ಅಪ್ಪನ ಅಂಗಿ

ಅಪ್ಪನ ಅಂಗಿ

Regular price
$4.99
Sale price
$4.99
Regular price
Sold out
Unit price
per 
Shipping does not apply

ಈ ಸಾಲಿನ ಪ್ರಶಸ್ತಿ ಪಡೆದ ಲಕ್ಷ್ಮಣ್ ವಿ.ಎ ನಮ್ಮ ಕಾಲದ ವಾಸ್ತವ ಪ್ರಜ್ಞೆಯ ಕವಿಗಳಲ್ಲಿ ಒಬ್ಬರು. 'ಅಪ್ಪನ ಅಂಗಿ' ಸಂಕಲನದಲ್ಲಿ ಲಕ್ಷ್ಮಣ ಅವರ ಕವಿತೆಗಳು, ನೆಮ್ಮದಿಯ ಪಯಣದ ಅರಿವೆಂಬುದು ನಮ್ಮ ಹೊರಗಿಲ್ಲದೇ ಆ ಅರಿವು ನಮ್ಮೊಳಗೇ ಇರುವ ಮರ್ಮವನ್ನು ಚಿತ್ರವತ್ತಾಗಿ ಹೇಳುತ್ತವೆ. ಕವಿ ಅನುಭವಿಸಿದ ವೇದನೆಗಳೇ ಹಾಡಾಗಿ ಹರಿಯುತ್ತ, ನಮ್ಮೊಂದಿಗೇ ನಡೆದು ಬರುವ ನೆರಳೂ ಕೂಡ ನಮ್ಮದಷ್ಟೇ ಅಲ್ಲ ಎಂಬಂತಹ ತಿಳಿವಳಿಕೆಯೊಂದನ್ನು ಕಟ್ಟಿ ಕೊಡುತ್ತದೆ. ಅವ್ವನ ಸ್ವಂತದ ಬಿಕ್ಕು, ಅಪ್ಪನ ಅಂಗಿಯ ಮೈತುಂಬ ಅವ್ವ ಹಾಕಿದ ತೇಪೆ, ವೃದ್ಧಾಶ್ರಮದ ತಾಯಿಯೊಬ್ಬಳು ಮನೆಯ ದಾರಿ ತುಳಿಯುವಂತಾಗಲು ಇನ್ನೂ ತೆರೆಯಬೇಕಿರುವ ಜೈಲಿನ ದೊಡ್ಡ ಬಾಗಿಲು, ಅವ್ವನ ಏಕಾಂಗಿ ಫೋಟೋ ಹುಡುಕುವ ಅನಿವಾರ್ಯತೆ ತಂದೊಡ್ಡಿದ ಅವಳ ತಿಥಿ ಕಾರ್ಡು,ಹೀಗೆ ಕಟ್ಟಕಡೆಯ ಘಟ್ಟದಲ್ಲೂ ಚರಿತ್ರೆಯಲ್ಲಿ ಹೂತು ಹೋದ ಅವ್ವನಂಥ ಅವ್ವನ ಅಸ್ತಿತ್ವವು, ಅಪ್ಪನಿಗಿಂತ ಒಂದು ಗುಂಜಿ ಹೆಚ್ಚೇ ತೂಗಿಸಬಲ್ಲದು ಮತ್ತು ಆ ಮೂಲಕ ಆತ್ಮದ ಕತ್ತಲನ್ನು ಸತ್ಯದ ಬೆಳಕಿನಲ್ಲಿಟ್ಟು ಕಾಣಿಸಬಲ್ಲದು. ಅಂತಹ ಸತ್ಯವನ್ನು ಸೀಳಲು ಆಯುಧಗಳಿಗಿಂತಲೂ ನಮ್ಮ ಒಳಗಣ್ಣೇ ಸೂಕ್ತ ಎಂಬುದನ್ನು ಇಲ್ಲಿಯ ಕವಿತೆಗಳು ತೋರಿಸುತ್ತವೆ. ಮರದ ಟೊಂಗೆಯಲಿ ನೇಣಿಗೆ ಬಿದ್ದ ಚಂದ್ರನೂ ಮತ್ತು ಅನಾಥ ಭಾವ ತುಂಬುವ ಒಂಟಿ ಚಪ್ಪಲಿಯೂ ಲಕ್ಷ್ಮಣ ಅವರ ಕವಿತೆಗಳ ಎರಡು ದಡಗಳಾಗಿ ಕಾಡುತ್ತ ಸಹೃದಯರನ್ನು ಕಂಗೆಡಿಸುವ ಶಕ್ತಿಯನ್ನು ಹೊಂದಿವೆ. ಎಲೆ ಕಳಚುವ ಸದ್ದನ್ನೂ ಸಹ ಹಿಡಿಯುವ ಸೂಕ್ಷ್ಮತೆಯಲ್ಲಿ ಹುಟ್ಟಿದ ಇಲ್ಲಿಯ ಕವಿತೆಗಳು ಬದುಕನ್ನು ಒಟ್ಟಿಗೇ ಪಾತಾಳ ಗರಡಿಯಂತೆ ಶೋಧಿಸಬಲ್ಲವು. ಇಂಥ ಶೋಧನೆಗಳು ಕೇವಲ ವಿಸ್ಮಯಗಳಲ್ಲಿ ಹೂತು ಹೋಗುವಂತೆ ಕವಿ ಲಕ್ಷ್ಮಣ ಬರೆಯುವವರಲ್ಲ. ಕವಿತೆಗಳ ದಿಕ್ಕಿನಲ್ಲಿರುವುದು ಕವಿಯ ಅನುಭವದಾಳದ ಅಖಂಡ ಆತ್ಮಾನುಸಂಧಾನ. ಈ ಆತ್ಮಾನುಸಂಧಾನವೇ ಇಲ್ಲಿಯ ಕವಿತೆಗಳ ಘನತೆಯನ್ನು ಆವರಿಸಿದೆ.

ಪುಟಗಳು: 80

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

ಬಹುರೂಪಿಯ ಪ್ರಕಟಣೆಯ ಡಾ.ಲಕ್ಷ್ಮಣ್ ವಿ ಎ ಅವರ ಅಪ್ಪನ ಅಂಗಿ ಕವನ ಸಂಕಲನ ಬಿಡುಗಡೆ ಸಮಾರಂಭ