ಮಿಂಚುಳ್ಳಿ

ಮಿಂಚುಳ್ಳಿ

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರ: ಪೂರ್ಣಚಂದ್ರ ತೇಜಸ್ವಿ

 

ನಾನು ಪುಸ್ತಕದಂಗಡಿಗೆ ಹೋದರೆ ಕನಿಷ್ಠ ಪಕ್ಷ ಒಂದು ಪುಸ್ತಕವಾದರೂ ತೇಜಸ್ವಿಯವರ ಪುಸ್ತಕವಿರಬೇಕು ಆಗಲೇ ನನಗೆ ಪುಸ್ತಕ ಕೊಂಡ ಸಮಾಧಾನವಾಗುವುದು… ಅಂತೆಯೇ “ಮಿಂಚುಳ್ಳಿ” ಕೈಗೆ ತೆಗೆದು, ಒಳಗೆ ತಿರುವಿದಾಗ ಮಾರ, ಪ್ಯಾರನೆಂಬ ನಾಮಗಳು ಗೊಚರವಾದದ್ದೆ ತಡ.. ಈ ಪುಸ್ತಕವನ್ನು ಬಿಲ್ ಮಾಡಿಸಿದೆ… 

ನನ್ನ ಅನಿಸಿಕೆಯಂತೆಯೇ ಅದ್ಬುತ ಮತ್ತು ಸೊಗಸಾದ ಪುಸ್ತಕವಿದು. ಇದರಲ್ಲಿ ಎರಡು ಮಾತಿಲ್ಲ. “ಮಿಂಚುಳ್ಳಿ” ತುಂಬಾ ಉತ್ಸಾಹದಿಂದ ಓದಲು ಕುಳಿತೆ, ನನ್ನ ನಿರೀಕ್ಷೆಯನ್ನು ದ್ವಿಗುಣಗೊಳಿಸಿತು. ಮತ್ತೊಂದು ಕರ್ವಾಲೋ, ಪರಿಸರದ ಕಥೆಗಳು, ಮಾಯಾಲೋಕದ ಮುಂದುವರಿದ ಭಾಗದಂತಿತ್ತು. ಮಾರ, ಪ್ಯಾರ, ಕಿವಿ ಪಾತ್ರಗಳನ್ನು ಕಂಡು ಅತ್ಯಾನಂದವಾಯಿತು. ಪ್ರಪಂಚದಲ್ಲಿ ಮಿಂಚುಳ್ಳಿಗಳು ಎಂಭತ್ತನಾಲ್ಕು ಬಗೆಗಳಿವೆಯಂತೆ. ನಮ್ಮ ಭಾರತ ಮತ್ತು ಮಧ್ಯ ಏಷ್ಯಾದಲ್ಲಿ ಅರವತ್ತನಾಲ್ಕು ಬಗೆಗಳಿವೆ.. ಆಫ್ರಿಕಾದಲ್ಲಿ ಹದಿನೈದು ಬಗೆಗಳು. ಒಟ್ಟಾರೆ ಮಿಂಚುಳ್ಳಿಗಳಲ್ಲೂ ಎರಡು ವಿಧಗಳು.. ಒಂದು ನೀರಿನ ಮಿಂಚುಳ್ಳಿಗಳು, ಕಾಡಿನ ಮಿಂಚುಳ್ಳಿಗಳು… ನೀರಿನ ಮಿಂಚುಳ್ಳಿಗೆ ಮೀನುಗಳು ಆಹಾರವಾದರೆ.. ಕಾಡಿನ ಮಿಂಚುಳ್ಳಿಗಳು ಹುಳ, ಹುಪ್ಪಟೆಗಳೇ ಆಹಾರ… ಹೀಗೆಯೇ ಆ ಹಕ್ಕಿಯ ಬಗ್ಗೆಯ ಸಾಕಷ್ಟು ವಿವರಗಳಿವೆ… ಅವುಗಳ ಆಹಾರ ಪದ್ದತಿ, ಮೊಟ್ಟೆಯ ಆಕಾರ, ಹಾರುವ ವಿಧ, ನಡೆದಾಡುವ ರೀತಿ, ಅವುಗಳ ಬಣ್ಣ, ಗೂಡು,ಪಾದ,ಕೊಕ್ಕಿನ ಆಕಾರ ಮತ್ತು ಅವುಗಳ ಆಹಾರನ್ವೇಷಣಾ ಕ್ರಮ… ಇವೆಲ್ಲವನ್ನು ಅದ್ಬುತವಾಗಿ ಚಿತ್ರಿಸಿದ್ದಾರೆ.

- ದೇವಿಶ್ರೀ ಪ್ರಸಾದ್, ಪುಸ್ತಕಪ್ರೇಮಿ ಬ್ಲಾಗ್ ವಿಮರ್ಶೆ

 

ಪುಟಗಳು: 150

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !