ಪುಟ್ಟ ಹುಡುಗಿ ಸುರಭಿ ಬರೆದ ಕತೆಗಳು ಇಲ್ಲಿವೆ. ಸ್ವಂತ ಕತೆ, ಕೇಳಿದ ಕತೆ, ಊಹಿಸಿದ ಕತೆ, ಕನಸಲ್ಲಿ ಕಂಡ ಕತೆ, ಅಜ್ಜ ಹೇಳಿದ ಕತೆ ಅಂತ ಸುಮಾರು ಇಪ್ಪತ್ತೈದು ಕತೆಗಳನ್ನು ಬರಹಕ್ಕಿಳಿಸಿ ಆಕೆ ಇಲ್ಲಿ ಈ ಗೊಂಚಲಿನಲ್ಲಿ ಇರಿಸಿದ್ದಾಳೆ. ಈ ಎಲ್ಲ ಕತೆಗಳಲ್ಲಿಯೂ
ಕಾಣುವುದು ಅವಳ ಲವಲವಿಕೆ, ಕತೆ ಹೇಳುವ ಉತ್ಸಾಹ ಮತ್ತು ಚಂದವಾದ ಭಾಷೆ. ಇವುಗಳಲ್ಲಿ ಎಲ್ಲಕ್ಕಿಂತಲೂ ಹೆಚ್ಚು ಸಂತೋಷ ಕೊಟ್ಟ ಒಂದು ಕತೆಯನ್ನು ಹೆಸರಿಸಿರೆಂದರೆ ನನಗೆ ಹೊಳೆಯುವುದು ‘ಹೇನುಗಳಿಗೆ ನನ್ನ ತಲೆ ಯಾಕೆ ಇಷ್ಟ?’ ಎಂಬ ಕತೆ. ಇಲ್ಲೊಂದು ಎಳೆಯ ಮುಗ್ಧ ಮನಸ್ಸು ಎಷ್ಟು ಚೆನ್ನಾಗಿ ಎದ್ದು ಕಾಣುತ್ತಿದೆ! ಅಪರೂಪದ ಕಲ್ಪನೆ ಇಲ್ಲಿ ಅತ್ಯಂತ ಸಹಜವಾಗಿ ಅರಳಿದೆ. ಇಂಥದೊಂದು ಸುಂದರ ಕತೆಯನ್ನು ಬರೆಯಬಲ್ಲ ಈ ಪುಟಾಣಿಗೆ ಉತ್ತಮ ಭವಿಷ್ಯವಿದೆ. ಪುಟಾಣಿ ಸುರಭಿಗೆ ಅಭಿಮಾನ ಮತ್ತು ಕೊಂಡಾಟದಿಂದ ಶುಭ ಹಾರೈಸುತಿದ್ದೇನೆ.
-ವೈದೇಹಿ, ಕನ್ನಡದ ಹಿರಿಯ ಕತೆಗಾರ್ತಿ
ಕಥಾ ನಿರೂಪಣೆ:
ಮಾನಸಿ ಸುಧೀರ್
ಸುರಭಿ ಕೊಡವೂರು
ಸಂಗೀತ:
ನಾವು ಮೈಸೂರು
ಸಂಗೀತ ವಿನ್ಯಾಸ :
ಮುನ್ನಾ ಮೈಸೂರು
ಕೊಳಲುವಾದನ:
ವಿದ್ವಾನ್ ಸಮೀರ್ ರಾವ್
ಸಹಯೋಗ:
ನಾವು ಸ್ಟುಡಿಯೋ, ಮೈಸೂರು
ಆಡಿಯೋ ಪುಸ್ತಕದ ಅವಧಿ: 1 ಗಂಟೆ 30 ನಿಮಿಷ
ಮೊಬೈಲ್ ಮೈಥಿಲಿ ಆಡಿಯೋ ಪುಸ್ತಕದ ಕುರಿತು ನಡೆದ ಫೇಸ್ ಬುಕ್ ಲೈವ್ ವಿಡಿಯೋ: