ಆರ್. ಟಿ. ವಿಠಲ್ ಮೂರ್ತಿ ಅನ್ನುವ ಹೆಸರು ಕನ್ನಡ ಪತ್ರಿಕೋದ್ಯಮದ ರಾಜಕೀಯ ವರದಿಗಾರಿಕೆಯ ಅಂಗಳದಲ್ಲಿ ಕೇಳದವರಿಲ್ಲ. ಕಳೆದ ಮೂವತ್ತು ವರ್ಷಗಳಲ್ಲಿ ರಾಜಕಾರಣದ ಅಂಗಳದಲ್ಲಿ ಅವರು ಕಂಡ ಮಹಾನ್ ನಾಯಕರಿಂದ ಹಿಡಿದು ಹಲವರ ಅಂತರಂಗದ ಕತೆಗಳನ್ನು ಈ ಪುಸ್ತಕ ತನ್ನ ಸೆರಗಿನಲ್ಲಿ ಬೆಚ್ಚಗೆ ಇಟ್ಟುಕೊಂಡಿದೆ.
ಏಕಕಾಲಕ್ಕೆ ಇದು ನನ್ನ ಆತ್ಮದಲ್ಲಿ ಉಳಿದುಕೊಂಡ ಕತೆಗಳಾಗಿ, ಅದೇ ಕಾಲಕ್ಕೆ ಹಲ ಮಹನೀಯರ ಆತ್ಮ ಕತೆಯ ಭಾಗಗಳಾಗಿಯೂ ಇರುವುದರಿಂದ ಪುಸ್ತಕಕ್ಕೆ ಇದೊಂಥರಾ ಆತ್ಮಕತೆ ಎಂದು ಹೆಸರಿಟ್ಟಿದ್ದೇನೆ ಅನ್ನುತ್ತಾರೆ ಆರ್.ಟಿ.ವಿ ಅವರು. ಕರ್ನಾಟಕದ ಕಳೆದ ಮೂವತ್ತು ವರ್ಷಗಳ ರಾಜಕಾರಣದ ಒಳಸುಳಿ ತಿಳಿಯುವ ಕುತೂಹಲ ನಿಮ್ಮದಾದಲ್ಲಿ ಈ ಪುಸ್ತಕ ನೀವು ಓದಲೇಬೇಕು.
ಪುಟಗಳು: 200