ಗಾಳಿ ಪಳಗಿಸಿದ ಬಾಲಕ

ಗಾಳಿ ಪಳಗಿಸಿದ ಬಾಲಕ

Regular price
$6.99
Sale price
$6.99
Regular price
Sold out
Unit price
per 
Shipping does not apply

ವಿದ್ಯುತ್ ಇಲ್ಲದ ಆಫ್ರಿಕಾ ಖಂಡದ ಒಂದು ಬಡ ಹಳ್ಳಿಯಲ್ಲಿನ ಬಾಲಕನೊಬ್ಬ, ಗ್ರಂಥಾಲಯದ ಪುಸ್ತಕಗಳನ್ನು ಓದಿ, ಒಂದು ಗಾಳಿ ಯಂತ್ರವನ್ನು ಸ್ವತಃ ಮಾಡಿ, ಮನೆಗೆ ಬೆಳಕು ತರುತ್ತಾನೆ. ಇದೊಂದು ರೋಚಕವಾದ, ಸ್ಪೂರ್ತಿದಾಯಕ ಜೀವನಕಥನ.

ಆಫ್ರಿಕಾ ಖಂಡದ ಮಾಲಾವಿ ದೇಶದಲ್ಲಿ ೧೯೮೭ರ ಅಗಸ್ಟ್ ೫ ರಂದು ಜನನ. ೨೦೦೨ರಲ್ಲಿ ಉಂಟಾದ ಭೀಕರ ಕ್ಷಾಮದಿಂದ ವಿಲಿಯಂ ಶಾಲೆಯನ್ನು ಬಿಡಬೇಕಾಯಿತು. ಬಡತನ, ಹಸಿವು, ಕ್ಷಾಮ, ಹೀಗೆ ಅನೇಕ ಕಷ್ಟ ಕಾರ್ಪಣ್ಯದ ನಡುವೆಯೂ ಎದೆಗುಂದದೆ ಗ್ರಂಥಾಲಯದಲ್ಲಿದ್ದ ಪುಸ್ತಕಗಳನ್ನು ಓದಿ, ಸ್ಫೂರ್ತಿ ಪಡೆದರು. ಹದಿನಾಲ್ಕನೇ ವಯಸ್ಸಿನಲ್ಲೇ ಜನರು ಬಿಸಾಡಿದ ಹಳೆಯ ವಸ್ತುಗಳಿಂದಲೇ ಗಾಳಿಯಂತ್ರವನ್ನು ತಯಾರಿಸಿ ತಮ್ಮ ಮನೆಗೆ ವಿದ್ಯುತ್ ಸೌಲಭ್ಯವನ್ನು ಕಲ್ಪಿಸಿದರು. ಆ ಬಳಿಕ ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯನ್ನೂ ಪಡೆದು, ಪ್ರಸ್ತುತ ಅಮೇರಿಕದ ನ್ಯೂ ಹ್ಯಾಂಪ್‌ಶೈರ್‌ನಲ್ಲಿರುವ ಡಾರ್ಟ್‌ಮೌತ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ವಿಲಿಯಂ ಕುರಿತು ತಯಾರಿಸಲಾದ ‘ವಿಲಿಯಂ ಅಂಡ್ ದ ವಿಂಡ್‌ಮಿಲ್ಗೆ ಅತ್ಯುತ್ತಮ ಸಾಕ್ಷ್ಯಚಿತ್ರವೆಂದು ಪ್ರಶಸ್ತಿ ಲಭಿಸಿದೆ. ೨೦೧೩ರಲ್ಲಿ ‘ಟೈಮ್ ಪತ್ರಿಕೆಯ 30 People Under 30 Changing The World ಎನ್ನುವ ಪಟ್ಟಿಯಲ್ಲಿ ಅವರ ಹೆಸರು ಸೇರ್ಪಡೆಯಾಗಿತ್ತು.

ಈ ಪುಸ್ತಕದ ಸಹಲೇಖಕರಾದ ಬ್ರಿಯಾನ್ ಮೀಲರ್, ಇಂಗ್ಲೀಷ್ ಬಾರದ ಹುಡುಗ ವಿಲಿಯಂ ಕಾಂಕ್ವಾಂಬಾನ ಅದ್ಭುತ ಸಾಧನೆಗೆ ಆತ್ಮಕಥೆಯ ರೂಪ ಕೊಟ್ಟು, ಹೊರಜಗತ್ತಿಗೆ ತಿಳಿಸಿ ಕೊಟ್ಟಿದ್ದಾರೆ. ಅದಕ್ಕಾಗಿ ಸುಮಾರು ಒಂದು ವರ್ಷ ವಿಲಿಯಂನ ಕುಟುಂಬದವರೊಡನೆ ವಾಸಿಸುತ್ತಾ, ವಿಲಿಯಂನ ಸ್ನೇಹಿತರು, ಬಂಧುಗಳನ್ನು ಸಂದರ್ಶಿಸಿದ್ದಾರೆ. ವಿಲಿಯಂ ಚಿಚೆವಾ ಭಾಷೆಯಲ್ಲಿ ತನ್ನ ಕಥೆಯನ್ನು ಹೇಳುತ್ತಿದ್ದರೆ, ಅದನ್ನು ಬ್ಲೆಸ್ಸಿಂಗ್ಸ್ ಎನ್ನುವ ಅನುವಾದಕರ ಸಹಾಯದಿಂದ ಆಂಗ್ಲ ಭಾಷೆಯಲ್ಲಿ ಕಥೆಯ ರೂಪವನ್ನು ಕೊಡುತ್ತಾ ಹೊರಟರು. ವಿನೋದದ ವಿಷಯವೆಂದರೆ ಬ್ರಿಯಾನ್ ರಾತ್ರಿಯ ಹೊತ್ತು ವಿಲಿಯಂನ ಗಾಳಿಯಂತ್ರವನ್ನು ಬಳಸಿ ತಮ್ಮ ಲ್ಯಾಪ್‌ಟಾಪ್ ಚಾರ್ಜ್ ಮಾಡಿಕೊಳ್ಳುತ್ತಿದ್ದುದು ಹಾಗೂ ದೀಪದ ಬೆಳಕಿನಲ್ಲಿ ಕಥೆಯನ್ನು ಬರೆಯುತ್ತಿದ್ದುದು! ಬ್ರಿಯಾನ್ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಪದವಿಯನ್ನು ಪಡೆದಿದ್ದಾರೆ, ಕೀನ್ಯಾ, ನೈರೋಬಿ, ಕಾಂಗೋ ದೇಶಗಳಲ್ಲಿ ಪತ್ರಿಕಾ ವರದಿಗಾರನಾಗಿಯೂ ಕೆಲಸವನ್ನು ನಿರ್ವಹಿಸಿದ್ದಾರೆ. “Muck City: Winning and Losing in Football’s Forgotten Town”, “All Things Must Fight to Live” ಇವರ ಇನ್ನಿತರ ಕೃತಿಗಳು. ಪ್ರಸ್ತುತ ಆಸ್ಟಿನ್(ಟೆಕ್ಸಾಸ್)ನಲ್ಲಿ ವಾಸವಿದ್ದಾರೆ.

ಈ ಕೃತಿಯನ್ನು ಕನ್ನಡಕ್ಕೆ ತಂದಿರುವ ಕರುಣಾ ಅವರದ್ದು ಧಾರವಾಡದಲ್ಲಿ ಜನನ ಮತ್ತು ಪ್ರಾಥಮಿಕ ಶಿಕ್ಷಣ. ನಂತರ ಬೆಂಗಳೂರಿನಲ್ಲಿ ಮುಂದುವರೆದ ಶಿಕ್ಷಣ ಮತ್ತು ವಾಸ. ಹ್ಯೂಲೆಟ್ ಪ್ಯಾಕರ್ಡ್(HP) ಮತ್ತಿತರ ಐ.ಟಿ ಸಂಸ್ಥೆಗಳಲ್ಲಿ ಹದಿಮೂರು ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ವೃತ್ತಿಯಿಂದ ಕೆಲಕಾಲ ಬಿಡುವನ್ನು ಪಡೆದು, ಪತಿ ಗುರುಶಂಕರ ಅವರೊಡನೆ ಅಮೇರಿಕಾದಲ್ಲಿ ವಾಸವಿದ್ದಾರೆ. ಕನ್ನಡ ಸಾಹಿತ್ಯ, ಓದು, ಬರವಣಿಗೆ, ಕಲೆ ಮತ್ತು ಸಂಸ್ಕೃತಿ, ಕರ್ನಾಟಕ ಶಾಸ್ತ್ರೀಯ ಸಂಗೀತ, ಸಾವಯವ ಕೃಷಿ ಇವರ ಆಸಕ್ತಿಯ ವಿಷಯಗಳು.

ಪುಟಗಳು : 256