ಒಂಟಿ ಟೊಂಗೆಯ ಲಾಂದ್ರ

ಒಂಟಿ ಟೊಂಗೆಯ ಲಾಂದ್ರ

Regular price
$0.99
Sale price
$0.99
Regular price
Sold out
Unit price
per 
Shipping does not apply

GET FREE SAMPLE

ಕಾಡಿನಲಿ‌ ಕರೆದೆ ದೇವರನು, ಭುಸ್ಸೆಂದಿತು ಹಾವು
ಕೂತು ಕೂಗಿದೆ ಊರ ಮಧ್ಯದಲಿ‌
ಒಂದಿಬ್ಬರು ಕರೆದೆಯಾ ಅಂದರು
ದೇವರಾಗುವುದಿಲ್ಲವಲ್ಲಾ ಹೆಸರಿಟ್ಟುಕೊಂಡ ಮಾತ್ರಕ್ಕೆ
ನಗರದ ಎದೆಯಲ್ಲೇನಾದರೂ ಕೂತಿರಬಹುದಾ
ನೋಡಲಿಕ್ಕೆ ಇಲ್ಲಿ‌ ಕಣ್ಣುಗಳು ಸಂಧಿಸುವುದಿಲ್ಲ
ಬರೀ ಬೆಳಕಿನ ವ್ಯಾಪಾರ, ದೇವರು ತೇಜಿಯಾಗಿದ್ದಾನೆ

ಕಾಲವನು ಮತ್ತೆ ಜೋಡಿಸಿದೆ ಅಂಗೈಲಿಟ್ಟು
ದೇವರು ಸಿಗುವುದಿಲ್ಲ ಬಿಡು ಇಂಥ ಹುಡುಕಾಟದಲಿ
ಆತನೋ ಆಕೆಯೋ; ನಮ್ಮಂತೆಯೇ ದೇವರು?
ಇರಬಹುದು ಪೂರ ವಿರಾಗಿ, ಭೈರಾಗಿ
ಹೌದಲ್ಲಾ, ತನ್ನಿರುವ ಚೂರು ಚೂರೇ ಬಿಟ್ಟು

ಕಳೆದುಹೋದವ ಇದೇ ಜಂಗುಳಿಯ ಮಧ್ಯ
ಇಲ್ಲೀಗ ಈ ಮರಗಳ ಕೆಳಗೆ ಕೂತವರೆಲ್ಲಾ
ಮುಂದೇನಾಗುವರು!

 

ವೃತ್ತಿಯಿಂದ ಸಾಫ್ಟವೇರ್ ಇಂಜಿನಿಯರ್ ಆಗಿರುವ ಶ್ರೀಧರ್ ತಲಗೇರಿ ಅವರ ಮೊದಲ ಕವನ ಸಂಕಲನದಲ್ಲಿ ಇಂತಹ ಚೆಂದದ, ಮನಕ್ಕೆ ತಾಕುವ, ಎದೆಗೆ ನಾಟುವ ಹಲವು ಕವಿತೆಗಳಿವೆ.  ಮೈಲ್ಯಾಂಗ್ ಅಲ್ಲಿ ಬಿಡುಗಡೆಯಾದ ದಿನದಿಂದಲೂ ಹಲವು ಓದುಗರು ಕೊಂಡು ಮೆಚ್ಚಿರುವ ಹೊಸ ಹುಡುಗನ ಕವನ ಸಂಕಲನ ಇದಾಗಿದೆ.  ಶ್ರೀಧರ್ ಹೇಳುವಂತೆ "ನಿಸರ್ಗದ ನವಿರು ಸಂಭಾಷಣೆಗೆ ಕಿವಿಯಾಗಿ, ನಗರದ ಚಲನಶೀಲತೆಗೆ ಕಣ್ಣಾಗಿ, ಆ ಕ್ಷಣಕ್ಕೆ ಸಿಗಬಹುದಾದ ಸಾದಾ ಬದುಕಿನ ತಾಜಾ ವಿವರಗಳನ್ನ ಹಿಡಿದಿಟ್ಟು, ಕವಿತೆಯೊಂದಿಗೆ ಅನುಸಂಧಾನಗೈಯುವ ಪ್ರಯತ್ನದ ಕೃತಿ" ಇದಾಗಿದೆ.

 

ಪುಟಗಳು: 80

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !