ಬಯಲ ಬೆಟ್ಟ (ಇಬುಕ್)

ಬಯಲ ಬೆಟ್ಟ (ಇಬುಕ್)

Regular price
$3.49
Sale price
$3.49
Regular price
Sold out
Unit price
per 
Shipping does not apply

GET FREE SAMPLE

 

ಈ ಪುಸ್ತಕ ಕನ್ನಡದ ಒಬ್ಬ ಸೃಜನಶೀಲ ಲೇಖಕ ಡಾ. ನಾ. ಮೊಗಸಾಲೆ ಅವರ ಆತ್ಮಕತೆಯಾಗಿದೆ.

ಪ್ರತಿಯೊಬ್ಬನೂ ತನ್ನ ಕಾಲದ ಚರಿತ್ರೆಯ ಸಾಕ್ಷೀದಾರನೂ, ಕೆಲವೊಮ್ಮೆ ಅದರ ದಾಖಲುದಾರ ಹಾಗೂ / ಅಥವಾ ನಿರ್ಮಾಪಕನೂ ಆಗಿರುತ್ತಾನೆ. ಮೊದಲ ಪಾತ್ರ ಅನಿವಾರ್ಯದ್ದಾದರೆ ಎರಡು, ಮೂರನೆಯ ಪಾತ್ರಗಳ ಅವನ ಕ್ರಿಯಾಶೀಲತೆ ಹಾಗೂ ಆಯ್ಕೆಯನ್ನೂ ಅವಲಂಬಿಸಿರುತ್ತವೆ. ಡಾ. ಮೊಗಸಾಲೆ ಸ್ವಂತ ಇಚ್ಛೆಯಿಂದ ಈ ಮೂರೂ ಪಾತ್ರಗಳನ್ನೂ ನಿಭಾಯಿಸಿಕೊಂಡು ಬಂದಿದ್ದಾರೆ. ಅದಕ್ಕೆ ಕಾಂತಾವರ ಗ್ರಾಮದ ಸಾಂಸ್ಕೃತಿಕ ಚಟುವಟಿಕೆಗಳೂ, ಈ ಆತ್ಮಕತೆಯೂ ಸಾಕ್ಷಿಯಾಗಿವೆ.

‘Leave the ground better than what it was’ - ಎನ್ನುವುದು ಸ್ಕಾಟ್ ಚಳುವಳಿಯ ಸಂಸ್ಥಾಪಕ ಬೇಡನ್ ಪೋವೆಲ್ ಹೇಳಿದ ಮಾತು. ಹಲವರು ಈ ಮಾತಿಗೆ ಜೀವಂತ ಸಾಕ್ಷಿ ಎಂಬಂತೆ ಬದುಕಿ ಜೀವನವನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ. ಡಾ. ಮೊಗಸಾಲೆ ಅಂಥವರಲ್ಲೊಬ್ಬರು. ದೇವಸ್ಥಾನವೊಂದನ್ನು ಬಿಟ್ಟು ಉಳಿದಂತೆ ಅನಾಮಧೇಯವಾಗಿದ್ದ ಕಾಂತಾವರ ಗ್ರಾಮವನ್ನು ತಮ್ಮ ಸಾಹಿತ್ಯಿಕ / ಸಾಂಸ್ಕೃತಿಕ ಚಟುವಟಿಕೆಗಳಿಂದ ‘ಆಯಸ್ಕಾಂತಾವರ’ವಾಗಿ ಮಾಡಿದ್ದಲ್ಲದೆ ನಿರಂತರವಾಗಿ ಕತೆ, ಕಾದಂಬರಿ, ಕವಿತೆ, ವೈದ್ಯಕೀಯ ಬರಹ, ಇತ್ತೀಚೆಗೆ ವಚನಗಳನ್ನು ಕುರಿತ ಸ್ವೋಪಜ್ಞ ವಿಶ್ಲೇಷಣೆಗಳಿಂದ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಬೆಳೆಸಿರುವ ಈ ಲೇಖಕ ಬಾಲ್ಯದಿಂದಲೂ ಸಾಗಿದ ಕಡುಕಷ್ಟದ, ನೋವಿನ ಹಾದಿಯ ದಾಖಲೆ ಇಲ್ಲಿದೆ. ನಮ್ರತೆ ಹಾಗೂ ಧೃಡತೆಗಳಿಂದ ಅದನ್ನೆಲ್ಲ ಗೆದ್ದು ನಿಂತು ತನ್ನ ಸಂಸಾರವನ್ನೂ ಸರಿಯಾಗಿ ನಿಲ್ಲಿಸಿ ಪರಿಸರಕ್ಕೆ ಪರಿಮಳವನ್ನು ಹರಡಿದ ಯಶೋಗಾಥೆಯ ನಿರೂಪಣೆ ಇಲ್ಲಿದೆ. ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಶತಮಾನದಲ್ಲಾದ ಬೆಳವಣಿಗೆಗಳು, ಹಳೆಯ ಭಾಷಾರೂಢಿಗಳು, ಸಂಪ್ರದಾಯಗಳಲ್ಲಾದ ಪರಿವರ್ತನೆಗಳು, ಹಲವು ವ್ಯಕ್ತಿ ಚಿತ್ರಗಳು, ಕಾಂತಾವರದ ‘ಕನ್ನಡ ಸಂಘ’ ಒಡಮೂಡಿ ಬೆಳೆದ ಬಗೆ - ಈ ಎಲ್ಲದರ ವಿವರ ಇಲ್ಲಿ ಸಿಗುತ್ತದೆ. ಹಲವಾರು ದೃಷ್ಟಿಗಳಿಂದ ಈ ಆತ್ಮಕತೆ ದ.ಕ. ಜಿಲ್ಲೆಯ ಸಾಂಸ್ಕೃತಿಕ ಇತಿಹಾಸದ ಹಲವು ಎಳೆಗಳನ್ನು ರೇಖಿಸುತ್ತದೆ. ಆ ಪ್ರದೇಶದ ಬೆಳವಣಿಗೆಯನ್ನು ಕುರಿತ ನಮ್ಮ ಜ್ಞಾನಕ್ಕೆ ಇದು ಸಾಕಷ್ಟು ಅಂಶಗಳನ್ನು ಸೇರಿಸಿಕೊಡುತ್ತದೆ.


ಎಸ್‌.ಪಿ. ಪದ್ಮಪ್ರಸಾದ್‌
Jaineducation16@gmail.com
ತುಮಕೂರು
ಶ್ರಾವಣ, 2017

 

ಪುಟಗಳು: 678

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !