ಪ್ರಶಾಂತ ಆಡೂರ ಅವರ ಹಾಸ್ಯ ಲೇಖನಗಳ ಗುಚ್ಛ. ಹುಬ್ಬಳ್ಳಿಯ ಜವಾರಿ ಕನ್ನಡದಲ್ಲಿ ಮೂಡಿದ ಈ ಪುಟ್ಟ ಸಂಸಾರದೊಳಗಿನ ನಗೆಬರಹಗಳು, ನಿಮ್ಮ ಮನಸ್ಸನ್ನು ಪ್ರಶಾಂತಗೊಳಿಸುವಷ್ಟು ತಾಜಾ ಆಗಿವೆ.
ನಾ, ಪ್ರಶಾಂತ ಆಡೂರ ಹುಟ್ಟಿದ್ದ 1973ರಾಗ, ಅದು ಮಲೆನಾಡಿನ ಶಿವಮೊಗ್ಗಾದೊಳಗ. ಆದರ ಬೆಳದಿದ್ದು-ಬಲತಿದ್ದು ಎಲ್ಲ ಬಯಲಸೀಮೆ ಹುಬ್ಬಳ್ಳಿ ಒಳಗ.ಕಲತಿದ್ದು ಬಿ.ಎಸ್ಸಿ, ಎಂ.ಬಿ.ಎ. (ಸಿಂಬಾಯ್ಸಿಸ್). ಹುಬ್ಬಳ್ಳ್ಯಾಗ ಒಂದ ಪ್ರಾವೇಟ್ ಕಂಪನಿ ಒಳಗ ಸಿ.ಇ.ಒ. ಅಂತ 16 ವರ್ಷದಿಂದ ನೌಕರಿ. ಕನ್ನಡಾ ಬ್ಲಾಗ್ ಒಳಗ ಆವಾಗ ಇವಾಗ ಅಂಕಣಾ ಬರಿಯೋದು, ತಲ್ಯಾಗ ತಿಳದಾಗ ಒಮ್ಮೆ ಪೇಂಟಿಂಗೂ, ಫೋಟೊಗ್ರಾಫಿ... ಇವು ಸಂಸಾರೇತರ ಹವ್ಯಾಸ. ಹಂಗ ಇನ್ನೂ ಸಂಸಾರದ ಜಂಜಾಟದಾಗ ಟೈಮ್ ಸಿಕ್ಕರ ಊರ ಉಸಾಬರಿ (ಸಮಾಜ ಸೇವಾ)... ಈ ಹಿಂದ ‘ಕುಟ್ಟವಲಕ್ಕಿ’ ಅನ್ನೋ ಇಂಥಾದ್ದ ಪುಸ್ತಕ ಬರದೀನಿ.
ಪುಟಗಳು: 144