ಕಿರಂ ಎಂದು ಕನ್ನಡಿಗರಿಗೆ ಚಿರಪರಿಚಿತವಾಗಿರುವ ಕಿ.ರಂ. ನಾಗರಾಜು ಅವರ ಜೀವನದ ಕುರಿತು ಬರೆದಿರುವ ಚಿತ್ರಣವೇ ಕಿರಂ ಲೋಕ. ಅವರ ಹತ್ತಿರದ ಗೆಳೆಯ ಶೂದ್ರ ಶ್ರೀನಿವಾಸ್ ಅವರು ಕಿ.ರಂ ಅವರು ಸಾಂಸ್ಕೃತಿಕ ಲೋಕಕ್ಕೆ, ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಪಾರ ಕೊಡುಗೆಯನ್ನು ಇಲ್ಲಿ ಬಹಳ ಆಪ್ತವಾಗಿ ಚಿತ್ರಿಸಿದ್ದಾರೆ.
ಕನ್ನಡವನ್ನು ಇನ್ನಷ್ಟು ಪ್ರೀತಿಸುವಂತೆ ಮಾಡಿದ, ಕವಿತೆಯನ್ನು ಇನ್ನಷ್ಟು ಎದೆಗೆ ಹತ್ತಿರವಾಗುವಂತೆ ಮಾಡಿದ ಕಿ.ರಂ ಬಗ್ಗೆ ಎಲ್ಲರಿಗೂ ವಿಶೇಷ ಪ್ರೀತಿ. ಅವರ ಜೀವ ಉಳಿಸಿ ಹೋದ ಘಮ ಓದಿದ ನಿಮ್ಮಳಗೂ ಅರಳಲಿ.
- ಜಿ.ಎನ್. ಮೋಹನ್, ಬಹುರೂಪಿ ಪ್ರಕಾಶನ
ಪುಟಗಳು: 72