ದೇಶವಿದೇಶ - 3 (ಮಿಲನಿಯಮ್ - 11)

ದೇಶವಿದೇಶ - 3 (ಮಿಲನಿಯಮ್ - 11)

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಈ ಶತಮಾನದ ಅತ್ಯಂತ ರುದ್ರಭೀಕರ ವೈಚಿತ್ರ್ಯಗಳಲ್ಲಿ ಅಮೆಜಾನ್ ಮತ್ತು ಹಿಮಾಲಯ ಅವಿಸ್ಮರಣೀಯವಾದುವು. ಇವು ಮನುಷ್ಯರನಿಗೆ ಒಡ್ಡಿದ ಸವಾಲುಗಳು ನಿಜವಾಗಿಯೂ ಈ ಚಿಕ್ಕ ಪುಸ್ತಕದಲ್ಲಿ ಸಮಗ್ರವಾಗಿ ಚಿತ್ರಿಸಲು ಸಾಧ್ಯವೇ ಇಲ್ಲ. ಇಲ್ಲಿರುವುದು ಅದರ ಮಿಂಚು ನೋಟ ಅಷ್ಟೇ. ಆದರೆ ನಾಗರೀಕತೆ ಮುಂದುವರಿದಂತೆ ಮನುಷ್ಯನ ಅಡೆತಡೆಯಿಲ್ಲದ ಪರಿಸರ ನಾಶ, ಮತ್ತು ಮಾಲಿನ್ಯ ದೊಡ್ಡ ಪಿಡುಗಾಗಿ ಈ ಎರಡು ಮಹಾ ವೈಚಿತ್ರ್ಯಗಳನ್ನೂ ಕಾಡುತ್ತಿರುವುದು ಕಳವಳಕರವಾಗಿದೆ. ಅಮೆಜಾನಿನ ಮಹಾರಣ್ಯಗಳು ನಿಧಾನವಾಗಿ ಕ್ಷೀಣಿಸುತ್ತಿವೆ. ಎವರೆಸ್ಟಿನ ಇಳಿಜಾರುಗಳು ಪ್ರವಾಸಿಗರು ಮತ್ತು ಹವ್ಯಾಸಿ ಪರ್ವಾತಾರೋಹಿಗಳು ಅಲ್ಲೇ ಎಸೆದು ಬರುವ ಆಕ್ಸಿಜನ್ ಸಿಲಿಂಡರುಗಳಿಂದ, ಪ್ಲಾಸ್ಟಿಕ್ ಶೀಟುಗಳವರೆಗೆ ತುಂಬಿ ದೊಡ್ಡ ಗುಜರಿಗಳಾಗುತ್ತಿವೆ. ಒಂದು ಕಾಲದಲ್ಲಿ ಮನುಷ್ಯನಿಗೆ ಎದೆ ನಡುಗಿಸುವ ಸವಾಲುಗಳಾಗಿದ್ದ ಹುಲಿ ಸಿಂಹಗಳಿಗೆ ಇಂದು ನಾವು ರಕ್ಷಣೆ ಕೊಟ್ಟು ಸಾಕಬೇಕಾದ ದುಃಸ್ಥಿತಿ ಒದಗಿದಂತೆಯೇ ನಮ್ಮ ಹಿಮಾಲಯ , ಅಮೆಜಾನ್ , ಧ್ರುವ ವಲಯ , ಮಹಾಸಾಗರಗಳೂ ದುಃಸ್ಥಿತಿಗೆ ಒಳಗಾದರೆ ಅದು ಮುಂಬರಲಿರಾವ ನಮ್ಮ ದುಃಸ್ಥಿತಿಯ ಮುನ್ನುಡಿಯಷ್ಟೇ. ಈ ಪುಸ್ತಕ ಓದುಗರಲ್ಲಿ ಈ ಎಚ್ಚರ ಮೂಡಿಸಬೇಕೆಂಬುದೇ ನನ್ನ ಸದಾಶಯ. ಅಮೆಜಾನ್ ಮತ್ತು ಎವರೆಸ್ಟ್‌ಗಳನ್ನು ಹಾಳು ಮಾಡಿಕೊಳ್ಳುವ ಮನಸ್ಸುಗಳು ಅವು ಹಾಳಾಗುವುದಕ್ಕೆ ಮುನ್ನವೇ ಹಾಳಾಗುತ್ತವೆ ಎನ್ನುವುದನ್ನು ನೆನಪಿನಲ್ಲಿಡಿ.

- ಕೆ.ಪಿ.ಪೂರ್ಣಚಂದ್ರ ತೇಜಸ್ವಿ


ಸರಣಿಯ ಹನ್ನೊಂದನೆಯ ಪುಸ್ತಕ 'ದೇಶವಿದೇಶ - 3 '.

 

ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !