ದೇಶವಿದೇಶ - 2 (ಮಿಲನಿಯಮ್ - 10)

ದೇಶವಿದೇಶ - 2 (ಮಿಲನಿಯಮ್ - 10)

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಮರಳುಗಾಡಿನ ಬಗ್ಗೆ ಜನಜನಿತವಾಗಿರುವ ದುರಭಿಪ್ರಾಯವೇ ನನ್ನಲ್ಲೂ ಇತ್ತು ಮನುಷ್ಯನಿಗೆ ಸವಾಲಾಗಿರುವ ಮರಳುಗಾಡುಗಳು ನಿರಾಸೆ, ಕಷ್ಟಕಾರ್ಪಣ್ಯ, ದುಃಖ ಮತ್ತು ಸಾವನ್ನು ಸಂಕೇತಿಸುತ್ತದೆಂದು ನಾನು ಭಾವಿಸಿದ್ದೆ. ಅದರಲ್ಲಿ ಕುತೂಹಲಕರವಾದುದು ಏನೂ ಇರಲು ಸಾಧ್ಯವಿಲ್ಲವೆಂದೇ ತಿಳಿದಿದ್ದೆ. ಆದರೆ ಜಗತ್ತಿನ ಆಗುಹೋಗುಗಳಲ್ಲಿ ಮರಳುಗಾಡು ವಹಿಸಿರುವ ಪಾತ್ರ ನೋಡಿ ನನಗೆ ಅಚ್ಚರಿಯಾಯ್ತು! ಜಗತ್ತಿನ ಅನೇಕ ಮಹಾ ಚಿಂತನೆಗಳು ಹುಟ್ಟಿರುವುದು ಮರಳುಗಾಡಿನಿಂದಲೇ. ಬಹುಪಾಲು ಇವತ್ತಿನ ಧರ್ಮಗಳೆಲ್ಲಾ ಹುಟ್ಟಿರುವುದು ಮರಳುಗಾಡಿನಿಂದಲೇ. ಜಗತ್ತಿನ ಬಹಳಷ್ಟು ಪ್ರಾಚೀನ ನಾಗರಿಕತೆಗಳ ಉಗಮವೆಲ್ಲಾ ಮರಳುಗಾಡಿನಿಂದಲೇ ವಿಕಾಸವಾಗಿವೆ. ಅಲ್ಲದೆ ಜಗತ್ತಿನ ಅಪ್ರತಿಮ ವೀರಾಗ್ರಣಿಗಳು, ದಂಡನಾಯಕರು, ಯು್ದ್ದಕುಶಲಿಗಳು ಮರಳುಗಾಡಿನಿಂದಲೇ ಬಂದು ಚರಿತ್ರೆ ನಿರ್ಮಿಸಿರುವುದನ್ನು ಕಾಣುತ್ತೇವೆ. ಬಹುಶಃ ಮನುಷ್ಯ ಸುಖ, ಸಮೃದ್ಧಿ, ಸಂತೋಷಗಳ ನಡುವಿಗಿಂತ ಮೌನ, ಏಕಾಂತ, ಸವಾಲುಗಳ ನಡುವೆ ಮಹತ್ತಾದುದನ್ನು ಸಾಧಿಸುತ್ತಾನೇನೋ! ಅದರ ಮಹನ್ಮೌನದ ಏಕಾಂತದಲ್ಲಿ ಕುಳಿತು ಇಡೀ ಇಹದ ಅಂತಿಮ ಉದ್ದೇಶವನ್ನು ಚಿಂತಿಸಿ ಅಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಸತ್ಯಾನ್ವೇಷಣೆ ಮಾಡಿದ್ದಾನೇನೋ!

ಮರಳುಗಾಡಿನ ಗಾಂಭೀರ್ಯ, ಮಹಾ ವಿಸ್ತಾರ, ಜನವಿಹೀನ ಏಕಾಂತ ಅದಕ್ಕೊಂದು ವಿಚಿತ್ರ ಸೌಂದರ್ಯ ಮತ್ತು ಆಕರ್ಷಣೆಯನ್ನೀಯುತ್ತದೆ. ಈ ಕುರಿತ ನನ್ನ ಕುತೂಹಲ, ಅನ್ವೇಷಣೆಗಳ ಕೆಲವಷ್ಟನ್ನು ಇಲ್ಲಿ ನಿಮಗೆ ವಿವರಿಸಿದ್ದೇನೆ. ಒಂದಾನೊಂದು ಕಾಲದಲ್ಲಿ ಸಮೃದ್ಧ ಭೂಮಿಯಾಗಿದ್ದ ‘ಸಹರಾ’ ಅನಂತರ ಭೀಕರ ಮರಳುಗಾಡಾಗಿ ಪರಿವರ್ತನೆಯಾಗಿ ಈ ಪುಸ್ತಕದಾದ್ಯಂತ ವಿಸ್ತರಿಸಿರುವುದನ್ನು ಕಾಣುತ್ತೀರಿ.

- ಕೆ.ಪಿ.ಪೂರ್ಣಚಂದ್ರ ತೇಜಸ್ವಿ


ಸರಣಿಯ ಹತ್ತನೆಯ ಪುಸ್ತಕ 'ದೇಶವಿದೇಶ - 2 '.

 

ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !