ಹಣ, ಸಂಪತ್ತು ಸೃಷ್ಟಿಸುವುದು ಮತ್ತು ವ್ಯಾಪಾರ ಸಮುದಾಯದವರ ಕಣ್ಣುಗಳಿಂದ ಜೀವನದ ವಿಸ್ಮಯಕರ ಅಂಶಗಳನ್ನು ವಿವರಿಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಮಾರ್ವಾಡಿಗಳು, ಸಿಂಧಿಗಳು, ಗುಜರಾತಿಗಳು, ಪಾರ್ಸಿಗಳು, ಚೆಟ್ಟಿಯಾರ್‌ಗಳು ಅಥವಾ ಹಣದ ಪ್ರಜ್ಞೆ ಇರುವ ಯಾವುದೇ ಸಮುದಾಯದವರಾಗಿರಬಹುದು. ಅವರ ಕಣ್ಣುಗಳಿಂದ ಹಣವನ್ನು ಪರಿಶೀಲಿಸುವುದೇ ಆದರೆ, ಮಾಂತ್ರಿಕವೋ ಎನ್ನುವಂತೆ ಸಮೃದ್ಧತೆಯ ಹಾದಿ ತೆರೆದುಕೊಂಡು ನಿಮ್ಮ ಬದುಕು ಬಂಗಾರವಾಗುತ್ತದೆ. ನಿಮ್ಮ ಜೀವನ ಉತ್ತಮವಾಗುವ ನಿಟ್ಟಿನಲ್ಲಿ ವಿಕಸನಕ್ಕೆ ಈ ಕೃತಿ ದಾರಿ ಮಾಡಿಕೊಡಬೇಕೆಂಬುದೇ ನಮ್ಮ ಉದ್ದೇಶ. ಈ ಕೃತಿಯಲ್ಲಿ ಬರುವ ಎಲ್ಲಾ ಕಥೆಗಳು, ಕಥಾ ನಿರೂಪಣೆಗಳು ನೀವೆಂದೂ ಕಂಡು ಕೇಳರಿಯದ ವಿಷಯಗಳ ಸುತ್ತ ಪರಿಭ್ರಮಿಸುವಂತೆ ಮಾಡುತ್ತದೆ! ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳನ್ನು ಆರಿಸಿಕೊಳ್ಳುವುದಷ್ಟೇ ನಿಮ್ಮ ಕೆಲಸ.ಒಂದು ಸೂಪರ್ ಮಾರ್ಕೆಟ್‌ನಲ್ಲಿ ನಿಮಗೆ ಬೇಕಾಗಿರುವ ಎಲ್ಲಾ ವಸ್ತುಗಳು ಸಿಗುವಂತೆ, ಈ ಕೃತಿಯಲ್ಲಿ ಎಲ್ಲವೂ ವಿಶದಪಡಿಸಲಾಗಿದೆ. ಬಿಸಿನೆಸ್ 360º ಆರಿಸಿಕೊಂಡಿದ್ದಕ್ಕೆ ನಿಮಗೆ ಧನ್ಯವಾದ. ಇದನ್ನು ನಿಮ್ಮ ಕಪಾಟಿನಲ್ಲಿ ಇಟ್ಟು ಮರೆಯಬೇಡಿ. ಅದನ್ನು ಓದಿ. ಮತ್ತೆ ಮತ್ತೆ ಓದಿ. ಪ್ರತಿಯೊಂದು ಬಾರಿಯೂ ಒಂದು ನೂತನ ದೃಷ್ಟಿಕೋನ ಥಟ್ಟನೆ ತೆರೆದುಕೊಳ್ಳುತ್ತದೆ. ಬಿಸಿನೆಸ್ 360º ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡಿ, ಕೃತಿಯಲ್ಲಿರುವ ಒಳನೋಟಗಳ ಕುರಿತು ಟ್ವೀಟ್ ಮಾಡಿ, ಗೆಳೆಯರೊಂದಿಗೆ ಚರ್ಚಿಸಿ. ಅದಕ್ಕಿಂತ ಮುಖ್ಯ ಎಂದರೆ ಡೈನಿಂಗ್ ಟೇಬಲ್ ಬಳಿ ನಿಮ್ಮ ಕುಟುಂಬ ಸದಸ್ಯರೊಂದಿಗೆ ಚರ್ಚೆ ಮಾಡಿ. ಈ ಪುಸ್ತಕದ ಉದ್ದೇಶವಿಷ್ಟೇ. ಇದನ್ನು ಓದುತ್ತಾ ಎಂಜಾಯ್ ಮಾಡಿ. ಬಹಳಷ್ಟು ವಿಷಯಗಳನ್ನು ಕಲಿಯಿರಿ. ನಿಮ್ಮ ಬದುಕಿನ ಮೌಲ್ಯಗಳನ್ನು ಈ ಪುಸ್ತಕದ ಮೂಲಕ ಹೆಚ್ಚಿಸಿಕೊಳ್ಳಿ!
ಪುಟಗಳು: 184