ಆಳ, ನಿರಾಳ

ಆಳ, ನಿರಾಳ

Regular price
$7.99
Sale price
$7.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ   

ಪ್ರಯಾಣವನ್ನು ಆಧಾರವಗಿಟ್ಟುಕೊಂಡು, ಅಲ್ಲಿಯ ಪಾತ್ರಗಳ ಮೂಲಕ ಜೀವನದ, ಪುರಾಣದ, ವೇದದ ವಿಷಯಗಳನ್ನು ವಿವಿಧ ಕೋನಗಳಲ್ಲಿ ಚರ್ಚಿಸಿ, ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ಕೊನೆಗೆ ನನಗನ್ನಿಸಿದ್ದು, ಈ ಜೀವನವೆಂಬ ಪ್ರಯಾಣ....."ಆರ್ಥವಾಗದ ಬದುಕು, ಅರ್ಥವಾದಂತೆ ನಟನೆ" ಏಕೆಂದರೆ ಪ್ರತಿಯೊಂದು ವಿಷಯವನ್ನು ವಿವಿಧ ಆಯಾಮಗಲ್ಲಿ ಯೋಚಿಸಿದರೆ ಬೇರೆ ಬೇರೆ ಅರ್ಥಗಳೇ ಸಿಗುತ್ತವೆ !

ನದಿಯಂತೆ ಹರಿಯುವುದನ್ನು ನಾವು ಕಲಿತು, ಒಂದು ದಿನ ಸಾಗರವನ್ನು ಸೇರಬೇಕು, ಇಲ್ಲ ಬತ್ತಿಹೋಗಬೇಕು ಅಷ್ಟೆ !
 

 

ಕೃಪೆ

www.goodreads.com

 

ಯಾವುದೋ ಸನ್ನಿವೇಶದಿಂದ ರೈಲಿನಲ್ಲಿ ಒಟ್ಟುಗೂಡಿದ ಒಂದಿಷ್ಟು ಜನಗಳ ವರ್ತನೆಯನ್ನೂ ಮನೋಭಾವವನ್ನೂ ಚಿತ್ರಿಸಿ, ಆ ಮೂಲಕ ಅವರ ಜೀವನವನ್ನು ನಡೆಸುತ್ತಿರುವ ಕೆಲವೊಂದು ಶಕ್ತಿಗಳನ್ನು ಇಲ್ಲಿ ನಿರೀಕ್ಷಿಸಲು ಪ್ರಯತ್ನಿಸಿದ್ದೇನೆ. ಶ್ರದ್ಧೆ, ನಂಬಿಕೆ, ವಿವೇಚನೆ ಈ ಮೂರೂ ಕ್ರಿಯೆಗಳ ಮಾನಸಿಕ ವ್ಯಾಪ್ತಿ, ತಮ್ಮ ಹಿನ್ನೆಲೆಯೊಡನೆ ಬಂದಿರುವ ವ್ಯಕ್ತಿಗಳಲ್ಲಿ ಪ್ರಕಟಗೊಳ್ಳುವ ತೀರ ಅದ್ಭುತ ಶಕ್ತಿಯಾಗಿದೆ. ಈ ಶಕ್ತಿ ಧಾರ್ಮಿಕ ವಿಚಾರಗಳನ್ನು ಕುಲುಕುತ್ತದೆ; ಆಧುನಿಕ ಜೀವನದ ರಾಜಕೀಯ ಇಲ್ಲವೆ ಸಾಮಾಜಿಕ ಪ್ರಶ್ನೆಗಳನ್ನೂ ಕುಲುಕುತ್ತದೆ. ಆಳವಿಲ್ಲದ ಅಂಧಶ್ರದ್ಧೆ ಮನುಷ್ಯನ ಸ್ವಭಾವವಾದರೆ, ಮತಧರ್ಮಗಳಲ್ಲದೆ ಜೀವನದ ಅನ್ಯ ವಿಚಾರಗಳಲ್ಲೂ ಅದೇ ದಾರಿ ಹಿಡಿಯುತ್ತದೆ.

ಬಾಳುವುದಕ್ಕೆ, ಬಾಳ್ವೆಯ ಸಂಕಷ್ಟಗಳನ್ನು ಸಹಿಸುವುದಕ್ಕೆ, ಬಾಳ್ವೆಗೆ ಒಂದು ಗುರಿಯಿದೆ ಎಂದು ತಿಳಿದು ವರ್ತಿಸುವುದಕ್ಕೆ ಆಳವಾಗಿರಲೂಬಹುದು, ಬಲವಾದ ಬೇರುಗಳಿಲ್ಲದೆ ಆಳವಿಲ್ಲದಿರಲೂಬಹುದು. ನಿರಾಳ ಎಂಬ ಶಬ್ದ ಸೃಷ್ಟಿಯನ್ನು ಅದಕ್ಕಾಗಿ ಇಲ್ಲಿ ಮಾಡಿದ್ದಲ್ಲ. ನಿನ್+ಆಳ ಎಂಬ ಅರ್ಥದಲ್ಲಿ ಅದನ್ನು ಉಪಯೋಗಿಸಿದರೆ, ಈ ಕಾದಂಬರಿಯ ಮಟ್ಟಿಗೆ ಔಚಿತ್ಯವೂ ಇದೆ. ನಿರಾಳ ಎಂಬ ಪದಕ್ಕೆ ಶಾಂತಿ ಎಂಬ ಅರ್ಥವಿದೆ. ಜೀವನದ ಅನುಭವಗಳ ಹಿನ್ನೆಲೆಯಲ್ಲಿ ವಿವೇಚಿಸಲಾರದ ವ್ಯಕ್ತಿಗೆ ಸಿಗುವ ಶಾಂತಿ ಬೇರೆ; ವಿವೇಚಿಸಬಲ್ಲವ್ಯಕ್ತಿಗೆ ಸಿಗುವ ಶಾಂತಿ ಬೇರೆ. ಆಘಾತ ಕುಲುಕಿದ ಕಾಲಕ್ಕೆ ಮೊದಲಿನದು ನಷ್ಟವಾದೀತು. ಎರಡನೆಯದು ಉಳಿದೀತು.

ಮಗು ತಾಯಿಯನ್ನು ಪ್ರೀತಿಸುತ್ತದೆ; ನಂಬಿಕೆಯಿಂದ ತಬ್ಬಿ ಹಿಡಿಯುತ್ತದೆ. ತಾಯಿಯನ್ನು ಬಿಟ್ಟು ಒಂದು ಕ್ಷಣವೂ ಅದು ಇರಲಾರದು. ತನಗಾಗಿ ತಾಯಿ ಇದ್ದಾಳೆ ಎಂಬ ಆಳವಿಲ್ಲದ ನೋಟ ಅದರದ್ದು. ಆಳವಿಲ್ಲದಿದ್ದರೂ ಮಗುವಿನ ಪ್ರೀತಿಯಲ್ಲಿ ಅತಿಶಯವಾದ ತೀಕ್ಷ್ಣತೆಯಿದೆ. ಅದೇ ಮಗು ದೊಡ್ಡವನಾಗಿ ತನ್ನ ತಾಯಿಯನ್ನು ಇನ್ನಷ್ಟು ಚೆನ್ನಾಗಿ ತಿಳಿದು ವರ್ತಿಸುವಾಗ, ಮೊದಲಿನಂತೆ ತಬ್ಬಿ ಕಿರುಚುವ ಮಗು ಅದಲ್ಲ ಪ್ರೀತಿಯ ಪ್ರದರ್ಶನವಿಲ್ಲದಿದ್ದರೂ, ವಿವೇಕಯುತವಾದ ವರ್ತನೆಯಿಂದ, ತಾಯ ಮೇಲಣ ಮಮತೆ, ನಿಷ್ಠೆ, ಭಕ್ತಿಗಳು ಪ್ರಕಟವಾಗುವುದಿಲ್ಲವೇ?

ಇಲ್ಲಿ ಭಾರತದಲ್ಲಿ ನಡೆದ ಮತಪ್ರಸಾರ ಮತ್ತು ಕ್ರಾಂತಿಗಳ ಕಾರಣವನ್ನು ತಿಳಿಯಲೆತ್ನಿಸಿದ್ದೇನೆ. ಘಟನೆಗಳ ನಡುವೆ ಸಂದ ಶತಮಾನ, ಶತಮಾನಗಳ ಬಳಿಕ, ಹಳೆಯ ವಿದ್ಯಮಾನಗಳನ್ನು ತೂಗಿ ತಿಳಿಯುವುದು ತುಂಬ ಕಷ್ಟ. ನಮ್ಮ ಕಾಲದಲ್ಲಿ ನಡೆದಿರುವ ಅಥವಾ ನಡೆಯುತ್ತಿರುವ ಮನುಷ್ಯರ ಗುಂಪಿನ ವರ್ತನೆಯನ್ನು ಕಂಡು, ಅದರಿಂದ ಕೆಲ ಕೆಲವು ವಿಷಯಗಳನ್ನು ಊಹಿಸಬೇಕಾಗುತ್ತದೆ.

 

-ಶಿವರಾಮ ಕಾರಂತ

 

ಪುಟಗಳು: 339

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !