ನನ್ನ ತೇಜಸ್ವಿ

ನನ್ನ ತೇಜಸ್ವಿ

Regular price
$11.99
Sale price
$11.99
Regular price
Sold out
Unit price
per 
Shipping does not apply

ಬರೆದವರು: 

ರಾಜೇಶ್ವರಿ ತೇಜಸ್ವಿ

 

ರಾಜೇಶ್ವರಿ ತೇಜಸ್ವಿಯವರು ಬರೆದಿರುವ "ನನ್ನ ತೇಜಸ್ವಿ" ಪುಸ್ತಕ ಓದಿ ಮುಗಿಸುವಾಗ ಕನ್ನಡದ ಹೆಸರಾಂತ ಬರಹಗಾರ ಪೂರ್ಣಚಂದ್ರ ತೇಜಸ್ವಿ(೧೯೩೮-೨೦೦೭) ಯವರ ಬದುಕು ವ್ಯಕ್ತಿತ್ವಗಳ ಒಂದು ಆತ್ಮೀಯ ಪರಿಚಯದ ಅನುಭವವಾಗುತ್ತದೆ. ತೇಜಸ್ವಿಯವರ ಬಗ್ಗೆ, ಅವರ ವಿಶಿಷ್ಟ ಸ್ವಭಾವದ ಬಗ್ಗೆ ಮೊದಲೇ ಸಾಕಷ್ಟು ಕೇಳಿರುವವರಿಗೂ ಈ ಪುಸ್ತಕ ಹಲವು ಹೊಸ ಮಾಹಿತಿ ಸಂಗತಿಗಳನ್ನು ಒದಗಿಸುತ್ತದೆ. ಮೈಸೂರು ಮಾನಸಗಂಗೋತ್ರಿಯಲ್ಲಿ ಸ್ನಾತಕೋತ್ತರ ತರಗತಿಯಲ್ಲಿ ಅವರ ಸಹ ಶಿಕ್ಷಣಾರ್ಥಿಯಾಗಿ, ಸ್ನೇಹಿತೆಯಾಗಿ, ನಂತರದಲ್ಲಿ ಅವರ ಮಡದಿಯಾಗಿ ಅವರೊಂದಿಗಿನ ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ಸಾಂಗತ್ಯದ ಅನುಭವವನ್ನು ರಾಜೇಶ್ವರಿಯವರು ಈ ಪುಸ್ತಕದ ಮೂಲಕ ಕನ್ನಡದ ಓದುಗರೊಂದಿಗೆ ಹಂಚಿಕೊಂಡಿರುವ ಬಗೆ ಅನನ್ಯ.

- ಶ್ರೀಕನ್ನಡ ಬ್ಲಾಗ್ ವಿಮರ್ಶೆ

https://srikannadi.blogspot.com/2012/12/blog-post_26.html



ಕಾಡಿನ ಬದುಕಿನ ಅನೇಕ ವಿಸ್ಮಯಗಳನ್ನು ಬರವಣಿಗೆಯ ಮೂಲಕ ತೆರೆದಿಟ್ಟ ತೇಜಸ್ವಿ ಅವರ ಬದುಕು ನಮಗೆಲ್ಲ ಅಚ್ಚರಿ ಮತ್ತು ವಿಸ್ಮಯಗಳ ಸಂಗತಿ. ಕೊನೆಗೂ 'ನನ್ನ ತೇಜಸ್ವಿ' ಪುಸ್ತಕದ ಮೂಲಕ ಶ್ರೀಮತಿ ರಾಜೇಶ್ವರಿ ಅವರು ಆ ಎಲ್ಲ ಕುತೂಹಲಗಳಿಗೆ ಉತ್ತರಿಸಿದ್ದಾರೆ. ಒಂದರ್ಥದಲ್ಲಿ ಇದು ತೇಜಸ್ವಿ ಅವರ ಆತ್ಮಕಥೆ.

- ಮನದ ಮಾತು ಬ್ಲಾಗ್ ವಿಮರ್ಶೆ

https://manadamatu-rvk.blogspot.com/2013/03/blog-post_25.html


 

ಪುಟಗಳು: 572

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ