ರಿಲ್ಯಾಕ್ಸ್‌ ಪ್ಲೀಸ್...!‌ (ಇಬುಕ್)

ರಿಲ್ಯಾಕ್ಸ್‌ ಪ್ಲೀಸ್...!‌ (ಇಬುಕ್)

Regular price
$7.99
Sale price
$7.99
Regular price
Sold out
Unit price
per 
Shipping does not apply

GET FREE SAMPLE

ನಾನು ವಿಜ್ಞಾನಿ, ವೈದ್ಯ, ಜ್ಯೋತಿಷಿ, ಪವಾಡ ಪುರುಷ ಅಥವಾ ಹೆಚ್ಚಿಗೆ ಓದಿದ ಜ್ಞಾನಿಯಂತೂ ಅಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ಆದರೆ ದಿನನಿತ್ಯ ನನಗೆ ನೂರಾರು ಸಮಸ್ಯೆಗಳುಳ್ಳ ಜನರು ಫೋನ್‌ ಮಾಡುತ್ತಾರೆ. ಎಷ್ಟೋ ಪ್ರಕರಣಗಳು ಬಿಡಿಸಲಾಗದ ಕಗ್ಗಂಟಾಗಿರುತ್ತವೆ. ಆದರೆ ಅವುಗಳನ್ನು ಎಚ್ಚರಿಕೆಯಿಂದ ಪರಿಶೀಲನೆ ಮಾಡುವುದರಲ್ಲಿ ತಲ್ಲೀನನಾಗುತ್ತೇನೆ. ವಿವೇಚನೆಯಿಂದ ಅತೀಸೂಕ್ಷ್ಮ ಸಹನೆ, ತಾಳ್ಮೆ ಹಾಗೂ ಪ್ರಯೋಗಾತ್ಮಕವಾಗಿ ಸಂಶೋಧನೆ. ಮಾಡಿದಾಗ ಈ ಕಗ್ಗಂಟು ಸುಲಭವಾಗಿ ನನ್ನ ಮುಂದೆ ಬಿಚ್ಚಿಕೊಳ್ಳುತ್ತದೆ.

ಕೆಲವರು ಈ ಕುರಿತು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಇದು ಸಾಧ್ಯವೇ ಎನ್ನುತ್ತಾರೆ. ನಿಮಗೆ ಅದ್ಯಾವುದೋ ಅತೀಂದ್ರಿಯ ಶಕ್ತಿ ಇರಬಹುದು ಅಥವಾ ಪೂರ್ವ ಜನ್ಮದ ಸುಕೃತ ಎಂದು ಮಾತನಾಡುತ್ತಾರೆ. ನನಗೆ ಅದ್ಯಾವುದರ ಮೇಲೂ ನಂಬಿಕೆ ಇಲ್ಲ. ಸಮಸ್ಯೆಗಳು ಬಂದಾಗ ಎಚ್ಚರಿಕೆಯಿಂದ ಗಮನಿಸುತ್ತಾ ಸಾಗಿದರೆ ಮಾಟ, ಮಂತ್ರ, ಬಾನಾಮತಿ ಪ್ರಕರಣಗಳು ಅತ್ಯಂತ ಸರಳವಾಗಿ ಮನುಷ್ಯರ ಕೃತ್ಯವಾಗಿ ಕಾಣುತ್ತವೆ.

ನಿಮ್ಮ ಸುತ್ತಲೂ ಅಗೋಚರವಾದ ಘಟನೆಗಳು ಆಗಿಂದಾಗ್ಗೆ ನಡೆಯುತ್ತಲೇ ಇರುತ್ತವೆ. ಹಾಗೂ ನಡೆಯುತ್ತಿದ್ದರೆ ಅವುಗಳಿಂದ ಬಾಧಿತರಾದವರು ಮತ್ತು ಅವರ ಸುತ್ತಲಿನವರನ್ನು ಎಚ್ಚರದಿಂದ ಅತೀಸೂಕ್ಷ್ಮ ಹಾಗೂ ತಾಳ್ಮೆಯಿಂದ ಗಮನಿಸಿ. ನಿಮ್ಮ ಸಮಸ್ಯೆ ಸುಲಭವಾಗಿ ಬಿಡಿಸಿಕೊಳ್ಳುತ್ತದೆ. ಎಂದಿಗೂ ಯಾವುದೇ ವಿಷಯವನ್ನು ಪ್ರಮಾಣೀಕರಿಸದೆ ನಂಬಬೇಡಿ. ಸುಳ್ಳುಗಳ ಮೂಲಕ ನಿಮ್ಮನ್ನು ವಂಚಿಸುವವರನ್ನು ದೂರವಿಡಿ.

ಮನುಷ್ಯ ಜನ್ಮ ರೂಪ ತಾಳಿದಾಗಿನಿಂದ ಮಾಟ ಮಂತ್ರವಲ್ಲದೆ, ದೆವ್ವ ಭೂತಗಳ ಅಸ್ತಿತ್ವ ಕೂಡಾ ವೈಜ್ಞಾನಿಕವಾಗಿ ಸಾಬೀತು ಮಾಡಲು ಸಾಧ್ಯವಾಗಿಲ್ಲ. ಅದರ ಬಗ್ಗೆ ಸಂಶೋಧನೆ ಸದಾ ಸಾಗುತ್ತಿರುತ್ತಲೇ ಇರುತ್ತದೆ. ಇಂದಲ್ಲ ನಾಳೆ ಉತ್ತರ ಖಂಡಿತ ಸಿಗುತ್ತದೆ. ಅದಕ್ಕೆ ತಾಳ್ಮೆ ಸಹನೆ, ಸಂಶೋಧನೆ ಅಗತ್ಯ. ವಿಜ್ಞಾನ ಯಾವುದನ್ನೂ ಪ್ರಶ್ನೆ ಮಾಡದೆ ಪ್ರಯೋಗಾತ್ಮಕವಾಗಿ ಪರಿಶೀಲಿಸದೆ ಒಪ್ಪಿಕೊಳ್ಳುವುದಿಲ್ಲ. ಎ.ಟಿ.ಕೋವೂರ್‌ ಅವರಿಂದ ಪ್ರಾರಂಭವಾದ ಈ ವೈಜ್ಞಾನಿಕ ಅನ್ವೇಷಣೆ ಡಾ.ಎಚ್‌.ನರಸಿಂಹಯ್ಯ ಅವರಿಂದ ಮುಂದುವರೆದು ನನ್ನವರೆಗೂ ಬಂದಿದೆ. ನಾನು ಕೋವೂರ್‌ ಅವರ ಪ್ರಕರಣಗಳನ್ನು ಓದಿ ತಿಳಿದಾಗ ಇಂತಹ ಘಟನೆಗಳು ಇವೆಯೇ ಎಂದು ಆಶ್ಚರ್ಯವಾಗುತ್ತಿತ್ತು.

ನಾನು ಪವಾಡಗಳ ಹಿಂದಿನ ರಹಸ್ಯವನ್ನು ಭೇದಿಸುತ್ತ ಅವುಗಳ ಹಿಂದಿನ ರಹಸ್ಯವನ್ನು ಮಾಧ್ಯಮಗಳ ಮುಖಾಂತರ ಪ್ರಯೋಗಾತ್ಮಕವಾಗಿ ಪರಿಶೀಲಿಸುತ್ತಾ ಹೋದಂತೆ ಮನಸ್ಸಿಗೆ ಸಂಬಂಧಿಸಿದ ಬರುವ ಪ್ರಕರಣಗಳು ಕೋವೂರ್‌ ಅವರಿಗೆ ಕಾಣಿಸಿಕೊಂಡ ಪ್ರಕರಣಗಳಿಗಿಂತಲೂ ಅತ್ಯಂತ ವಿಭಿನ್ನವಾಗಿವೆ. ಅದಕ್ಕಿಂತಲೂ ಹೆಚ್ಚು ಸವಾಲಿನದಾಗಿವೆ. ಆದರೆ ಅವುಗಳನ್ನು ಸರಳವಾಗಿ ಅರ್ಥೈಸಿಕೊಳ್ಳುವುದರಿಂದ ಸಮಸ್ಯೆಗಳನ್ನು ಬಿಡಿಸುವುದು ಕೊಂಚವೂ ಕಷ್ಟವಾಗಿಲ್ಲ.

ಪುಸ್ತಕ ಸಂಸ್ಕೃತಿ ಕಡಿಮೆಯಾಗಿದೆ ಎಂದು ಎಲ್ಲರೂ ಹಳಹಳಿಸುತ್ತಾರೆ. ಕನ್ನಡ ಪುಸ್ತಕಗಳನ್ನು ಓದುತ್ತಿಲ್ಲ ಎಂದು ಕನ್ನಡ ಲೇಖಕರೂ ಹೇಳುತ್ತಾರೆ. ಆದರೆ ನನಗೆ ಪುಸ್ತಕಗಳಿಂದಲೇ ಅಪಾರ ಅಭಿಮಾನಿ ಬಳಗ ವೃದ್ಧಿಸಿತು. ನನ್ನ ಪುಸ್ತಕಗಳು ಮೂಲೆ ಮೂಲೆಯಲ್ಲೂ, ಎಲ್ಲ ಮನ ಮನೆಗಳನ್ನೂ ತಲುಪಿದೆ ಎನ್ನುವುದಕ್ಕೆ ನನ್ನ ಪುಸ್ತಕಗಳು ಮೇಲಿಂದ ಮೇಲೆ ಮುದ್ರಣವಾಗುತ್ತಿರುವುದೇ ಸಾಕ್ಷಿ.

ಇಲ್ಲಿ ವಿವರಿಸಲಾದ ಎಷ್ಟೋ ಘಟನೆಗಳು ಮನಸ್ಸಿಗೆ ಸಂಬಂಧಿಸಿದ್ದಾದರೂ ಅವುಗಳನ್ನು ಬಿಡಿಸಲಾಗದೆ ಕಗ್ಗಂಟಾಗಿದ್ದೂ ಇವೆ. ಇಂತಹ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹಲವು ಮನೋವೈದ್ಯರು ನನಗೆ ನೆರವಾಗಿದ್ದಾರೆ. ಅವರಲ್ಲಿ ಡಾ.ಅಶೋಕ್‌ ಪೈ, ಡಾ.ಲೋಕೇಶ್‌ ಬಾಬು, ಡಾ.ಪದ್ಮಾಕ್ಷಿ, ಡಾ.ರವೀಶ್‌, ಡಾ.ವಿಜಯ್‌, ಡಾ.ವಿ.ಸಿ.ಸುರೇಶ್‌ ಅವರಿಗೆ ನನ್ನ ಕೃತಜ್ಞತೆಗಳು.

ಸ್ಥಳ ಪರಿಶೀಲನೆ ಮಾಡದೆ, ವಾಸ್ತವ ಅರಿಯದೆ ಟೀವಿ ಕಾರ್ಯಕ್ರಮಗಳಲ್ಲಿ ಬಾನಾಮತಿ, ಮಾಟ ಮಂತ್ರ ವಾಸ್ತವವೇ ಹೌದು ಎಂದು ಬಿಂಬಿಸುತ್ತಿದ್ದ ಹಲವು ವಾಮಾಚಾರಿಗಳು ಮತ್ತು ಗುರೂಜಿಗಳಿಗೆ ನಾನು ಸ್ಥಳ ಪರಿಶೀಲನೆ ಮಾಡಿ, ವಾಸ್ತವವನ್ನು ತಿಳಿಸಿ ಇದು ಬಾನಾಮತಿ ಅಲ್ಲವೇ ಅಲ್ಲ ಎಂದು ದೃಢಪಡಿಸಿದ್ದೇನೆ. ಈ ಕಾರಣಕ್ಕೆ ಅವರ ನಿಷ್ಠೂರಕ್ಕೆ ಒಳಗಾಗಿದ್ದೇನೆ.

ಎಷ್ಟೋ ಮಂದಿ ನನ್ನ ಧೈರ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಾರೆ. ನಿಮ್ಮಂಥವರಿಂದಲೇ ವೈಜ್ಞಾನಿಕತೆ ಉಳಿಯುತ್ತದೆ ಎಂದು ಅನೇಕರು ನನಗೆ ಧೈರ್ಯ ತುಂಬುತ್ತಾರೆ. ಇವರೆಲ್ಲರ ಪ್ರೀತಿಗೆ ನಾನು ಋಣಿ.

ಟೀವಿಗಳಲ್ಲಿ ನನ್ನ ಕಾರ್ಯಕ್ರಮ ನೋಡಿ ಹಲವಾರು ಮಂದಿ ಅನೇಕ ಮನಸ್ಸಿನ ಸಮಸ್ಯೆಗಳು ಹಾಗೂ ಯಾವುದೇ ಟೀವಿಗಳಲ್ಲಿ ವಿಸ್ಮಯಕಾರಕ ಸಂಗತಿಗಳು ಪ್ರಸಾರವಾದಾಗ ëಟೀವಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ. ಅದೇ ರೀತಿಯ ಸಮಸ್ಯೆ ನಮ್ಮನ್ನೂ ಕಾಡುತ್ತಿದೆí ಎಂದು ನನಗೆ ಮಾಹಿತಿ ನೀಡುತ್ತಿರುತ್ತಾರೆ. ಆದರೆ ಪುಸ್ತಕ ಓದಿ ಅರಿವನ್ನು ಹೆಚ್ಚಿಸಿಕೊಳ್ಳುವವರದೇ ಪ್ರತ್ಯೇಕ ಪಂಗಡ.

ನನ್ನ ಪುಸ್ತಕಗಳನ್ನು ಓದುತ್ತ, ಉಡುಗೊರೆ ನೀಡುತ್ತಾ ವೈಚಾರಿಕ ಪ್ರಜ್ಞೆಯನ್ನು ವಿಸ್ತರಿಸುತ್ತಿರುವ ಓದುಗರಲ್ಲಿ ನನ್ನ ಮನವಿ ಏನೆಂದರೆ, ಯಾವುದೇ ಬಗೆಯ ಅಂಧ ವಿಶ್ವಾಸಗಳಿಗೆ ಬಲಿಯಾಗಬೇಡಿ. ಪ್ರತಿಯೊಂದು ವಿಷಯದ ಹಿಂದಿನ ವಾಸ್ತವವನ್ನು ವಿವೇಚನೆ ಸಹನೆ ತಾಳ್ಮೆಯಿಂದ ಪ್ರಯೋಗಾತ್ಮಕವಾಗಿ ಅರಿಯಲು ಪ್ರಯತ್ನಿಸಿ. ನಿಮಗೆ ಗೊತ್ತಾಗದೇ ಇದ್ದಲ್ಲಿ ನನ್ನನ್ನು ಎಂದಿನಂತೆ ಸಂಪರ್ಕಿಸಿ.

ಪ್ರೀತಿಯ ವಿಶ್ವಾಸದಿಂದ,

- ಹುಲಿಕಲ್‌ ನಟರಾಜ್‌

 

ಪುಟಗಳು : 200

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !