ಈ ಕೃತಿ ಒಂದು ಫಿಕ್ಷನ್ ಆದರೂ ಭಿನ್ನ ನಿರೂಪಣೆಯಿಂದ ಕೂಡಿದೆ. ಈ ಪುಸ್ತಕದ ಒಳಹೊಕ್ಕಂತೆಲ್ಲ ನೀವು ಹೊಸ ಕಲಿಕೆಯೊಂದನ್ನು ಕಾಣತೊಡಗ್ತೀರಿ. ಇದು ದೀಪಸ್ತಂಭದ ಹಾಗೆ. ಎಂಥ ಆಳಸಮುದ್ರದ ನಡುವಿಂದಲೂ ಅಲೆಗಳ ಹೊಡೆತವನ್ನೆಲ್ಲ ಮೀರಿ ದಡಮುಟ್ಟಲು ಇದು ದಾರಿ ತೋರಿಸುತ್ತೆ. “ಆನಂದಕ್ಕೊಂದು ಮಿಸ್ಡ್ ಕಾಲ್”ನಿಮ್ಮ ದಿಂಬು ಕೆಳಗಿನ ಸಂಗಾತಿಯಾಗಬಲ್ಲದು. ತಣ್ಣನೆಯ ಕಡುಗತ್ತಲ ರಾತ್ರಿಯಲ್ಲಿ, ಬೆಚ್ಚನೆ ಕಂಬಳಿಯಂತೆ ನಿಮಗೆ ಸುರಕ್ಷೆ ಒದಗಿಸಬಲ್ಲದು.
ಈ ಪುಸ್ತಕ ಪ್ರತಿ ಸರ್ತಿಯೂ ನಿಮ್ಮೆದುರು ನಿಮ್ಮೊಳಗನ್ನೇ ಹೊಸತಾಗಿ ಅನಾವರಣಗೊಳಿಸುತ್ತ ಹೋಗುತ್ತೆ. ಆದ್ದರಿಂದ ಇದು ಓದಿಗೆ ಮತ್ತು ಜೀವಮಾನದ ಉದ್ದಕ್ಕೂ ಆಗಾಗಿನ ಮರುಓದಿಗೆ ಹೇಳಿಮಾಡಿಸಿದ ಪುಸ್ತಕ. ನೀವು ಓದುತ್ತಿದ್ದ ಹಾಗೆಲ್ಲ; ವಿರಮಿಸಿ, ಪ್ರತಿಬಿಂಬಿಸಿ, ಅದರೊಳಗಿನ ಉನ್ನತ ಒಳನೋಟಗಳನ್ನ ಅರಿತುಕೊಳ್ಳಿ. ಮತ್ತೆ ಮುಂದುವರೆಸಿ.
ನೀವು ಈ ಪುಸ್ತಕವನ್ನು ಓದುತ್ತ ಹೋದಂತೆಲ್ಲಾ ನಿಮ್ಮ ದೇಹ, ಮನಸ್ಸು ಮತ್ತು ಆತ್ಮದೊಳಗಿನ ಪ್ರಜ್ಞಾಸ್ತರಗಳಲ್ಲಿ ಏರಿಕೆಯಾಗ್ತಿರುವುದನ್ನು ಗಮನಿಸಿ. ಈ ಪುಸ್ತಕ ನಿಮ್ಮನ್ನು ಕದಡುತ್ತಾ ಬದುಕುವ ಹಾಗೆ ಮಾಡುತ್ತೆ. ಮತ್ತು ನೀವು ಪರಿವರ್ತನೆ ಹೊಂದಿ, ಎಂದೆಂದಿಗೂ ಬದಲಾಗಿಬಿಡ್ತೀರಿ.
“ಆನಂದಕ್ಕೆ ಒಂದು ಮಿಸ್ಡ್ ಕಾಲ್”ಅನ್ನು ಅತ್ಯಂತ ವಿಭಿನ್ನ ರೀತಿಯಲ್ಲಿ ಬರೆಯಲಾಗಿದೆ. ಈ ಪುಸ್ತಕದ ಅರ್ಥ ಕೇವಲ ಪದಗಳಲ್ಲಿ ಮಾತ್ರವಲ್ಲ; ಪದಗಳ ನಡುವೆ, ವಾಕ್ಯಗಳ ನಡುವೆಯೂ ಇದೆ. ಹಾಗೂ ಅವುಗಳ ನಡುವಿನ ಮೌನದಲ್ಲೂ ಇದೆ.
ನೀವು ಈ ಪುಸ್ತಕವನ್ನು ಓದಿಯೂ ಸತ್ವವನ್ನು ಗ್ರಹಿಸಲು ಸಾಧ್ಯವಾಗದೆ ಹೋದರೆ ಮಾತ್ರ ಅದೊಂದು ದೊಡ್ಡ ನಷ್ಟವಾಗುತ್ತೆ.
ಕೊನೆಯದಾಗಿ, ಈ ಪುಸ್ತಕವನ್ನು ನಿಮ್ಮ ಹೃದಯದಿಂದ ಓದಿ, ಮನಸ್ಸಿನಿಂದ ಅಲ್ಲ.
ಪುಟಗಳು: 180
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !