ಸಂಧ್ಯಾರಾಗ (ಆಡಿಯೋ ಬುಕ್)

ಸಂಧ್ಯಾರಾಗ (ಆಡಿಯೋ ಬುಕ್)

Regular price
$7.99
Sale price
$7.99
Regular price
Sold out
Unit price
per 
Shipping does not apply

ಪ್ರಕಾಶಕರು: ಟೋಟಲ್ ಕನ್ನಡ

Publisher: Total Kannada

 

ಆಡಿಯೋ ಪುಸ್ತಕದ ಅವಧಿ : 4 ಗಂಟೆ

 

ಕಾದಂಬರಿ ಸಾರ್ವಭೌಮ ಅ.ನ.ಕೃಷ್ಣರಾಯರ ಅತ್ಯಂತ ಜನಪ್ರಿಯ ಕಾದಂಬರಿ ಸಂಧ್ಯಾರಾಗ ಈಗ ಕೇಳಿ ಆಡಿಯೋ ಬುಕ್ ರೂಪದಲ್ಲಿ.

ಒಮ್ಮೆ ಕನ್ನಡದ ಕಟ್ಟಾಳು ಅ ನ ಕೃಷ್ಣರಾಯರು ತಮ್ಮ ಸ್ನೇಹಿತರನ್ನು ನೋಡಲು ಹೋಟೆಲಿಗೆ ಹೋಗಿದ್ದರು. ಹೋಟೆಲಿಗೆ ಹೋದಾಗ ಮುಖ್ಯದ್ವಾರದಲ್ಲಿದ್ದ ಹೋಟೆಲಿನ ಮಾಲೀಕರು ಎದ್ದು ನಿಂತು ಅನಕೃರವರನ್ನು ಕಂಡು ಗೌರವದಿಂದ ನಮಸ್ಕರಿಸಿದರು. ನಂತರ ಅನಕೃ ತಮ್ಮ ಸ್ನೇಹಿತನಿದ್ದ ಕೋಣೆಗೆ ಹೋದರು.

ಹೀಗೆ ಕೋಣೆಯಲ್ಲಿ ಸ್ನೇಹಿತನ ಜೊತೆ ಉಭಯಕುಶಲೋಪರಿಯಲ್ಲಿ ತೊಡಗಿದ್ದಾಗ, ಸ್ನೇಹಿತನ ಕೋಣೆಗೆ ದೋಸೆ, ಸಿಹಿ , ಖಾರ , ಕಾಫಿ , ಬಾಳೆ ಹಣ್ಣು ಮತ್ತು ಬೀಡ ಬಂದವು. ಇದರಿಂದ ಆಶ್ಚರ್ಯಗೊಂಡ ಅನಕೃ ಗೆಳೆಯನಿಗೆ.
” ನೀವು ಹೇಳಿದ್ದೀರಾ ” ಎಂದು ಕೇಳಿದರು.
” ಇಲ್ಲವಲ್ಲ ” ಎಂಬ ಉತ್ತರವನ್ನು ಗೆಳೆಯರು ನೀಡಿದ ಸಂದರ್ಭದಲ್ಲಿ ಯೋಚಿಸುತ್ತಿದ್ದಾಗ ಹೋಟೆಲಿನ ಮಾಲೀಕರು ಬಂದು.
” ದಯವಿಟ್ಟು ತಗೆದುಕೊಳ್ಳಬೇಕು ” ಎಂದರು .
” ಇಷ್ಟು ತಿಂಡಿಯ ಅಗತ್ಯ ನನಗಿಲ್ಲ “ಎಂದು ಅನಕೃ ಹೇಳಿದಾಗ.
” ನೀವು ನನಗಾಗಿ ತಗೆದು ಕೊಳ್ಳಲೇ ಬೇಕು ” ಎಂದು ಹೇಳಿದರು.
ಕಡೆಗೆ ಬೇರೆ ದಾರಿ ಕಾಣದೆ ಅನಿವಾರ್ಯದಿಂದ ಅನಕೃ ಮತ್ತು ಅವರ ಮಿತ್ರರು ಉಪಹಾರ ಮುಗಿಸಿದ ಮೇಲೆ ಇದೆಲ್ಲ ಏಕೇ ಎಂದು ಹೋಟೆಲ್ ಮಾಲೀಕರಿಗೆ ಪ್ರಶ್ನಿಸಿದರು.
” ನಿಮ್ಮಿಂದ ನನಗೆ ಉಪಕಾರವಾಗಿದೆ ” ಎಂದು ಹೋಟೆಲ್ ಮಾಲೀಕರು ಎನ್ನಲು.
” ನಿಮ್ಮ ಪರಿಚಯ ನನಗಿಲ್ಲವಲ್ಲ ” ಎಂದು ಅನಕೃ ಆಶ್ಚರ್ಯ ವ್ಯಕ್ತಪಡಿಸಿದರು.
” ನಿಮ್ಮ ಪರಿಚಯ ನನಗಿದೆ. ನಿಮ್ಮ ‘ ಸಂಧ್ಯಾ ರಾಗ ‘ ನನ್ನ ಬಾಳನ್ನು ತಿದ್ದಿತು” ಎಂದು ಮಾಲೀಕರು ಹೇಳಲು.
” ಹೇಗೆ ” ಎಂದು ಅನಕೃ ಕೇಳಿದರು.
” ನಾನು ಮನೆಯಲ್ಲಿ ಜಗಳವಾಡಿ ಮನೆ ಬಿಟ್ಟು ಇಲ್ಲಿಗೆ ಬಂದೆ. ನನ್ನ ತಾಯಿಯನ್ನು ಸಹ ನಿರ್ಲಕ್ಷ್ಯ ಮಾಡಿದೆ. ಮನೆ ಮತ್ತು ಮನೆಯವರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಒಮ್ಮೆ ನನ್ನ ಸ್ನೇಹಿತರೊಬ್ಬರು ನಿಮ್ಮ ಸಂಧ್ಯಾರಾಗ ಕಾದಂಬರಿಯನ್ನು ನನಗೆ ನೀಡಿದರು. ಕಾದಂಬರಿಯಲ್ಲಿ ಬರುವ ಪಾತ್ರಗಳು ನನ್ನ ಮನಸ್ಸನ್ನು ಬದಲಿಸಿದವು. ಕೊಡಲೇ ಊರಿಗೆ ಹೋಗಿ ತಾಯಿಯ ಹತ್ತಿರ ಕ್ಷಮೆ ಕೇಳಿ , ಮನೆಯವರ ಹತ್ತಿರ ರಾಜಿ ಮಾಡಿಕೊಂಡೆ “
ಎಂದು ಮಾಲೀಕರು ಕೃತಜ್ಞತೆ ಸಲ್ಲಿಸಿದರು.
ಕಡೆಗೆ ಮಾಲೀಕರು ಅನಕೃರವರನ್ನು ಸಂತೋಷದಿಂದ ಬಿಳ್ಕೊಟ್ಟರು.

ಅನಕೃ ಅವರ ಈ ನಿದರ್ಶನ , ಒಂದು ಪುಸ್ತಕ ಮಾನವನ ಜೀವನ ಶೈಲಿಯನ್ನೇ ಬದಲಿಸುತ್ತದೆ ಎನ್ನಲು ಸಾಧ್ಯ.

- ವಿಸ್ಮಯ ಜಗತ್ತು ಬ್ಲಾಗ್ ವಿಮರ್ಶೆ

 

ಸಂಧ್ಯಾರಾಗ - ಈಗ ಕೇಳಿ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.