ಎಲ್ಲರೂ ಒಂದು ಗಳಿಗೆಯೂ ಬಿಡುವಿಲ್ಲದೇ ಓಡುತ್ತಿರುವ ಜೀವನ ನಮ್ಮ ಮುಂದಿದೆ. ಈ ಓಟದಲ್ಲಿ ಎಡವಿ ಬಿದ್ದು ಸೋತು ಹತಾಶರಾಗುವವರ ಪ್ರಮಾಣವೇ ಹೆಚ್ಚು. ಬದುಕೇ ಮುಗಿದು ಹೋಯ್ತು ಎಂದು ಹತಾಶರಾಗುವವರಿಗೆ ಸೋಲನ್ನು ಸೋಲಿಸುವ ಪಾಠವನ್ನು ಪತ್ರಕರ್ತ ಗೋಪಾಲ ಯಡಗೇರೆ ಇಲ್ಲಿ ಮಾಡಿದ್ದಾರೆ. ಬದುಕಿನ ಕುರಿತು ಆಶಾಭಾವನೆ ಕಳೆದುಕೊಂಡವರಿಗೆ ಹೊಸ ಹುರುಪು ತುಂಬುವ ಇತರರ ಗೆಲುವಿನ ಹೋರಾಟದ ಕಥೆಗಳನ್ನು ಅವರಿಲ್ಲಿ ಹೇಳಿದ್ದಾರೆ.
ಪುಟಗಳು : 156