ಮಹಾಯುದ್ಧ-ಭಾಗ-1-ಮಿಲೆನಿಯಮ್-6 (ಆಡಿಯೋ ಬುಕ್)

ಮಹಾಯುದ್ಧ-ಭಾಗ-1-ಮಿಲೆನಿಯಮ್-6 (ಆಡಿಯೋ ಬುಕ್)

Regular price
$5.99
Sale price
$5.99
Regular price
Sold out
Unit price
per 
Shipping does not apply

ಬರಹಗಾರ: ಪೂರ್ಣಚಂದ್ರ ತೇಜಸ್ವಿ

ಓದಿದವರು-  ಆದಿತ್ಯ ಭಾಗ್ವತ್

ಆಡಿಯೋ ಪುಸ್ತಕದ ಅವಧಿ 4 ಘಂಟೆ 18 ನಿಮಿಷ 

ಮಹಾ ಯುದ್ಧದ ಪರಿಣಾಮ ನಾಗರಿಕತೆಯ ಮೇಲೆ ಬೀರಿದ ಪ್ರಭಾವ ಏನು ಎಂಬುದು ಯೋಚಿಸಲು ಈ ಪುಸ್ತಕ ನೆರವಾಗುತ್ತದೆ.ಚರಿತ್ರೆಯಿಂದ ಮನುಷ್ಯ ಪಾಠ ಕಲಿಯುವುದು ನಿಜವೇ? ಈ ಪ್ರಶ್ನೆಗೆ ಉತ್ತರ ಯುದ್ದೋತ್ತರ ಜನಾಂಗ ಮಹಾಯುದ್ಧವನ್ನು ಅರ್ಥಮಾಡಿಕೊಳ್ಳುವುದರ ಮೇಲೆ ನಿಂತಿದೆ. ಯುದ್ಧದ ರೂಪರೇಷಗಳು, ಒಂದು ಕ್ಷುಲ್ಲಕ ಕಾರಣಕ್ಕೆ ಜರ್ಮನ್ ಸೈನ್ಯ ಪೋಲೆಂಡಿನ ಗಡಿ ಅತಿಕ್ರಮಿಸಿ ಯುದ್ದ ಶುರುಮಾಡುತ್ತದೆ, ಜರ್ಮನಿನ ಈ ದುಡುಕಿನ ಹೆಜ್ಜೆ ಎಂದಿಗೂ ಮರೆಯುವುದು ಸಾಧ್ಯವೇ ಇಲ್ಲ. ಇಂಗ್ಲೆಂಡಿನ ಮೇಲೆ ಜರ್ಮನಿಯ ಸತತ ದಾಳಿ ಮುಂದುವರಿಯುತ್ತಿದ್ದರು ಬ್ರಿಟನ್ನಿನ ಜನರು ಯಾವ ಕ್ಷಣದಲ್ಲಾದರೂ ಬೀಳಬಹುದಾದ ಬಾಂಬುಗಳಿಂದ ರಕ್ಷಣೆ ಪಡೆಯಲು ಇಂಗ್ಲೆಂಡಿನ ಸುರಂಗ ರೈಲ್ವೆ ಸುರಂಗಗಳಲ್ಲಿ ರಾತ್ರಿ ಆಶ್ರಯ ಪಡೆಯುತ್ತಿದ್ದರು. ಭೀಕರ ರಹಸ್ಯ ನೌಕೆ ಮಹಾಸಾಗರಗಳಲ್ಲಿ ಸಿಗುವ ಮಿತ್ರರಾಷ್ಟ್ರಗಳ ಹಡಗು ಗಳನ್ನೆಲ್ಲ ನಾಶಮಾಡಿ ಅವರ ಸರಕು ಮತ್ತು ಸುದ್ದಿ ಸಂಪರ್ಕವನ್ನು ಅಸ್ಥಿರಗೊಳಿಸಿ ಹಾಳುಮಾಡುವುದು ಈ ನೌಕೆಯ ಕೆಲಸ. ಅನಾಥರಕ್ಷಕರ ಭೂಗತ ಜಾಲ “ಜರ್ಮನ್ ನಾಜಿ ಸೈನಿಕರು ಮಕ್ಕಳನ್ನು ಯಾತನಾ ಶಿಬಿರಗಳಲ್ಲಿ ಕೊಲ್ಲಲು ಬಲತ್ಕಾರವಾಗಿ ಕರೆದೊಯ್ಯುತ್ತಿದ್ದರು. ರೈಲು ಗಾಡಿಗಳಲ್ಲಿ ತುಂಬಿ ಜರ್ಮನಿಗೆ ರವಾನಿಸಿದ ಹದಿನಾರು ಸಾವಿರ ಮಕ್ಕಳು ಏನಾದರೂ ಎಂದು  ಪ್ರಪಂಚಕ್ಕೆ ಇಂದಿಗೂ ಸರಿಯಾಗಿ ಗೊತ್ತಿಲ್ಲ, ಎಲ್ಲಾ ಯಹೂದಿ ಮಕ್ಕಳನ್ನು ಕೊಂದು ಜನಾಂಗವನ್ನ ಸರ್ವನಾಶ ಮಾಡಬೇಕೆನ್ನುವುದು ನಾಜಿಗಳ ಹಂಚಿಕೆ, ಫ್ರೆಂಚ್ ಜನರು ಹೆಚ್ಚಾಗಿ ಹಳ್ಳಿಯ ರೈತರು ಈ ಮಕ್ಕಳನ್ನು ರಕ್ಷಿಸಿದರು, ಫಾದರ್ ಚೈಲೇ, ಫಾದರ್ ಡುವಾ,  ಸೇರಿ ಸುಮಾರು 8 ಸಾವಿರ ಮಕ್ಕಳನ್ನು ರಕ್ಷಿಸಿದರು. ಯುದ್ದ ಮುಗಿದು ಫ್ರಾನ್ಸ್ ಮುಕ್ತವಾಗುವ ವೇಳೆಗೆ ಅಲ್ಲಿನ ಭೂಗತ ಜಾಲ ಸುಮಾರು 12,000 ಅನಾಥ ಜ್ಯೂ ಮಕ್ಕಳನ್ನು ನೋಡಿಕೊಳ್ಳುತ್ತಿತ್ತು, ಫ್ರಾನ್ಸ್ ಸರ್ಕಾರ ಅನಾಥ ಜ್ಯೂ ಮಕ್ಕಳನ್ನು ನೋಡಿಕೊಳ್ಳುವವರಿಗೆಲ್ಲಾ ಸಹಾಯ ಧನ ಕೊಡುವುದಾಗಿ ಪ್ರಕಟಿಸಿದಾಗ 12000 ಮಕ್ಕಳ  ಸ್ವೀಕರಿಸಲು ಒಬ್ಬರು ಮುಂದೆ ಬರಲಿಲ್ಲ …. ಕಳ್ಳ ನೋಟುಗಳ ಕದನ ಒಂದು ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡಲು ಯೋಜಿಸಿದೆ ಯೋಜನೆಗಳು, ಖೋಟಾ ನೋಟುಗಳ ಚಲಾವಣೆ 18 ಸಾವಿರ ಅಡಿ ಎತ್ತರದಿಂದ ಪ್ಯಾರಾಚೂಟ್ ಇಲ್ಲದೆ ಜಿಗಿದು ಬದುಕಿದ ಪ್ರಪಂಚದ ಏಕಮಾತ್ರ ವ್ಯಕ್ತಿ ನಿಕೋಲಸ್ ಇದು ಪ್ರಮಾಣಪತ್ರದಲ್ಲಿ ದಾಖಲಾಗಿದೆ. - ಶ್ರೀ ಶ್ರೀ ಗೌಡ ಪುಸ್ತಕ ಪ್ರೇಮಿ ಬ್ಲಾಗ್ ವಿಮರ್ಶೆ