ಥೇಮ್ಸ್ ತಟದ ತವಕ ತಲ್ಲಣ (ಇಬುಕ್)

ಥೇಮ್ಸ್ ತಟದ ತವಕ ತಲ್ಲಣ (ಇಬುಕ್)

Regular price
$5.99
Sale price
$5.99
Regular price
Sold out
Unit price
per 
Shipping does not apply

GET FREE SAMPLE

ಈವತ್ತು ಎರಡನೇ ಮುದ್ರಣ ಕಾಣುತ್ತಿರುವ ’ಥೇಮ್ಸ್ ತಟದ ತವಕ ತಲ್ಲಣ’ ಮೇಲ್ನೋಟಕ್ಕೆ ಒಂದು ಪ್ರವಾಸ ಕಥನವಾದರೂ, ಕನ್ನಡದಲ್ಲಿ ಬಂದ ಉಳಿದೆಲ್ಲ ಪ್ರವಾಸ ಕಥನಗಳಿಗಿಂತ ಭಿನ್ನವಾದದ್ದು. ಲೇಖಕ ಶಿವ್ನಿಂಗ್ ಸ್ಕಾಲರ್ ಷಿಪ್ ಪಡೆದು ಇಂಗ್ಲೆಂಡ್ ಗೆ ಹೋಗಿ ಅಲ್ಲಿನ ಜನಜೀವನ- ಸಂಸ್ಕೃತಿ- ಜಾಗತಿಕ ಮಟ್ಟದ ಪತ್ರಿಕೋದ್ಯಮ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಹೋಗುತ್ತಾರೆ. ಪತ್ರಿಕೋದ್ಯಮ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಯುವ ಪತ್ರಕರ್ತರ ಪಾಲಿಗೆ ಇದೊಂದು ಅಭ್ಯಾಸಕ್ಕೆ ತಕ್ಕುದಾದ ಕೃತಿ. ಇಲ್ಲಿ ಕೂಡ ಭಾಷೆ ಓದುಗರನ್ನು ಸರ್‍ರನೇ ಎಳೆದುಕೊಂಡು ಮುಂದೆ ಸಾಗುತ್ತದೆ. ಜೊತೆ-ಜೊತೆಗೆ ಹಲವಾರು ಗೊತ್ತಿಲ್ಲದ ಲೋಕವನ್ನು ಓದುಗರ ಮುಂದೆ ಸರಳವಾಗಿ ತೆರೆದಿಡುತ್ತದೆ.

- ಸತೀಶ್ ಚಪ್ಪರಿಕೆ

 

ಮೇಲ್ನೋಟಕ್ಕೆ ಇದೊಂದು ಪ್ರವಾಸ ಕಥನ. ಆದರೆ, ದೂರದೇಶದಲ್ಲಿ ಕಂಡದ್ದು- ಕೇಳಿದ್ದನ್ನು ಕೇವಲ ಅಕ್ಷರ ರೂಪದಲ್ಲಿ ಭಟ್ಟಿ ಇಳಿಸಲು ಪ್ರವಾಸಿಯೊಬ್ಬ ನಡೆಸಿದ ಒಣ ಯತ್ನವಲ್ಲ. ಒಬ್ಬ ಕನ್ನಡ ಪತ್ರಕರ್ತ, ಗ್ರೇಟ್ ಬ್ರಿಟನ್‌ನಲ್ಲಿ ವೃತ್ತಿಪರ ನೆಲೆಯೊಳಗೆ ನಡೆಸಿದ ಸುತ್ತಾಟ ಮತ್ತು ಆ ವೇಳೆ ಆತ ಜಾಗತಿಕ ಮಾಧ್ಯಮ ಲೋಕದಲ್ಲಿ ನಡೆಸಿದ ಪ್ರವಾಸದ ಸೃಜನಶೀಲ ಪರಿಣಾಮವಿದು. ಆಗ ಅನುಭವಕ್ಕೆ ಬಂದದ್ದನ್ನು ಮುಷ್ಟಿಯಲ್ಲಿ ಹಿಡಿದು, ಇದನ್ನು ಸಾಧ್ಯವಾದಷ್ಟು ಮಟ್ಟಿಗೆ ಅಕ್ಷರ ರೂಪಕ್ಕೆ ಇಳಿಸುವ ಪ್ರಾಮಾಣಿಕ ಪ್ರಯತ್ನ. ಜೊತೆಯಲ್ಲಿಯೇ ನಮ್ಮಲ್ಲಿನ ಮಾಧ್ಯಮ ಲೋಕದಲ್ಲಿ ಇಂದು ಬದ್ಧತೆ, ಪ್ರಾಮಾಣಿಕತೆ ಎಂಬ ಪದಗಳು ಅರ್ಥವನ್ನೇ ಕಳೆದು ಕೊಂಡಿದೆ ಎಂಬ ಬಗ್ಗೆ ಸೂಕ್ಷ್ಮ ಜಿಜ್ಞಾಸೆ. ಅದಕ್ಕೆ ಒಂಚೂರು ಆತ್ಮಾವಲೋಕನದ ಸ್ವರೂಪ, ಒಟ್ಟಾರೆ ಈ ಕೃತಿ ಕನ್ನಡದ ಪ್ರಯೋಗಶೀಲ ಪತ್ರಕರ್ತನೊಬ್ಬ ಕೆಲಕಾಲ ಜಾಗತಿಕ ನೆಲೆಯಲ್ಲಿ ನಿಂತು,ಮೂಲಕ್ಕೆ ಮರಳಿದ ಮೇಲೆ ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ನಲುಗಿ, ಪ್ರವಾಹಕ್ಕೆ ಎದುರಾಗಿ ಈಜಿ ತಳವೂರಿದ ಮೇಲೆ ಇಲ್ಲಿನ ವಾಸ್ತವ-ಅವಾಸ್ತವಕ್ಕೆ ಹಿಡಿದಿರುವ ಕೈಗನ್ನಡಿ, ಇದೊಂದು ಮಾಧ್ಯಮ ಲೋಕದೊಳಗಿನ ಪುಟ್ಟ ಪ್ರವಾಸ ಕಥನ.

 

ಪುಟಗಳು: 208

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !