ಪುವೆಂಪು ನೂತ್ತೊಂಜಿ ನೆಂಪು

ಪುವೆಂಪು ನೂತ್ತೊಂಜಿ ನೆಂಪು

Regular price
$5.99
Sale price
$5.99
Regular price
Sold out
Unit price
per 
Shipping does not apply

ನಮ್ಮಲ್ಲಿ ಎರಡು ಪ್ರಶ್ನೆಗಳು ಉದ್ಭವಿಸಿ ಅವನ್ನು ಯುವಜನರಲ್ಲಿ ಕೇಳಿದೆವು.
“ನೀವೆಲ್ಲಾ ಯಾಕೆ ನಿಮ್ಮ ಶಾಲಾ ಕಾಲೇಜು ಮತ್ತು ಕೆಲಸದ ಜಾಗದಲ್ಲಿ ಸಂಭ್ರಮಾಚರಣೆಯ ಸಂದರ್ಭ ತುಳುವಿನ ಹಾಡುಗಳನ್ನು ಹಾಡುವುದು ಮತ್ತು ಅಭಿನಯಿಸುವುದನ್ನು ಮಾಡುವುದಿಲ್ಲ?'' 
ಅದಕ್ಕೆ ಅವರು ಕೊಟ್ಟ ಉತ್ತರ ಹೆಚ್ಚಿನವು ಒಂದೇ ತೆರನಾಗಿತ್ತು. 
“ನಮಗೆ ತುಳುವಿನಲ್ಲಿ ಸಾಕಷ್ಟು ಉತ್ತಮ ಹಾಡುಗಳು ಸಿಗಲ್ಲ, ಹಾಡಿದ್ದನ್ನೇ ಹಾಡುವಂತಹ ಹಳೆಯ ಹಾಡುಗಳೇ ಸಿಗುವುದು ಮತ್ತು ಹಾಡುವುದಕ್ಕೆ ಅನುಕೂಲವಾಗುವಂತಹ ಮೈನಸ್ ಟ್ರ್ಯಾಕ್ (ಕರೋಕೆ) ಕೂಡಾ ಸಿಗೋದಿಲ್ಲ. ಸಂಗೀತಗಾರರನ್ನು ಕರೆಸಿ ಕಾರ್ಯಕ್ರಮ ನಡೆಸಿ ಕೊಡುವುದಕ್ಕೆ ಸಾಕಷ್ಟು ಖರ್ಚು ವೆಚ್ಚ ಆಗುತ್ತದೆ. ಅದು ಸ್ವಲ್ಪ ಕಷ್ಟ ಸಾಧ್ಯ'' 
ನಮ್ಮ ಎರಡನೇ ಪ್ರಶ್ನೆ ಇದ್ದಿದ್ದು ಮೂವತ್ತರಿಂದ ನಡುವಯಸ್ಸಿನ ಬರಹಗಾರರಿಗೆ. 
''ನೀವು ಯಾಕೆ ಹಾಡುವಂತಹ ಹೊಸ ತುಳು ಹಾಡುಗಳನ್ನು ಬರೆಯುತ್ತಿಲ್ಲ?''
ಅವರು ಕೊಟ್ಟ ಉತ್ತರ ಕೂಡಾ ವಾಸ್ತವಿಕವಾಗಿತ್ತು. 
''ಬರೆದು ಮಾಡುವುದಾದರೂ ಏನು? ನಮ್ಮ ಹಾಡುಗಳನ್ನು ಬಳಸಿಕೊಳ್ಳುವ ಸಂಗೀತಗಾರರು - ಹಾಡುಗಾರರು ಸಿಗೋದಿಲ್ಲ, ನಾವೇ ಹಾಡುಗಳನ್ನು ಬರೆದು ಹಾಡಿಸುವಷ್ಟು ಸಮರ್ಥರಿಲ್ಲ. ಹಾಡುವವರು, ಸಂಗೀತ ಸಂಯೋಜನೆ ಮಾಡುವವರು ಸಿಕ್ಕಿದ್ರೆ ನಾವಂತೂ ಬರೆಯುವುದಕ್ಕೆ ಸದಾ ಸಿದ್ದ'' 

ಐಲೇಸಾ ಈ ಶೂನ್ಯತೆಯನ್ನು ತುಂಬುವುದು ಹೇಗೆ? ಅನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ತಂತ್ರಜ್ಞಾನವನ್ನು ಬಳಸಿಕೊಂಡು ತುಳು ಅಭಿಮಾನಿಗಳಿಗೆ ಬೆರಳ ತುದಿಯಲ್ಲಿ ತುಳು ಹಾಡುಗಳನ್ನು ಹಾಗೆಯೇ ಇತರ ತುಳು ಸಹೋದರ ಭಾಷೆಯ ಹಾಡುಗಳನ್ನು ಕರೋಕೆ ಸಮೇತ ಅವರಲ್ಲಿಗೆ ತಲುಪಿಸುವ ಪ್ರಯತ್ನವಾಗಿ ಮೊದಲ ಹೆಜ್ಜೆಯಿಟ್ಟಾಗ ಉದಿಸಿದ್ದೇ ತುಳು ಭಾಷೆಗೆ ''ನೂರೊಂದು ಹೊಸ ರೀತಿಯ ಗೀತೆಗಳ'' ಕಲ್ಪನಾ ಕನಸು!
ಖ್ಯಾತ ಗಾಯಕರಾದ ರಮೇಶ್ಚಂದ್ರ ಮತ್ತು ತುಳುನಾಡಿನ ಸಮಾನ ಮನಸ್ಕರ ತಂಡವೊಂದು ಜಗದಗಲ ಪಸರಿಸಿರುವ ತೌಳವನಾಡಿನವರನ್ನು ಸಂಗೀತ, ಸಾಹಿತ್ಯ, ಸಂಸ್ಕೃತಿಯ ಮೂಲಕ ವರ್ಚುವಲ್ ಆಗಿ ಒಗ್ಗೂಡಿಸುವ ಯೋಚನೆ ಹಾಗೂ ಯೋಜನೆಯೊಂದಿಗೆ ಐಲೇಸಾ ತಂಡವು 15 ಆಗಸ್ಟ್ 2020ರಂದು ಒಂದು ವಿಶೇಷ ಗಾನಮಾಧುರ್ಯದೊಂದಿಗೆ ಈ ಕೆಲಸಕ್ಕೆ ಅಣಿಯಾಯ್ತು.


ಜಗತ್ತಿನಾದ್ಯಂತ ನೂರಾರು ಕವಿಗಳು ಬರೆದ ನೂರಾರು ಹಾಡುಗಳಲ್ಲಿ ʻನೂರಾ ಒಂದು' ಹಾಡುಗಳನ್ನು ಆರಿಸಿ ಒಂದು ''ಗೀತಾ ಪುಸ್ತಕ'' ತರುವ ಯೋಚನೆ ಮೂಡಿ ಅದು ಈಗ ಸಾಕಾರವಾಗುತ್ತಿದೆ. ಪುಸ್ತಕಕ್ಕೆ ಒಂದು ಸಾರ್ಥಕ ಹೆಸರು ಬೇಕು ಎಂದು ಯೋಚಿಸಿದಾಗ ಹೊಳೆದ ಮೊದಲ ಗೌರವಾನ್ವಿತ ಹೆಸರು ತುಳು ಲಿಪಿತಜ್ಞ ಮತ್ತು ಸಂಶೋಧಕ, ಕವಿ ಡಾ. ವೆಂಕಟರಾಜ ಪುಣಿಂಚತ್ತಾಯ ಅವರದ್ದು. ಭಾಷೆಯ ಉಳಿವಿಗೆ ತನ್ನ ಬಾಳನ್ನು ಸಂಪೂರ್ಣ ಸವೆಸಿದ ಕೇರಳ ತುಳು ಅಕಾಡಮಿಯ ಮೊದಲ ಅಧ್ಯಕ್ಷ ಪಟ್ಟ ಅಲಂಕರಿಸಿದ ವಿದ್ವಾಂಸ ಪುಣಿಂಚತ್ತಾಯ ಅವರ ಕುಟುಂಬಿಕರ ಒಪ್ಪಿಗೆ ಪಡೆದು ಅವರ ನೆನಪಿಗಾಗಿ ''ಪುವೆಂಪು ನೂತ್ತೊಂಜಿ ನೆಂಪು'' ಹೆಸರಲ್ಲಿ ಪುಸ್ತಕ ಅಂದವಾಗಿ ಮೂಡಿ ಬಂದಿದೆ. ''ಪುವೆಂಪು'' ಅನ್ನುವ ಮೂರಕ್ಷರಗಳು ತುಳುವಿನ ಕಾವ್ಯ ರಸಋಷಿ ಪುಂಡೂರು ವೆಂಕಟರಾಜ ಪುಣಿಂಚತ್ತಾಯರ ಹೆಸರಿನ ಸೂಕ್ಷ್ಮರೂಪ. ಅವರ ನೆನಪಲ್ಲಿ ಒಂದಿಷ್ಟು ಸವಿ ಭಾವಗೀತೆಗಳನ್ನು ಹೊತ್ತು ತಂದ ಚಂದದ ಹೊತ್ತಿಗೆಯಿದು.


ನಮ್ಮ ಕರೆಗೆ ಸ್ಪಂದಿಸಿ ಐಲೇಸಾದ ನಿಬಂಧನೆಗಳಿಗೆ ಪೂರಕವಾಗಿ ದೇಶ-ವಿದೇಶದ ಹಲವಾರು ಗೌರವಾನ್ವಿತ ಬರಹಗಾರರು ಡಾ. ವೆಂಕಟರಾಜ ಪುಣಿಂಚತ್ತಾಯ ಅವರ ಮೇಲಿನ ಆದಮ್ಯ ಪ್ರೀತಿಯಿಂದ ಉತ್ತಮ ಗೇಯ ಕವಿತೆಗಳನ್ನು ಬರೆದು ತಮ್ಮ ಅಕ್ಷರ ನಮನ ಸಲ್ಲಿಸಿದ್ದಾರೆ. ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಅವರು ಅಭಿಮಾನಪೂರ್ವಕವಾಗಿ ಮುನ್ನುಡಿ ಒದಗಿಸಿದ್ದಾರೆ. ಮುಂಬೈಯ ಹಿರಿಯ ಸಾಹಿತಿ ಡಾ. ಸುನೀತಾ ಶೆಟ್ಟಿಯವರು ತಮ್ಮ ಕವನದ ಮೂಲಕ ಮೆರುಗು ತುಂಬಿದ್ದಾರೆ.

 

ಪುಟಗಳು: 220 (ಕವನಗಳು  - 118)

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !