ಬರೆದವರು: ಕರಣಂ ಪವನ್ ಪ್ರಸಾದ್
Author: Karnam Pavan Prasad
ಪ್ರಕಾಶಕರು: ಕಾನ್ ಕೇವ್ ಮೀಡಿಯಾ
Publisher: Concave Media
ಬದುಕೆಂಬ ಮಹಾಸಾಗರದಿಂದ ಬೊಗಸೆ ನೀರು ಕೈಯಲ್ಲಿ ಹಿಡಿದು ಅದು ಕೈಸೊಂದುಗಳಲ್ಲಿ ಹರಿದುಹೋಗುವ ಮುನ್ನ ಅದರ ಗುಣಲಕ್ಷಣವನ್ನು ಹಾಸ್ಯದ ಕಡುಗಣ್ಣಲ್ಲಿ ನೋಡುವ ಕಥೆಯಿದು.
- ಕರಣಂ ಪವನ್ ಪ್ರಸಾದ್
ಇಡೀ ಕಾದಂಬರಿಯು ‘ಡಾರ್ಕ್ ಹ್ಯೂಮರ್’ ರೀತಿಯಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಅಲ್ಲಲ್ಲಿ ನಿರೂಪಕರು ತಮ್ಮ ಅಭಿಪ್ರಾಯವನ್ನು ಸೂಚಿಸಿದರೂ ಬಹಳ ಸಂಯಮದಿಂದ ಅಗತ್ಯಕ್ಕಷ್ಟೇ ಅನಿಸುವಷ್ಟು ಹೇಳಿ ಕಾದಂಬರಿಯ ಘಟನೆಗಳು, ಪಾತ್ರಗಳ ಬಗೆಗಿನ ತೀರ್ಮಾನವನ್ನು ಓದುಗರಿಗೇ ಬಿಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಂದ ಒಂದು ಉತ್ತಮ ಕಾದಂಬರಿ ಇದು.
- ಪಲ್ಲವಿ ಇಡೂರು, ಪ್ರಜಾವಾಣಿ ವಿಮರ್ಶೆಯಲ್ಲಿ
'ಜೀವಕ್ಕಿಂತ ಮರ್ಯಾದೆ ದೊಡ್ಡದು ಆಗಿದ್ದು ಯಾವಾಗ? ಹುಟ್ಟಿದ ರೀತಿಯ ಶುದ್ದತೆಯ ಆಧಾರದ ಮೇಲೆ ಜೀವಕ್ಕೆ ಬದುಕಲು ಅವಕಾಶ ಕಲ್ಪಿಸುವ ವ್ಯವಸ್ಥೆ ಹುಟ್ಟಿದ್ದು ಯಾವಾಗ ? 'ಒಂದು ನಿದ್ದೆ ವಿವೇಕವನ್ನು ಮರುಕಳಿಸುತ್ತದೆ, ಕತ್ತಲಿನ ಕೋಪ ಬೆಳಕಿನಲ್ಲಿ ತಿಳಿಯಾಗುತ್ತದೆ' ಎಂಬ ಅಮ್ಮಿ ಅತ್ತೆಯ ಯೋಚನೆಗಳು ಹಾಗೂ ಇಲ್ಲಿ ಬರುವ ಇನ್ನೂ ಅನೇಕ ಸೂಕ್ಷ್ಮ ವಿಚಾರಗಳು ನಮ್ಮನ್ನೂ ಅಲೋಚನೆಗೆ ಈಡುಮಾಡುತ್ತದೆ.
- ಹರ್ಷಿತಾ ಅರುಣ್, ಫೇಸ್ ಬುಕ್ ವಿಮರ್ಶೆ
ಪುಟಗಳು: 205
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !