ಸಿನಿಮಾವಾಗುತ್ತಿರುವ ಜನಪ್ರಿಯ ಕಾದಂಬರಿ
“ನಗು ಎಲ್ಲರಿಗಾಗಿ, ಪ್ರೀತಿ ಒಬ್ಬರಿಗಾಗಿ” ಎನ್ನುವ ಉಪಶೀರ್ಷಿಕೆಯಿಂದಲೇ ಕಥೆಯ ಆಳವೇನು ಎನ್ನುವುದನ್ನು ಹೇಳುವ ಗುಬ್ಬಚ್ಚಿ ಸತೀಶ್ ಅವರ ‘ಮುಗುಳ್ನಗೆ’ ಕಾದಂಬರಿ, ಕುತೂಹಲಕರವಾಗಿ ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. ಕನ್ನಡ ಸಾಹಿತ್ಯದಲ್ಲಿ ಅತ್ಯಪರೂಪ ಎಂದೇ ಹೇಳುವಂತಹ ಚಿತ್ರಕಥೆ ರೂಪದಲ್ಲಿರುವ ಕಾದಂಬರಿಯನ್ನು ಬರೆಯುವ ಸಾಹಸ ಮಾಡಿ, ಅದರಲ್ಲಿ ನೂರಕ್ಕೆ ನೂರರಷ್ಟು ಯಶಸ್ವಿಯಾಗಿರುವುದಕ್ಕೆ ಕಾದಂಬರಿ ಎರಡನೇ ಮುದ್ರಣ ಕಂಡಿರುವುದೇ ಸಾಕ್ಷಿ”.
ಕೆ. ಗಣೇಶ್ ಕೋಡೂರು
ಕತೆಗಾರರು, ಕಾದಂಬರಿಕಾರರು
“ನಿಮ್ಮ 'ಮುಗುಳ್ನಗೆ' ಓದಿದೆ. ಕಾಫಿ ಜೊತೆ ಮಾತುಕತೆಯಲ್ಲಿ ಒಂದೀಡಿ ಕಥೆ ಸಾಗುವ ರೀತಿ ಚೆನ್ನಾಗಿದೆ. ಹಿಂದಿನ ಲವ್ ಸ್ಟೋರಿಗಳಿಗೆ ನೀವು ಕೊಟ್ಟಿರುವ ಪ್ರಸಂಗಗಳು, ತಿರುವುಗಳು ಹಿಡಿಸಿದವು. ಕೊನೆಗೆ, ನೋಡುತ್ತಿರುವ ಹುಡುಗಿಗೂ ಒಂದು ಪ್ರೇಮಕಥೆಯನ್ನೂ ನೀಡಿ ಆ ಪಾತ್ರಕ್ಕೊಂದು ಉದ್ದೇಶಕೊಟ್ಟಿದ್ದು ಚೆನ್ನಾಗಿತ್ತು. ಸಿನಿಮಾದಂತಹ ಕಾದಂಬರಿಯನ್ನು ಕೊಟ್ಟ ನಿಮಗೂ, ಒಂದೊಳ್ಳೆ ಓದು ಕೊಟ್ಟ ನಿಮ್ಮ ಮುಗುಳ್ನಗೆಗೂ ಧನ್ಯವಾದಗಳು”.
ಪ್ರವೀಣ್ ಕುಮಾರ್ ಜಿ.
ಕತೆಗಾರರು, ಭವಿಷ್ಯದ ಸಿನಿಮಾ ನಿರ್ದೇಶಕರು.
ಪುಟಗಳು: 70
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !