ಅವನ ಕತೆ ನಮ್ಮ ಕತೆಯೂ ಆಗುತ್ತದೆ.

ಮಕ್ಕಳ ಮೊದಲ ಓದಿಗೆ ಆಗುವಂತೆ ಇಲ್ಲಿ ನೂರು ಪುಟ್ಟ ಪುಟ್ಟ ನಸ್ರುದ್ದೀನ್ನನ ಕತೆಗಳಿವೆ.

 

ಈ ಪುಸ್ತಕ ಈಗ ಆಡಿಯೋ ಬುಕ್ ಆಗಿದೆ. ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.