ಎಲ್ಲರಿಗೂ ತಿಳಿದಿರುವಂತೆ ಸಚಿನ್ ತೆಂಡೂಲ್ಕರ್ ಇಡೀ ವಿಶ್ವ ಕ್ರಿಕೆಟ್‍ನಲ್ಲಿ ಕಂಗೊಳಿಸಿದ ದೈತ್ಯ ಪ್ರತಿಭೆ. ‘ನ ಭೂತೋ ನ ಭವಿಷ್ಯತಿ’ ಎಂಬ ಮಾತಿನಂತೆ ವಿಶ್ವ ಕ್ರಿಕೆಟ್ ಕ್ಷೇತ್ರದಲ್ಲಿ ಪರಿಪೂರ್ಣತೆಯನ್ನು ಸಾಧಿಸಿದಂತಹ ಇಂತಹ ಆಟಗಾರ ಇನ್ನೊಬ್ಬರಿಲ್ಲ. ಅದರಲ್ಲೂ ಭಾರತೀಯ ಕ್ರಿಕೆಟ್ ಕ್ಷೇತ್ರಕ್ಕೆ ಇಂತಹ ಮೇರು ಪ್ರತಿಭೆ ಒಲಿದಿರುವುದು ನಮ್ಮ ಭರತ ಭೂಮಿಯ ಭಾಗ್ಯವೇ ಸರಿ.
ಕ್ರಿಕೆಟ್ ಜಗತ್ತಿಗೆ ಕಳಶ ಪ್ರಾಯವಾಗಿರುವ ತೆಂಡೂಲ್ಕರ್ ಸಾಧನೆಗಳ ಬಗ್ಗೆ ಅನೇಕರಿಗೆ ತಿಳಿದಿರುತ್ತದೆ. ಆದರೆ ಅವರ ಬಾಲ್ಯ, ಸಾಧನೆ ಮಾಡಲು ಅವರು ಎಳೆ ವಯಸ್ಸಿನಿಂದ ಶ್ರಮ ಪಟ್ಟ ರೀತಿ, ಏಕಾಗ್ರತೆ, ಕಷ್ಟ ಸಹಿಷ್ಣುತೆ, ವೈವಾಹಿಕ ಜೀವನ, ಸರಳ ವ್ಯಕ್ತಿತ್ವ, ದಾನಶೀಲತೆ, ಹವ್ಯಾಸ ಮುಂತಾದವುಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಾರದು. ಕನ್ನಡ ಓದುಗರಿಗೆ ಮತ್ತು ಕ್ರಿಕೆಟ್ ಪ್ರಿಯರಿಗೆ ಇವೆಲ್ಲವನ್ನೂ ಈ ಕೃತಿ ಪರಿಚಯಿಸುತ್ತದೆ.
ಕ್ರಿಕೆಟ್ ಕ್ಷೇತ್ರದಲ್ಲಿ ತೆಂಡೂಲ್ಕರ್ ಅವರ ವೈಯಕ್ತಿಕ ಬದುಕು ಮತ್ತು ಸಾಧನೆಯ ಪ್ರಮುಖ ಅಂಕಿ-ಅಂಶಗಳ ವಿವರಗಳನ್ನು ಒಳಗೊಂಡ ಕೃತಿ ಇದಾಗಿದೆ. ಕರ್ನಾಟಕ ಹಾಗೂ ವಿಶ್ವದಾದ್ಯಂತ ಇರುವ ತೆಂಡೂಲ್ಕರ್ ಅಭಿಮಾನಿಗಳಿಗೆ ಈ ಪುಸ್ತಕ ಅತ್ಯಂತ ಸಂತಸವನ್ನು ನೀಡಲಿದ್ದು, ಕನ್ನಡದ ಮಟ್ಟಿಗೆ ಅತ್ಯಂತ ದಾಖಲಾರ್ಹ ಕೃತಿಯಾಗಲಿದೆ.
ಪುಟಗಳು: 400
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !