ಬರಹಗಾರರು: ಜಯದೇವ ಪ್ರಸಾದ ಮೊಳೆಯಾರ
ಸಾಲವನ್ನು ಕೊಂಬಾಗ ಹಾಲೋಗರ ಉಂಡಂತೆ, ಸಾಲಿಗನು ಬಂದಾಗ ಕಿಬ್ಬದಿಯ ಕೀಲು ಮುರಿದಂತೆ' ಎಂಬ ಸರ್ವಜ್ಞನ ವಚನ ಕೇಳದವರಿಲ್ಲ. ಹಾಗಿದ್ದರೆ ಇಂದಿನ ದಿನಗಳಲ್ಲಿ ಯಾವ ಸಾಲವನ್ನು ಯಾವ ಸಂದರ್ಭದಲ್ಲಿ ಹೇಗೆ ಮಾಡಬೇಕು? ವಿವಿಧ ರೀತಿಯ ಸಾಲಗಳು ಯಾವುವು? ದುಡ್ಡಿನ ಅವಶ್ಯಕತೆಯನ್ನು ನಿರ್ವಹಿಸುವಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಯೇನು? ಮುಂತಾದ ಪ್ರಶ್ನೆಗಳಿಗೆ ಪ್ರಾಯೋಗಿಕವಾದ ಟಿಪ್ಸ್ ಜೊತೆ ಉತ್ತರ ನೀಡುವ ಕೆಲಸವನ್ನು ’ಕಾಸು-ಕುಡಿಕೆ’ ಅಂಕಣದ ಜನಪ್ರಿಯ ಬರಹಗಾರ ಜಯದೇವ ಪ್ರಸಾದ ಮೊಳೆಯಾರ ಅವರು ಇಲ್ಲಿ ಮಾಡಿದ್ದಾರೆ.