ದೇಶವಿದೇಶ - 1 (ಮಿಲನಿಯಮ್ - 9)

ದೇಶವಿದೇಶ - 1 (ಮಿಲನಿಯಮ್ - 9)

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಭೌತ ಪ್ರಪಂಚದ ಸಾಹಸಗಳಿಗೆ ಮೀರಿದ ಬೌದ್ಧಿಕ ಪ್ರಪಂಚದ ಸಾಹಸಗಳು ಈ ಶತಮಾನದಲ್ಲಿ ನಡೆದುವು. ಐನ್‌ಸ್ಟೈನರ ಸಾಪೇಕ್ಷ ಸಿದ್ಧಾಂತ, ಸ್ಟೀಫನ್ ಹಾಕಿನ್ಸರ ಬ್ರಹ್ಮಾಂಡಗಳ ಹುಟ್ಟಿನ ಬಗ್ಗೆಯ ವಿವರಣೆಗಳು, ಕ್ವಾಂಟಮ್ ಸಿದ್ಧಾಂತಗಳು, ಜೀವಕೋಶಗಳಿಗೆ ಸಂಬಂಧಿಸಿದ ಆರ್.ಎನ್.ಎ, ಡಿ.ಎನ್.ಎ, ವಿಶ್ಲೇಷಣೆಗಳು, ಪರಮಾಣುಗಳೊಳಗೆ ನಡೆಯುತ್ತಿರುವ ಗಡಿಯಾರಗಳು (ಇವುಗಳ ಬಗ್ಗೆ ಇನ್ನೂ ಹೆಚ್ಚಿನ ವಿವರಗಳನ್ನು ತಿಳಿಯಬೇಕೆನ್ನುವವರು ‘ಮಿಸ್ಸಿಂಗ್ ಲಿಂಕ್’ ಪುಸ್ತಕ ನೋಡಿ) ಮೊದಲಾದುವನ್ನು ಇದಕ್ಕೆ ಉಲ್ಲೇಖಿಸಬಹುದು. ಇವನ್ನು ನನ್ನ ಯೋಗ್ಯತೆಯ ಇತಿಮಿತಿಯೊಳಗೆ ನಿಮಗೆ ತಿಳಿಸಲು ಯತ್ನಿಸಿದ್ದೇನೆ. ಇವುಗಳ ಆಳವಾದ ಮತ್ತು ವಿವರವಾದ ಅಭ್ಯಾಸಕ್ಕೆ ಈ ಪ್ರಸ್ತಾಪ ನಿಮಗೆ ಸ್ಫೂರ್ತಿ ಕೊಟ್ಟರೆ ಅವನ್ನು ನಾನು ಇಲ್ಲಿ ಪ್ರಸ್ತಾಪಿಸಿದ್ದು ಸಾರ್ಥಕವೆಂದು ಭಾವಿಸುತ್ತೇನೆ.

ಮಹಾಯುದ್ಧಾನಂತರ ನಡೆದ ಭೀಕರ ರಾಜಕೀಯ ಉತ್ಪಾತಗಳ ಹಿನ್ನೆಲೆಯಲ್ಲಿ ಏಷ್ಯಾದ, ಅದರಲ್ಲೂ ಆಗ್ನೇಯ ಏಷ್ಯಾದ ದೇಶಗಳ ವಿಚಾರ ಚಿತ್ರಿಸಲು ಪ್ರಯತ್ನಿಸಿದ್ದೇನೆ. ಈ ಪುಸ್ತಕ ‘ದೇಶವಿದೇಶ - ೧’ ಕಾಲ ಮತ್ತು ದೇಶಗಳೆರಡರಲ್ಲೂ ಪ್ರವಾಸ ಮಾಡಲು ಸಹಾಯ ಮಾಡಲಿ. ಪುಸ್ತಕಗಳ ಮುಖಾಂತರ ಪ್ರವಾಸ ಹೊರಡುವವರಿಗೆ ಇರುವ ಅದ್ಭುತ ಅನುಕೂಲ ಇದು. ಆರಾಮಕುರ್ಚಿಯಲ್ಲಿ ಕುಳಿತಲ್ಲೇ ಕುಳಿತೂ ಎರಡು ಸಾವಿರ ವರ್ಷ ಹಿಂದಿನ ‘ನಾಸ್ಕಾ’, ‘ಮೊಹೆಂಜೋ - ದಾರೋ’ಯಿಂದ ‘ಓಕ್ ದ್ವೀಪದ ದುಡ್ಡಿನ ಬಾವಿ’ವರೆಗೆ ಅಲೆಯಬಹುದು. ಈ ಶತಮಾನ ಮುಗಿಯುವುದರೊಳಗೆ ಇನ್ನೂ ಎಲ್ಲೆಲ್ಲಾ ಸುತ್ತಬೇಕಾಗಿದೆ, ಏನೆಲ್ಲಾ ನೋಡಬೇಕಾಗಿದೆ ಎಂಬುದನ್ನು ನೆನೆಸಿಕೊಂಡರೆ ಗಾಬರಿಯಾಗುತ್ತದೆ. ಖಭೌತ ವಿಜ್ಞಾನಿಗಳು ಕಾಲ ಒಮ್ಮುಖವಾಗಿ ಚಲಿಸುತ್ತದೆ ಎಂದು ಹೇಳುತ್ತಾರೆ. ಪುಸ್ತಕಗಳು ಈ ಹೇಳಿಕೆಯನ್ನು ಸುಳ್ಳು ಮಾಡಿ ಅದು ಅನೇಕಮುಖವಾಗಿ ಚಲಿಸುವುದನ್ನು ತೋರಿಸಿಕೊಡುತ್ತವೆ, ಕಲ್ಪನೆಯಲ್ಲಿ.



- ಕೆ.ಪಿ.ಪೂರ್ಣಚಂದ್ರ ತೇಜಸ್ವಿ



ಸರಣಿಯ ಒಂಬತ್ತನೆಯ ಪುಸ್ತಕ 'ದೇಶವಿದೇಶ - 1 '.

 

ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !