ಬರಹಗಾರರು: ಮೇಘನಾ ಸುಧೀಂದ್ರ
ಬೆಂಗಳೂರೆಂದರೆ ಐಟಿ, ಸಾಫ್ಟ್ ವೇರು, ಪಬ್ಬು, ಟ್ರಾಫಿಕ್ಕು ಅಂತಷ್ಟೇ ತಿಳಿದವರಿಗೆ ನಿಜವಾದ ಬೆಂಗಳೂರಿನ ಪರಿಚಯ ಬೇಕಿದ್ದಲ್ಲಿ ಓದಬೇಕಿರುವ ಪುಸ್ತಕ "ಜಯನಗರದ ಹುಡುಗಿ". ಇಲ್ಲಿ ಬೆಂಗಳೂರಿನ ಕರಗ, ಕಡ್ಲೆಕಾಯಿ ಪರಿಷೆ, ರಾಗಿಗುಡ್ಡ, ಗುರುದತ್ತ ಲೈಬ್ರರಿ, ಚಾಮರಾಜಪೇಟೆಯ ರಾಮನವಮಿ ಸಂಗೀತೋತ್ಸವದ ಕುರಿತು ಜಯನಗರದಲ್ಲೇ ಹುಟ್ಟಿ ಬೆಳೆದ ಮೇಘನಾ ಅವರ ಅನುಭವದ ಕಥನಗಳಿವೆ. ದೂರದ ಸ್ಪೇನಿನ ಬಾರ್ಸಿಲೋನಾಗೆ ಓದಲು ಹೋದಾಗ ಕನ್ನಡತಿಯಾಗಿ ಅಲ್ಲಿ ಕಂಡ ಹಲವು ವಿಶೇಷಗಳ ಬಣ್ಣನೆಯಿದೆ. ಕಾಫಿ ಕುಡಿಯುತ್ತ ಸಲೀಸಾಗಿ ಓದಿಸಿಕೊಂಡು ಹೋಗುವ ಕಾಫಿ ಟೇಬಲ್ ಪುಸ್ತಕ ಈ "ಜಯನಗರದ ಹುಡುಗಿ".