ಭಾರತೀಪುರ

ಭಾರತೀಪುರ

Regular price
$7.99
Sale price
$7.99
Regular price
Sold out
Unit price
per 
Shipping does not apply

‘ಭಾರತೀಪುರ’, ಸೃಷ್ಟ್ಯಾತ್ಮಕ ಬರಹಗಾರನೊಬ್ಬ ಕಂಡ ಆಳವಾದ ಒಂದು ವಿರಸದ ಸಮಗ್ರ ಪರಿಚಯದ ಅಸಲುಚಿತ್ರ. ಮೌಲ್ಯಗಳ, ಕಟ್ಟಡಗಳ, ವ್ಯಕ್ತಿಗಳ ನಡುವಣ ಈ ವಿರಸಕ್ಕೆ ಸಾಹಿತ್ಯಕವಾದದ್ದೇ ಅಲ್ಲದೆ, ಬಹುಬಾರಿ ಸಮಾಜಶಾಸ್ತ್ರದ್ದು ಹಾಗೂ ಒಮ್ಮೊಮ್ಮೆ ದಾರ್ಶನಿಕವಾದದ್ದು ಆದ ಆಯಾಮವೂ ಉಂಟು. ವಸ್ತುಸ್ಥಿತಿಯ ಮಟ್ಟದಲ್ಲಿ, ಕಾನಂಬರಿಯ ಮುಖ್ಯ ಗೊಡವೆ ಸಂಪ್ರದಾಯಬದ್ಧ ಸಮಾಜದ ಆಧುನೀಕರಣ; ಆ ಸಮಾಜದ ಮೂರ್ತ-ಅಮೂರ್ತ ಸಂಕೇತಗಳನ್ನು ತೊಡೆದುಹಾಕುವುದು; ಕನಿಷ್ಠ ಅವುಗಳನ್ನು ಅಪಮೌಲ್ಯಗೊಳಿಸುವುದು, ಹೊಸ ವಸ್ತುಸ್ಥಿತಯನ್ನು, ಮೌಲ್ಯಗಳನ್ನು ನಿರ್ಮಿಸುವುದು. ವ್ಯಕ್ತಿಯ ಮಟ್ಟದಲ್ಲಿ ಅದರ ಮುಖ್ಯ ಗೊಡವೆ ಬ್ರಾಹ್ಮಣ ಜಮೀನ್ದಾರನ ಕುಟುಂಬದಲ್ಲಿ ಹುಟ್ಟಿದ ಧೀಮಂತನೊಬ್ಬ ತನ್ನ ಜಾತಿ ಹಾಗೂ ವರ್ಗಗಳಿಂದ ಮುಕ್ತನಾಗಿ ತನ್ನ ವರ್ಗ-ಜಾತಿಯ ಶೋಷಣೆಗೆ ಗುರಿಯಾಗಿದ್ದ ದಲಿತರ ಜೊತೆಗೆ ಏಕೀಭಾವ ಸಾಧಿಸುವುದರ ಸಂಕಟ. ಈ ಎರಡೂ ಗೊಡವೆಗಳನ್ನು ಹಾಸುಹೊಕ್ಕಾಗಿ ಮೈತುಂಬಿಸಿಕೊಂಡ ಈ ಕಾದಂಬರಿ ಅತ್ಯಂತ ಅರ್ಥವತ್ತಾದ ವಿವರಪೂರ್ಣವಾದ ಕಥೆಯನ್ನು ನೇಯುತ್ತದೆ. ಕಾದಂಬರಿಯಲ್ಲಿ ಒಂದು ಮೋಹಕವಾದ ದಾರ್ಶನಿಕ ಅರಾಜಕತೆಯಿದೆ. ಅದರಲ್ಲಿ ಮಾರ್ಕ್ಸ್, ಸಾರ್ತ್ರೆ, ಲೋಹಿಯಾ ಒಬ್ಬರನ್ನೊಬ್ಬರು ತಳ್ಳಾಡುತ್ತಾರೆ. ಅನಂತಮೂರ್ತಿಯವರು ಈ ಮೂವರು ದಾರ್ಶನಿಕರು ನೀಡುವ ಬೆಳಕಿನಲ್ಲಿ ಮಾನವನ ಪಾಡನ್ನು ಶೋಧಿಸಬಲ್ಲ ಸಾಮರ್ಥ್ಯ ಉಳ್ಲವರು.

-ಎಸ್. ವೆಂಕಟರಾಮ್ ‘ಭಾರತೀಪುರ

- ಒಂದು ಸಮೀಕ್ಷೆ’ ಲೇಖನದಿಂದ

 

ಪುಟಗಳು: 277

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !