ಮಹಾತ್ಮ (ಇಬುಕ್)

ಮಹಾತ್ಮ (ಇಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಮುಕುಂದರಾವ್‌ರ ‘ಮಹಾತ್ಮ' ನಾಟಕ ನೋಡುತ್ತ ‘ಗಾಂಧಿ' ಎಂಬ ಸಮಸ್ಯೆಯೇ ನಮ್ಮನ್ನು ಎದುರಾಗುತ್ತದೆ. ಭಾವವಶರಾಗಿ ಗಾಂಧಿಯನ್ನು ಕಾಣದೇ, ಅವರು ಸೋತರೋ ಗೆದ್ದರೋ ಎಂಬ ಕುತೂಹಲದಲ್ಲಿ ತಣಿಯದೇ, ಗಾಂಧಿಯನ್ನೇ ನಾವು ನೋಡುವಂತೆಯೂ, ಆ ಮೂಲಕ ನಮ್ಮನ್ನೇ ನೋಡಿಕೊಳ್ಳುವಂತೆಯೂ ಆಗುತ್ತದೆ... ಗಾಂಧೀಜಿ ತಮ್ಮ ನವಾಖಲಿ ದಿನಗಳಲ್ಲಿ ಅಹಿಂಸೆ ಮತ್ತು ಸತ್ಯಗಳ ಅವಿನಾಸಂಬಂಧದ ನಿರಂತರವಾದ ಆತಂಕಪೂರ್ಣವಾದ ಶೋಧದಲ್ಲಿ ಇದ್ದರು ಎನ್ನಿಸುತ್ತದೆ. ಯಾವುದು ನಿತ್ಯ ಎದುರಾಗುತ್ತಿದೆಯೋ ಅದೇ ಸತ್ಯವಾದರೆ, ತಾನು ಬಯಸುವುದು ಮಾತ್ರ ಅಹಿಂಸೆಯಾದರೆ, ಈ ತನ್ನ ಬಯಕೆಯೂ ಕಾಮವನ್ನು ಪೂರ್ಣ ಗೆದ್ದಿರಲಾರದ ತನ್ನ ಶರೀರದ ನೈಜತೆಗೆ ಹೊರತಾದದ್ದಾದರೆ... ಈ ತೊಳಲಾಟಕ್ಕೆ ಉತ್ತರ ಗಾಂಧೀಜಿಗೆ ಅವರ ಮೌನದ ಅನುಸಂಧಾನದಲ್ಲಿ ದೇವರ ಇಚ್ಛೆಗೆ ತನ್ನನ್ನು ವಾಹಕ ಮಾಡಿಕೊಳ್ಳುವ ಪ್ರಾರ್ಥನೆಯ ವಿನಯದಲ್ಲಿ ಮಾತ್ರ ಕಾಣಬಹುದಿತ್ತು. ...ಗಾಂಧೀಜಿ ಪಾಲಿಗೆ ಪ್ರಾರ್ಥನೆ ದೇವರನ್ನು ಒಲಿಸಿಕೊಳ್ಳುವ ಉಪಾಯಕ್ಕಿಂತ ಹೆಚ್ಚಾಗಿ, ಸತ್ಯವನ್ನು ಅರಿಯುವುದಕ್ಕೆ ಅಗತ್ಯವಾದ ವಿನಯದ ಸ್ಥಿತಿಯನ್ನು ತಲುಪುವ ಪ್ರಕ್ರಿಯೆಯಾಗಿರುತ್ತಿತ್ತು. ಈ ವಿನಯದಲ್ಲಿ ಅವರು ಕಾದಿದ್ದೇ ಸತ್ತರು ಎಂಬುದು ಮಾನವನ ನಿಜವಾದ ಸಾಧ್ಯತೆ ಏನು ಎಂಬುದನ್ನು ತಿಳಿಯಲು ಈತನಕ ದಾಖಲಾದ ಚರಿತ್ರೆಯ ಕಾಲ ಸಾಲದು ಎಂಬ ವಿನಯವನ್ನು ಕಲಿಸಿಕೊಡುವಂತಿದೆ. ನವಾಖಲಿ ಮಾನವ ಇತಿಹಾಸದಲ್ಲಿ ವಿನಯದ ಅಂಥ ಒಂದು ಕಠಿಣವಾದ ಪಾಠ. ಈ ಭಾವನೆಯನ್ನು ನನ್ನಲ್ಲಿ ಹುಟ್ಟಿಸಿದ ಮುಕುಂದರಾವ್ ಬರೆದ ನಾಟಕಕ್ಕೆ ನಾನು ಕೃತಜ್ಞ.

- ಯು.ಆರ್. ಅನಂತಮೂರ್ತಿ

  

ಪುಟಗಳು: 117

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !