ಕೆರೆಯಂಗಳದ ನವಾಬ

ಕೆರೆಯಂಗಳದ ನವಾಬ

Regular price
$2.99
Sale price
$2.99
Regular price
Sold out
Unit price
per 
Shipping does not apply

GET FREE SAMPLE

ಕನ್ನಡ ಸಾಹಿತ್ಯದಲ್ಲಿ ಮುಸ್ಲಿಮ್‌ ಜಗತ್ತಿನ ತಲ್ಲಣಗಳನ್ನು ಬರೆದ ಲೇಖಕರ ಪಟ್ಟಿ ತೆರೆದಾಗ ಬೊಳುವಾರು, ಕಟ್ಪಾಡಿ, ಸಾರಾ, ಅಬ್ದುಲ್‌ ರಶೀದ್‌, ಮುಹಮ್ಮದ್‌ ಕುಳಾಯಿ ಮೊದಲಾದವರ ಹೆಸರುಗಳು ಬರುತ್ತವೆ. ಆದರೆ ಈ ಜಗತ್ತು ಕರಾವಳಿಗೆ ಸೀಮಿತವಾಗಿರುವ ಬ್ಯಾರಿ ಜನಾಂಗಕ್ಕೆ ಸಂಬಂಧಪಟ್ಟದ್ಧಷ್ಟೇ ಹೊರತು, ಉತ್ತರ ಕರ್ನಾಟಕದ ಮುಸ್ಲಿಮ್‌ ಸಮುದಾಯದ ಬದುಕು, ಸಂಸ್ಕೃತಿ, ನೋವು ನಲಿವುಗಳು ಪ್ರತಿಫಲನಗೊಂಡಿರುವುದು ಕಡಿಮೆ. ಸಾಧಾರಣವಾಗಿ ಉರ್ದು ಮಾತೃಭಾಷೆಯ ಮುಸ್ಲಿಮರ ಬದುಕಿಗೂ ಬ್ಯಾರಿ ಮಾತೃ ಭಾಷೆಯ ಮುಸ್ಲಿಮರ ಬದುಕಿಗೂ ಅಜಗಜಾಂತರವಿದೆ.  ಈ ಕಾರಣದಿಂದಲೇ ಯುವ ಬರಹಗಾರ ಶಿ.ಜು. ಪಾಶ ಅವರ ‘ಕೆರೆಯಂಗಳದ ನವಾಬ’ ಕತಾಸಂಕಲನ ಮಹತ್ವವನ್ನು ಪಡೆದುಕೊಳ್ಳುತ್ತದೆ. ಓರ್ವ ಪತ್ರತರ್ತನೂ ಆಗಿರುವ ಪಾಶ ಅವರು ತಮ್ಮ ಸಮುದಾಯದ ಬದುಕನ್ನು ಇಲ್ಲಿ ವಿಭಿನ್ನವಾಗಿ ಹಿಡಿದಿಟ್ಟಿದ್ದಾರೆ. ಕನ್ನಡಕ್ಕೆ ಅಪರಿಚಿತವಾದ ಜಗತ್ತನ್ನು ತಮ್ಮದೇ ಶೈಲಿ, ಭಾಷೆಯ ಮೂಲಕ ಪರಿಚಯಿಸಿದ್ದಾರೆ.

 

ಇಲ್ಲಿ ಒಟ್ಟು 18 ಕತೆಗಳಿವೆ. ಲೇಖಕ ಬದುಕಿದ ಪರಿಸರ ಇಲ್ಲಿರುವ ಪ್ರತೀ ಕತೆಗಳಲ್ಲೂ ಗಾಢವಾಗಿ ಪರಿಣಾಮವನ್ನು ಬೀರಿವೆ. ಮಿಳಘಟ್ಟ ಬಡಾವಣೆಯ ಕೆರೆ ಅಂಗಳ ಒಂದು ಕೊಳಚೆಗೇರಿ. ಇಲ್ಲಿರುವ ಪ್ರತೀ ಮನುಷ್ಯನೊಳಗೂ ನೂರಾರು ಕತೆಗಳಿವೆ. ಅವರ ವಿಕ್ಷಿಪ್ತ ಬದುಕಿನ ಸುತ್ತ ಶಿಜು ಕತೆಗಳು ಸುತ್ತುತ್ತವೆ. ಇಲ್ಲಿನ ಮುಸ್ಲಿಮರು ಕರಾವಳಿಯ ಮುಸ್ಲಿಮರಿಗಿಂತ ತುಂಬಾ ಭಿನ್ನವಾದವರು. ಕೆರೆ ಅಂಗಳದ ಹೂವಿನಷ್ಠು ಮೃದು ಮತ್ತು ಕಲ್ಲಿನಷ್ಟು ಕಠೋರ ಬದುಕನ್ನು ಲೇಖಕ ಹೆಕ್ಕಿ ತೆಗೆದಿದ್ದಾರೆ. ಈ ಕಾರಣದಿಂದಲೇ ಈ ಕತೆಗೆ ಬಳಸಿರುವ ಭಾಷೆಯೂ ಒಂದು ವಿಭಿನ್ನ ಪ್ರಯತ್ನವೇ ಆಗಿದೆ. ಅತ್ಯಂತ ತಮಾಷೆಯಾಗಿ ಕಾಣುವ ಕೆರೆಯಂಗಳದ ನವಾಬನ ಖತ್ನಾ ಅಥವಾ ಸುನ್ನತಿಯ ಕತೆಯನ್ನು ಹೇಳುತ್ತಲೇ ಕೆರೆಯಂಗಳವನ್ನು ಸುತ್ತಿಕೊಂಡಿರುವ ರಾಜಕೀಯವನ್ನು ಪ್ರಸ್ತುತ ಪಡಿಸುವ ಪ್ರಯತ್ನವನ್ನು ಲೇಖಕರು ಮಾಡುತ್ತಾರೆ. ನಮಾಝು, ಕತ್ತೆ ಸೌದೆಯ ನಾಗಿ, ತುಪ್ಪದ ಖರ್ಜೂರ ಹೀಗೆ.. ಒಂದೊಂದು ಕತೆಯೂ ಒಂದೊಂದು ಅನುಭವ. ಕನ್ನಡ ಸಾರಸ್ವತ ಲೋಕಕ್ಕೆ ‘ಕೆರೆಯಂಗಳದ ನವಾಬ’ ಒಂದು ವಿಭಿನ್ನ ಕೊಡುಗೆ ಎನ್ನುವುದರಲ್ಲಿ ಎರಡು ಮಾತಿಲ್ಲ.

-ಮಾಹಿತಿ ಕೃಪೆ 'ವಾರ್ತಾ ಭಾರತಿ'

 

ಪುಟಗಳು: 128

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !