ಪರಿಸರದ ಕಥೆ

ಪರಿಸರದ ಕಥೆ

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಕನ್ನಡದ ಸಾರ್ವಕಾಲಿಕ ಶ್ರೇಷ್ಟ ಪುಸ್ತಕಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರ "ಪರಿಸರದ ಕತೆ"ಯೂ ಒಂದು ಎನ್ನಲು ಯಾವುದೇ ಹಿಂಜರಿಕೆ ಬೇಡ ಅನ್ನಿಸುತ್ತದೆ. ಪರಿಸರದ ಮೇಲೆ ಸ್ವಲ್ಪವಾದರೂ ಆಸಕ್ತಿ ಇರುವವರಿಗಂತೂ, ಈ ಪುಸ್ತಕವನ್ನು ಎಷ್ಟು ಬಾರಿ ಓದಿದರೂ ತೃಪ್ತಿ ಸಿಗಲಾರದು. ಅಥವಾ ನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ಪುಸ್ತಕದಲ್ಲಿ ತೇಜಸ್ವಿಯವರು ಗುರುತಿಸಿ, ದಾಖಲಿಸಿರುವ ಪರಿಸರದ ವ್ಯಾಪಾರಗಳನ್ನು ಎಷ್ಟು ಬಾರಿ ಓದಿದರೂ ಬೇಸರವಾಗದು. ಬದಲಿಗೆ ಒಂದೊಂದು ಹೊಸ ಓದಿನಲ್ಲೂ, ಹೊಸ ಹೊಸ ಅರ್ಥಗಳು ಸ್ಪುರಿಸುವಂತಹ ಸಂದರ್ಭ ಈ ಪುಸ್ತಕದ ಓದಿನಲ್ಲಿ ಎದುರಾದೀತು. 

‘ಪರಿಸರದ ಕತೆ’ಕೃತಿ ಕನ್ನಡದ ಅತ್ತ್ಯುತ್ತಮ ಕೃತಿಗಳಲ್ಲೊಂದು. ಕನ್ನಡ ಸಾಹಿತ್ಯದ ಯಾವುದೇ ಪ್ರಾಕಾರ ಅಥವಾ ವಿಭಜನೆಗಳಿಗಿಂತ ಭಿನ್ನವಾದ ಕೃತಿ. ಕಥೆ, ಪ್ರಬಂಧ ಇತ್ಯಾದಿ ಸ್ಪಷ್ಟ ವಿಭಜನೆಗೆ ಒಳಪಡದ ಕೃತಿ. ತೇಜಸ್ವಿಯವರು ತಮ್ಮ ಬಾಲ್ಯದಿಂದಲೂ ಮತ್ತು ಕೃಷಿ ಆರಂಭಿಸಿದ ದಿನಗಳಲ್ಲೂ, ತಮ್ಮ ಪರಿಸರದ ಬಗೆಗಿನ ಕುತೂಹಲ, ವಿಸ್ಮಯ, ಅನುಭವಗಳನ್ನು ಪುಸ್ತಕದ ಹದಿನಾಲ್ಕು ಅಧ್ಯಾಯಗಳಲ್ಲಿ ವಿವರಿಸುತ್ತಾರೆ. ಮಾರ, ಪ್ಯಾರ, ಕಿವಿ ಎಂಬ ಸಾಕು ನಾಯಿ, ಎಂಗ್ಟ, ಮಾಸ್ತಿ, ಬೈರ, ಸುಸ್ಮಿತ, ಗಾಡ್ಲಿ, ಸೀನಪ್ಪ, ಮುಂತಾದ ಪಾತ್ರಗಳು ನಮಗೂ ಆಪ್ತವಾಗುವಂತೆ ತೇಜಸ್ವಿಯವರು ವಿಶಿಷ್ಟ ಶೈಲಿಯಿಂದ ನಿರೂಪಿಸಿದ್ದಾರೆ. ‘ಪ್ರಕೃತಿಯೆಂದರೆ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗ’ ಎಂಬ ತೇಜಸ್ವಿಯವರ ಮಾತಿಗೆ ‘ಪರಿಸರದ ಕತೆ’ ಉತ್ತಮ ಉದಾಹರಣೆ.

ನಮ್ಮ ಸುತ್ತಲಿನ ಪರಿಸರದ ವ್ಯಾಪಾರಗಳಲ್ಲಿ ಇಂದಿಗೂ ಅದೆಷ್ಟೋ ವಿವರಗಳನ್ನು ನಾವಿನ್ನೂ ಪೂರ್ತಿಯಾಗಿ ಅರಿತಿಲ್ಲ. "ಪರಿಸರದ ಕತೆಯಲ್ಲಿ ಇರುವ ಒಂದು ಬರಹ "ಮೂಲಿಕೆ ಬಳ್ಳಿಯ ಸುತ್ತದಲ್ಲಿ ಲೇಖಕರು ಅಚ್ಚರಿಯಿಂದ ದಾಖಲಿಸುವ ವಿವರಗಳುಆ ಬಳ್ಳಿಯ ರಹಸ್ಯಮಯ ಅಸ್ತಿತ್ವವನ್ನು ಮತ್ತು ಹಳ್ಳಿಯವರು ಆ ಬಳ್ಳಿಯ ಸುತ್ತಲೂ ಹಬ್ಬಿಸಿರುವ ಉಹಾಪೋಹಗಳ ಕೋಟೆಯನ್ನೇ ಬಿಚ್ಚಿಡುತ್ತದೆವೈದ್ಯರು ವಾಸಿಮಾಡಲಾಗದ ರೋಗಗಳನ್ನು ಮೂಲಿಕೆ ಬಳ್ಳಿ ವಾಸಿ ಮಾಡುತ್ತದೆಂಬ ಹಳ್ಳಿ ಜನರ ಮೂಢ ನಂಬಿಕೆಯೋನಂಬಿಕೆಯೋ ಒಂದೆಡೆಯಾದರೆಮೂಲಿಕೆ ಬಳ್ಳಿಯಿಂದ ಹಲವು ರೋಗಗಳು ನಿಜಕ್ಕೂ ವಾಸಿಯಾಗುವ ವಾಸ್ತವಗಳು ಇನ್ನೊಂದೆಡೆಅದರ ಗಡ್ಡೆಯ ಚೂರನ್ನು ಕುತೂಹಲಕ್ಕೆಂದು ಲೇಖಕರು ತಿಂದರಂತೆಅದರಿಂದ ಆದ ಪರಿಣಾಮ ಅವರಿಗೇ ಅಚ್ಚರಿ ತಂದಿತು - " ನನಗೆ ಬಲಗಾಲು ಹಿಮ್ಮಡಿ ಅನೇಕ ದಿನಗಳಿಂದ ನೋಯುತ್ತಿತ್ತುಹೆಚ್ಚಿಗೆ ದೂರ ನಡೆದರೆ ಸಾಕುಕುಂಟಿಕೊಂಡೇ ನಡೆಯಬೇಕಿತ್ತುಇದರೊಡನೆಈಚೆಗೆ ಹಿಮ್ಮಡಿ ಎಲುಬಿನ ಪಕ್ಕ ಒಂದು ದಪ್ಪ ಗಡ್ಡೆ ಎದ್ದಿತ್ತುಡಾಕ್ಟರು ಅದನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯಬೇಕೆಂದು ಹೇಳಿದ್ದರು. . . . . . ಆ ಗಡ್ಡೆ ಚೂರು ತಗೊಂಡುತಿಂದ ಮೇಲೆ ಎರಡು ದಿನಕ್ಕೆ ನೋಡುತ್ತೇನೆಆ ಗಡ್ಡೆ ಎಲ್ಲಿತ್ತೆಂದು ಪತ್ತೆ ಮಾಡಲಾಗದಂತೆ ಮಂಗ ಮಾಯವಾಗಿತ್ತುಇದು ಮೂಲಿಕೆಬಳ್ಳಿಯ ಪ್ರಭಾವ ಎಂದು ಹೇಗೆ ಖಚಿತವಾಗಿ ಹೇಳಲಿಕೇವಲ ಆಕಸ್ಮಿಕ ಇದ್ದರೂ ಇರಬಹುದುಅಥವಾ ಮೂಲಿಕೆ ಬೀಳಿನದೇ ಪ್ರಭಾವ ಎಂದಾದರೂದೇಹದಲ್ಲಿ ಉಂಟಾಗುವ ಗಡ್ಡೆಗಳಲ್ಲಿ ಅನೇಕ ತರದವು ಇವೆಇವುಗಳಲ್ಲಿ ಕೆಲವು ಗಡ್ಡೆಗಳ ಮೇಲೆ ಮಾತ್ರ ಮೂಲಿಕೆ ಬಳ್ಳಿ ಪ್ರಭಾವ ಬೀರಬಹುದುಇವುಗಳನ್ನೆಲ್ಲಾ ಯಾರು ಸಂಶೋಧಿಸುವರು?"  ಈ ರೀತಿಯ ಜಿಜ್ಞಾಸೆಯನ್ನು ಓದುಗರಲ್ಲೂ ಹುಟ್ಟುಹಾಕುವ ಈ ಪುಸ್ತಕದ ಬರಹಗಳುಕನ್ನಡ ಸಾಹಿತ್ಯದಲ್ಲೇ ಅನನ್ಯ.

  

ಕೃಪೆ - ವಿಕಿಪೀಡಿಯ, ಸಂಪದ

 

ಪುಟಗಳು: 146

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !