ತುಂಬಿ ತುಳುಕಿದ ಸಾಲು

ತುಂಬಿ ತುಳುಕಿದ ಸಾಲು

Regular price
$2.99
Sale price
$2.99
Regular price
Sold out
Unit price
per 
Shipping does not apply

ಕಚೇರಿಗೆ ಕಾರಿನಲ್ಲಿ ಹೋಗುವ ಮತ್ತು ಬರುವ ಸಂದರ್ಭಗಳಲ್ಲಿ, ಟ್ರಾಫಿಕ್ ಜಾಮ್‍ನಿಂದಾಗಿ ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಅಸಹಾಯಕ ಸ್ಥಿತಿಯೇ ಅವರನ್ನು ಸಾಹಿತ್ಯಲೋಕಕ್ಕೆ ಎಳೆದು ತಂದಿತು ಎಂದರೆ ಅದು ಅತಿಶಯೋಕ್ತಿ ಏನಲ್ಲ. ತೊಡೆಯ ಮೇಲೊಂದು ಲ್ಯಾಪ್‌ಟಾಪ್, ಜೀನ್ಸ್ ಪ್ಯಾಂಟಿನ ಜೇಬಿನಲ್ಲಿ ಒಂದು ಸೆಲ್ ಫೋನ್ ಇಟ್ಟುಕೊಂಡು ಸಹೋದ್ಯೋಗಿಯೊಂದಿಗೆ ಕಾರಿನಲ್ಲಿ ಹೊರಟರೆ ಸಾಲುಗಟ್ಟಿದ ವಾಹನಗಳ ಹಿಂದೆ ಆಮೆವೇಗದ ಪಯಣ. ನಡುನಡುವೆ ಟ್ರಾಫಿಕ್ ಜಾಮ್. ಕಚೇರಿ ತಲುಪುವುದಕ್ಕೆ ನಾಲ್ಕು ಗಂಟೆಗಳು ಬೇಕು. ಪ್ರತಿದಿನವೂ ಇದೇ ಗೋಳು. ಮಾನಸಿಕ ಒತ್ತಡ, ಏಕತಾನತೆಯಿಂದ ಹೊರಬರಲು ಅವರು ಕಂಡುಕೊಂಡ ಮಾರ್ಗವೇ ಕವನ ರಚನೆ. ಲ್ಯಾಪ್‌ಟಾಪ್ ಕಂಪ್ಯೂಟರ್‌ಗಳ ನಡುವೆ ಕಳೆದುಹೋಗಬಹುದಾಗಿದ್ದ ಪ್ರವೀಣ್ ಬಿ. ಶೆಟ್ಟಿಯವರು ಸಾಹಿತ್ಯಲೋಕಕ್ಕೆ ಕಾಲಿಟ್ಟಿದ್ದೆ ಒಂದು ಸುದೈವ. ಪುಸ್ತಕ, ಪೆನ್ನುಗಳನ್ನಿಟ್ಟುಕೊಂಡು ಸಿದ್ಧವಾದವುಗಳಲ್ಲ ಅವರ ಕವನಗಳು. ಬದಲಿಗೆ ಲ್ಯಾಪ್‌ಟಾಪ್‌ ಪರದೆಯ ಮೇಲೆ ಮೂಡಿದ ಅಕ್ಷರ ಜಾತ್ರೆ. ಒಮ್ಮೆ ತಾನು ಬರೆದ ಕವನಗಳನ್ನು ನನಗೆ ತೋರಿಸಿದರು. ನಿಜಕ್ಕೂ ನನಗೆ ಅಚ್ಚರಿ ಮತ್ತು ಸಂತೋಷ ಏಕಕಾಲಕ್ಕೆ ಉಂಟಾಯಿತು. ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡದ ಪ್ರವೀಣ್; ಅರ್ಥಪೂರ್ಣವಾಗಿ ಧ್ವನಿಯುಕ್ತವಾಗಿ ಕವನ ಕಟ್ಟುವುದರಲ್ಲಿ ಯಶಸ್ವಿಯಾಗಿದ್ದರು. ಮತ್ತಷ್ಟು ಬರೆಯುವಂತೆ ಅವರನ್ನು ಉತ್ತೇಜಿಸಿದೆ. ಅವರು ಕವನ ರಚಿಸಿದಾಗಲೆಲ್ಲಾ ನನಗದು ವಾಟ್ಸಾಪ್ನಲ್ಲಿ ಹರಿದುಬರುತ್ತಿತ್ತು. ನಾನು ಓದಿ ಆನಂದಿಸುತ್ತಿದ್ದೆ. ಅವುಗಳೆಲ್ಲವೂ ಈಗ ಸಂಕಲನದ ರೂಪದಲ್ಲಿ ಕೃತಿಯಾಗಿ ಹೊರಹೊಮ್ಮಿದೆ. 

 

 

ಪುಟಗಳು: 120

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !