ರುದ್ರಪ್ರಯಾಗದ ಭಯಾನಕ ನರಭಕ್ಷಕ

ರುದ್ರಪ್ರಯಾಗದ ಭಯಾನಕ ನರಭಕ್ಷಕ

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಬದರೀನಾಥ ಹಾಗೂ ಕೇದಾರನಾಥಕ್ಕೆ ದಾರಿಯು ರುದ್ರಪ್ರಯಾಗದಲ್ಲಿ ಕವಲೊಡೆಯುತ್ತದೆ. ಅದೇ ಬದರೀನಾಥದಲ್ಲಿ ಉಗಮವಾಗುವ ಅಲಕನಂದ ಹಾಗೂ ಕೇದಾರನಾಥದಲ್ಲಿ ಜನಿಸುವ ಮಂದಾಕಿನಿ ನದಿಗಳು ರುದ್ರಪ್ರಯಾಗದಲ್ಲಿ ಸಂಗಮವಾಗುತ್ತವೆ.ಅಲಕನಂದ ಹಾಗೂ ಮಂದಾಕಿನಿ ನದಿಗಳು ಸಂಗಮವಾಗುವ ತಾಣ ರುದ್ರಪ್ರಯಾಗ. ಸುಮಾರು 425ಕ್ಕೂ ಹೆಚ್ಚು ಜನರನ್ನು ಕೊಂದಿತ್ತೆಂದು ಹೇಳಲಾದ ರುದ್ರಪ್ರಯಾಗದ ನರಭಕ್ಷಕ ಎಂದೇ ಖ್ಯಾತಿ ಹೊಂದಿದ ಒಂದು ಚಿರತೆಯ ಬಗ್ಗೆ ಇಂಗ್ಲಿಷಿನಲ್ಲಿ ಬಂದ Man Eating Leopard of Rudraprayag ಎಂಬ ರೋಚಕ ಕತೆಯನ್ನು ಅನುವಾದಿಸಿ ರುದ್ರಪ್ರಯಾಗದ ಭಯಾನಕ ನರಭಕ್ಷಕ ಎನ್ನುವ ಹೆಸರಿನ ಪುಸ್ತಕವನ್ನು ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು ಬರೆದಿದ್ದಾರೆ. ಮೊದಲಿಗೆ ಬೆಂಜಿ ಎಂಬ ಗ್ರಾಮದ ಅಮಾಯಕನನ್ನು ಬಲಿ ತೆಗೆದುಕೊಂಡ ಆ ಚಿರತೆಯು ನರಭಕ್ಷಕನಾಗಿ ಮಾರ್ಪಟ್ಟು ತನ್ನ ಪರಿಸರದ ಜನರನ್ನು ಭೀತಿಯಲ್ಲಿ ಮುಳುಗಿಸಿತು. ಹಸಿವು ತಾಳದಾದಾಗ ಆ ಚಿರತೆ ಮನೆಗಳ ಬಳಿಸಾರಿ ಬಾಗಿಲನ್ನು ತನ್ನ ಪಂಜದಿಂದ ಕೆರೆಯುತ್ತಿತ್ತಂತೆ, ಕಿಟಕಿಗಳಲ್ಲಿ ಇಣುಕುತ್ತಿತ್ತಂತೆ, ಗುಡಿಸಲುಗಳನ್ನು ಧ್ವಂಸ ಮಾಡುತ್ತಿತ್ತಂತೆ. ನರಭಕ್ಷಕ ಚಿರತೆ ಮೃಗವಲ್ಲ; ಪಿಶಾಚಿ ಎಂದೇ ನಂಬಿದ್ದ ರುದ್ರಪ್ರಯಾಗದ ಜನರನ್ನು ಕಾಪಾಡಿದ್ದು ಕಾರ್ಬೆಟ್. ಅಂದಿನ ಬ್ರಿಟಿಷ್ ಸಂಸತ್ತು ಈ ಕುರಿತು ಒಂದು ನಿರ್ಣಯ ಅಂಗೀಕರಿಸಿ ಜಿಮ್ ಕಾರ್ಬೆಟ್ಟನಿಗೆ ಆ ನರಭಕ್ಷಕ ಚಿರತೆಯನ್ನು ಬೇಟೆಯಾಡುವಂತೆ ವಿನಂತಿಸಿತೆಂದು ಹೇಳಲಾಗುತ್ತದೆ. ಹೀಗೆ ರುದ್ರಪ್ರಯಾಗಕ್ಕೆ ಬಂದಿಳಿಯುವ ಜಿಮ್ ಕಾರ್ಬೆಟ್, ಎರಡು ವರ್ಷಗಳ ಕಾಲ ಚಿರತೆ ಬೇಟೆಗೆ ಪ್ರಯತ್ನಿಸುತ್ತಾರೆ. ಒಂದೆರಡು ಸಲ ವಿಫಲರಾಗುತ್ತಾರೆ. ಕೊನೆಗೆ ಬೇಟೆಯಲ್ಲಿ ಸಫಲರಾಗುತ್ತಾರೆ. ಅಂದು ರುದ್ರಪ್ರಯಾಗದ ನಿವಾಸಿಗಳ ಹರ್ಷಕ್ಕೆ ಮೇರೆಯೇ ಇರಲಿಲ್ಲ. ಅವನನ್ನು ಒಬ್ಬ ಸಾಧು ಎಂದು ಪರಿಗಣಿಸಿರುವ ಇಲ್ಲಿನ ಜನರು ಆತ ಆ ನರಭಕ್ಷಕ ಚಿರತೆಯನ್ನು ಕೊಂದ ದಿನವನ್ನು ಇಂದಿಗೂ ಸಂಭ್ರಮದ ಜಾತ್ರೆಯಾಗಿ ಆಚರಿಸುತ್ತಾರೆ.

 

ಕೃಪೆ - ವಿಕಿಪೀಡಿಯ

 

ಪುಟಗಳು: 158

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !