ವಿಸ್ಮಯ ವಿಶ್ವ - 1 (ಮಿಲನಿಯಮ್ - 13)

ವಿಸ್ಮಯ ವಿಶ್ವ - 1 (ಮಿಲನಿಯಮ್ - 13)

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಈ ಜಗತ್ತು ವಿಸ್ಮಯಗಳ ಅಕ್ಷಯ ಪಾತ್ರೆಯಾಗಿ ಕಾಣಿಸುತ್ತಿದೆ! ನಾಗರಿಕ ಜಗತ್ತಿನ ಭೂಖಂಡಗಳಿಂದ ಬೇರ್ಪಡಿಸಲ್ಪಟ್ಟಿದ್ದ ಪುಟ್ಟ ಕೊಮೋಡೋ ದ್ವೀಪದಲ್ಲಿ ಬದುಕಿರುವ ಮಹಾಕಾಯದ ಡ್ರೇಗನ್‌ಗಳು ಹತ್ತೊಂಬತ್ತನೆ ಶತಮಾನದ ಆದಿಯವರೆಗೂ ಯಾರಿಗೂ ಗೊತ್ತಿರಲಿಲ್ಲವೆಂಬುದು ವಿಸ್ಮಯ. ಆಗ್ನೇಯ ಏಷ್ಯಾದಾದ್ಯಂತ ಅವರ ಕಲೆ ಪುರಾಣ ಸಾಹಿತ್ಯಗಳಲ್ಲೆಲ್ಲಾ ಕಂಡುಬರುವ ಈ ಜೀವಿಗಳು ಎಲ್ಲಿದ್ದಾವೆಂದು ಗೊತ್ತಿಲ್ಲದಷ್ಟು ಹೇಗೆ ಅಪರಿಚಿತವಾಗಿ ಉಳಿದುವು ?

ರಷ್ಯಾದ ಕ್ರಾಂತಿಯ ಸಮಯದಲ್ಲಿ ನಡೆದ ಕಗ್ಗೊಲೆಗಳೂ ನಮಗೆ ವಿಷಾದವ ನ್ನುಂಟುಮಾಡುತ್ತವೆ. ಅದೂ ಕಮ್ಯುನಿಸ್ಟ್ ಸೋವಿಯತ್ ರಷ್ಯಾ ಕುಸಿದು ಬಿದ್ದನಂತರ ಸಿಂಹಾವಲೋಕನ ಮಾಡಿದರೆ ಚರಿತ್ರೆಯ ಅಪಹಾಸ್ಯವನ್ನು ಕುಡು ವಿಸ್ಮಯ ಪಡುವಂತಾಗುತ್ತದೆ.

ನೌರು ದ್ವಿಪದ ತೆಂಗಿನ ಚಾಪೆಯ ಬಟ್ಟಿ ಉಟ್ಟುಕೊಂಡು ಆನಂದವಾಗಿ ಬದುಕುತ್ತಿದ್ದ ನಾನೂರು ಕಾಡುಜನರ ಕುಟುಂಬಗಳು ರಾತ್ರೋರಾತ್ರಿ ಕೋಟ್ಯಾಧಿಪತಿಗಳಾಗಿದ್ದು, ಆ ದುಡ್ಡಿನ ಮಹಾಪೂರದಲ್ಲಿ ನೆಮ್ಮದಿ ಆರೋಗ್ಯ ಎಲ್ಲವನ್ನೂ ಕಳೆದುಕೊಂಡಿದ್ದು, ನಮ್ಮನ್ನು ಬೆಚ್ಚಿ ಬೀಳಿಸುವ ವಿಸ್ಮಯ!

ಚಕ್ರವರ್ತಿಯ ಮಗಳಾದ ಅನಾಸ್ತಾಷಿಯಳನ್ನು ಯಾರೂ ನಂಬದ ಐತಿಹಾಸಿಕ ಸಂದರ್ಭ ಸುತ್ತುವರಿದು, ಕ್ರೂರ ಕೊಲೆಗಡುಕರಿಂದ ಪಾರಾಗಿ ಜೀವ ಉಳಿಸಿಕೊಂಡವಳು ಕೊನೆಗೆ ಆತ್ಮಹತ್ಯೆಗೆಳಸುವುದು ನ್ತಮ್ಮನ್ನು ಭಯಚಕಿತರನ್ನಾಗಿ ಮಾಡುವ ವಿಸ್ಮಯ!

ಟುರಿನ್ ಶಾಲಿನ ಮೇಲೆ ಮೂಡಿರುವ ಚಿತ್ರ ವಂಚನೆಯೇ? ಎಂದು ಪತ್ತೆ ಮಾಡಲು ಕೈಹಾಕಿ ಬಗೆಹರಿಸಲಾಗದಂಥ ಗೋಜಲಿಗೆ ವಿಜ್ಞಾನ ಸಿಕ್ಕಿಕೊಂಡಿರುವುದು ನಮ್ಮ ನೆಮ್ಮದಿಗೆಡಿಸುವ ವಿಸ್ಮಯ.

ಸರಣಿಯ ಹದಿಮೂರನೆಯ ಪುಸ್ತಕ ’ವಿಸ್ಮಯ ವಿಶ್ವ - 1’.

 


ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !