ವಿಸ್ಮಯ - 1

ವಿಸ್ಮಯ - 1

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರರು: ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆ

 

'ಬ್ರಹ್ಮಾಂಡದ ಹಿನ್ನೆಲೆಯಲ್ಲಿ ಪರಿಸರ', 'ಜೀವಸ್ಟರದ ಅನಂತ ವೈವಿಧ್ಯಗಳು', 'ಸೌರಶಕ್ತಿಯ ವಿಶ್ವರೂಪ' ಎಂಬ ಮೂರು ಉಪ ವಿಭಾಗಗಳಲ್ಲಿ ಇಲ್ಲಿನ ಬರಹಗಳಿವೆ. ಬ್ರಹ್ಮಾಂಡ ಹುಟ್ಟಿದ್ದು ಹೇಗೆ, ಗಿಡಮರ ಪ್ರಾಣಿಗಳು ಹುಟ್ಟಿದ್ದು ಹೇಗೆ? ಬಿಸಿಲು, ಪರಿಸರ, ಮರುಭೂಮಿ, ಬೆಂಕಿ ಇವೆಲ್ಲದರ ನಡುವಿನ ಸಂಬಂಧಗಳನ್ನು ಚರ್ಚಿಸುತ್ತಾ ಪರಿಸರ ವಿಜ್ಞಾನದ ಪರಿಚಯ, ಮನುಷ್ಯ ಮತ್ತು ಪರಿಸರದ ನಡುವಿನ ಹೊಂದಾಣಿಕೆಯ ಬಾಳಿನ ಮಹತ್ವ ಈ ಕೃತಿ ಸಾರುತ್ತದೆ. ತೇಜಸ್ವಿಯವರು ಪ್ರದೀಪ ಕೆಂಜಿಗೆಯವರೊಂದಿಗೆ ಸೇರಿ ರಚಿಸಿದ್ದಾರೆ.

ಈಗಿನ ಆಧುನಿಕ ಬದುಕಿನಲ್ಲಿ ಯಾರಿಗೂ ಯಾವ ವಿಷಯದ ಬಗ್ಗೆಯೂ ಆಸಕ್ತಿಯಿಲ್ಲ. ಎಲ್ಲರೂ ಕಣ್ಣಿಗೆ ಕಡಿವಾಣ ಹಾಕಿರುವ ಕುದುರೆಯಂತೆ ಅವರವರ ದಾರಿಯಲ್ಲಿ ಅವರವರು ವೇಗವಾಗಿ ಓಡುತ್ತಿದ್ದಾರೆ… ಈ ವೇಗದ ಬದುಕಿನಿಂದ ಹೊರ ಬಂದು ನೋಡಿದರೆ ತಿಳಿಯುವುದು ಜಗತ್ತು ಎಷ್ಟು ವಿಸ್ಮಯಕಾರಿಯೆಂದು…

ಭೂಮಿ ಹೇಗೆ ಹುಟ್ಟಿತ್ತು? ಅದಕ್ಕೆ ಸಾವು ಇದೇಯೇ?… ಸೌರವ್ಯೂಹ ಹೇಗೆ ರಚನೆಯಾಯಿತು? ಗ್ರಹಗಳೇಕೆ ಸೂರ್ಯನ ಸುತ್ತ ಅದೂ ನಿಖರವಾಗಿ ಒಂದೇ ರೀತಿಯಲ್ಲಿ ತಿರುಗುತ್ತಿವೆ?… ಗ್ರಹಗಳು ಹೇಗೆ ಉಂಟಾದವು?.. ನಮಗೆಲ್ಲಾ ನಮ್ಮ ವಯಸ್ಸೆಷ್ಟೆಂದು ಗೊತ್ತು… ಅದೇ ರೀತಿ ಭೂಮಿಯ ವಯಸ್ಸೆಷ್ಟು?.. ಭೂಮಿ ಹೇಗೆ ಹುಟ್ಟಿತ್ತು?… ಅದರಲ್ಲಿ ಜೀವಿಗಳು ಹೇಗೆ ರೂಪುಗೊಂಡವು?.. ಸಣ್ಣ ಸೂಕ್ಷ್ಮಾಣುಜೀವಿಯಿಂದ ಹಿಡಿದು ಬೃಹಾದಕಾರದವರೆಗಿನ ಪ್ರಾಣಿಗಳು ಹೇಗೆ ರೂಪುಗೊಂಡವು?… ಮರುಭೂಮಿ ಹೇಗೆ ಉಂಟಾಯಿತು?… ಮರುಭೂಮಿ ಒಳಗೆ ಹಿಮನದಿ ಇರುವುದು ನಿಜವೇ?… ಚಳಿಯೇ ತುಂಬಿರುವ ಪ್ರದೇಶದಲ್ಲಿ ಪ್ರಾಣಿಗಳ ವಾಸ ಹೇಗೆ?.. ಹಿಮಾಚಲ ಪರ್ವತವೂ ಉಂಟಾದದ್ದು ಹೇಗೆ?… ಹೀಗೆಯೇ… ಹೇಗೆ ಹೇಗೆ ಎಂದು ಹಲವಾರು ಪ್ರಶ್ನೆಗಳನ್ನು ಯಾರೂ ಬೇಕಾದರೂ ಕೇಳಬಹುದು… ಆದರೆ ಉತ್ತರ…..?

ಈ ಜಗತ್ತಿನ ರಹಸ್ಯಗಳನ್ನು ಇಂದಿಗೂ ಭೇದಿಸಲು ವಿಜ್ಞಾನಿಗಳು ಸತತ ಪ್ರಯತ್ನ ಮಾಡುತ್ತಲೇ ಇದ್ದಾರೆ… ನಮ್ಮ ತೇಜಸ್ವಿಯವರು ಬರೆದಿರುವ ವಿಸ್ಮಯ(1)ನ್ನು ಓದಿದೆ… ಒಂದೊಂದು ಅಧ್ಯಾಯವನ್ನು ಓದಿದ ನಂತರ ಒಂದೈದು ನಿಮಿಷಗಳ ಕಾಲ ಕಣ್ಣನ್ನು ಮುಚ್ಚಿ ಆಲೋಚಿಸಿದರೆ…. ಮೈ ಪುಳಕಗೊಳ್ಳುತ್ತದೆ… ಎಂತಹ ವಿಸ್ಮಯದ ಜಗತ್ತಿದು… ಅಬ್ಬಾ…. ನಾನು ತರಗತಿಗಳಲ್ಲಿ ಕಲಿತದ್ದು ಬರೀ ಸಾಮಾನ್ಯವಿಜ್ಞಾನ ಎಂದೆನಿಸಿತು… ವಿಸ್ಮಯ(1)ನ್ನು ಓದುತ್ತಾ ಓದುತ್ತಾ ಹೋದಂತೆ ಬೇರೊಂದು ಲೋಕದೊಳಗೆ ಸಂಚರಿಸಿದ ಅನುಭವ ನನಗೆ…. ಇಂದಿಗೂ ನನ್ನ ಒಳ ಮನಸ್ಸಿನಲ್ಲಿ ಇದೇ ರೀತಿಯ ಹಲವು ಪ್ರಶ್ನೆಗಳಿವೆ… ಅದಕ್ಕೆ ಉತ್ತರಗಳನ್ನು ಹುಡುಕುವ ಹಂಬಲದಿಂದ ಈ ರೀತಿಯ ಜ್ಞಾನದ ಪುಸ್ತಕಗಳನ್ನು ಓದುವ ಆಸೆ ನನ್ನದು….

-ದೇವಿ ಶ್ರೀ ಪ್ರಸಾದ್
(ಪುಸ್ತಕ ಪ್ರೇಮಿ ಬ್ಲಾಗ್ ವಿಮರ್ಶೆ)
 


ಪುಟಗಳು: 104

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !