ಬರಹಗಾರರು: ಜೋಗಿ
ಕತೆ ಚಿತ್ರಕತೆ ಎಲ್ಲವೂ ಕತ್ತಲಲ್ಲಿ ನಮ್ಮ ಮುಂದೆ ಕಾಣದೇ ಇರುವಂಥ ಸರೋವರಕ್ಕೆ ಕಲ್ಲು ಎಸೆಯುವ ಪ್ರಯತ್ನ. ಕಲ್ಲು ಬಿದ್ದ ಸದ್ದು ಕೇಳೀತೇ ಹೊರತು, ಅದು ಎಬ್ಬಿಸುವ ಅಲೆಯಾಗಲೀ, ಎಷ್ಟು ದೂರ ಕಲ್ಲು ಬಿದ್ದಿದೆ ಅನ್ನುವುದಾಗಲೀ ಕಾಣಿಸದು. ಅದಕ್ಕೇ ಸಿನಿಮಾ ಅನ್ನೋದು ನಿಗೂಢ ಸಂಭ್ರಮ.
ಸಿನಿಮಾ ಎಂಥಾ ಕಲಾಕೃತಿ ಎಂದರೆ ಒಬ್ಬ ಸಹೃದಯೀ ಪ್ರೇಕ್ಷಕನಾಗಿ ಸಿನಿಮಾ ನೋಡುವ ಹೊತ್ತಿಗೆ ಕತೆ, ಚಿತ್ರಕತೆ, ಸಂಭಾಷಣೆ, ಛಾಯಾಗ್ರಹಣ, ಸಂಕಲನ ಮುಂತಾದ ಪ್ರಭೇದಗಳು ಪ್ರತ್ಯೇಕ ಪ್ರತ್ಯೇಕವಾಗಿ ನಮಗೆ ಗೋಚರಿಸುವುದೇ ಇಲ್ಲ. ಹೆಸರುಬೇಳೆ ಪಾಯಸ ಸವಿಯುವಾಗ ಅದರ ರುಚಿಯೊಂದೇ ನಮ್ಮನ್ನು ಸೆಳೆಯುವುದು. ಪಾಯಸ ಮಾಡಬೇಕು ಎಂದು ಬಯಸುವವರು ಮಾತ್ರ ಅದರ ರೆಸಿಪಿ ಏನೆಂದು ವಿಚಾರಿಸುತ್ತಾ, ಅದಕ್ಕೆ ಏನೇನು ಹಾಕಿದ್ದಾರೆ, ಯಾವ ಪ್ರಮಾಣದಲ್ಲಿ ಹಾಕಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ತೋರಬಹುದು.
ಸಿನೆಮಾದ ಕುರಿತ ಅಂತಹ ಕುತೂಹಲಿಗಳಿಗೆ ಈ ಕೃತಿ. ಇಲ್ಲಿ ಸಿನೆಮಾ ಉದ್ಯಮದ ಹಲವು ಮೇರು ಪ್ರತಿಭೆಗಳು ತಮ್ಮ ಅನುಭವವನ್ನೂ ಹಂಚಿಕೊಂಡಿದ್ದಾರೆ.
ನೀವು ಸಿನೆಮಾ ಪ್ರಿಯರಾದರೆ, ಇದು ನೀವು ಓದಲೇಬೇಕಾದ ಪುಸ್ತಕ.