ಮಕ್ಕಳ ಹಕ್ಕುಗಳ ಬಗೆಗಿನ ಅರಿವು ಎಲ್ಲರಿಗೂ ಅಗತ್ಯ.
‘ಎಗ್ಲಾಂಟೈನ್ ಜೆಬ್’ ಈ ಹೆಸರನ್ನು ಮಕ್ಕಳ ಹಕ್ಕುಗಳನ್ನು ಕುರಿತು ತಿಳಿದವರು, ಚಿಂತಿಸುವವರು, ಕೆಲಸ ಮಾಡುವವರೆಲ್ಲರೂ ಸದಾ ನೆನೆಯ ಬೇಕಾಗಿದೆ. ಆದರೆ ಯಾರೀಕೆ, ಏನು ಮಾಡಿದಳು ಎಂಬ ಬಗ್ಗೆ ನಮಗೆ ತಿಳಿಯ ಬೇಕಾದರೆ ಈ ಪುಸ್ತಕವನ್ನು ಓದಲೇಬೇಕು.
ಶಾಲೆಯಲ್ಲಿ ಸಿಗುವ ಬಿಸಿ ಊಟದ ಕುರಿತು ಗೊತ್ತುಈ ಬಿಸಿ ಊಟದ ಕಲ್ಪನೆಯ ಹರಿಕಾರಳು ಎಗ್ಲಾಂಟೈನ್ ಜೆಬ್ ಎಂದರೆ ನಿಮಗೆ ಆಶ್ಚರ್ಯವಾಗಬಹುದು. 52 ವರ್ಷಗಳ ತನ್ನ ಅಲ್ಪಕಾಲದ ಬಾಳಿನಲ್ಲಿ ಇಡೀ ಜಗತ್ತಿಗೆ ಮಕ್ಕಳ ಹಕ್ಕುಗಳ ಕುರಿತು ಜಾಗ್ರತೆ ಮೂಡಿಸಿದ ಮತ್ತು ಆ ನಿಟ್ಟಿನಲ್ಲಿ ಜಗತ್ತು ಸಾಂಸ್ಥಿಕ ಕಾರ್ಯಕ್ರಮಗಳನ್ನು ರೂಪಿಸುವಂತೆ ಪ್ರೇರೇಪಿಸಿದ ಮಹಾನ್ ವ್ಯಕ್ತಿ ಎಗ್ಲಾಂಟೈನ್ ಜೆಬ್.
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 30 ವರ್ಷಗಳು ಸಂದಿರುವ ಮತ್ತು ಎಗ್ಲಾಂಟೈನ್ ಜೆಬ್ ಮಕ್ಕಳ ಹಕ್ಕುಗಳ ಪರವಾಗಿ ದನಿ ಎತ್ತಿ ಪೋಲಿಸರಿಂದ ಬಂಧಿತರಾಗಿದ್ದು ಮತ್ತು ಮಕ್ಕಳಿಗಾಗಿ ಸೇವ್ ದಿ ಚಿಲ್ಡ್ರನ್ ಸಂಸ್ಥೆ ಆರಂಭಿಸಿ 100 ವರ್ಷಗಳು ಆಗಿರುವ ಈ ಸಂದರ್ಭದಲ್ಲಿ ಈ ರಚನೆ ನಿಮ್ಮೆದುರಿಗಿದೆ . ಮಕ್ಕಳ ಹಕ್ಕುಗಳ ಕ್ಷೇತ್ರದ ಕಾರ್ಯಕರ್ತರು, ಚಿಂತಕರು ಹಾಗೂ ಮಕ್ಕಳಿಗೆ ಈ ಪುಸ್ತಕ ಸ್ಫೂರ್ತಿ ತರಲಿದೆ .
ನೀವೂ ಓದಿ. ಮಕ್ಕಳಿಗಾಗಿ ಒಂದು ಸುಂದರ ಜಗತ್ತನ್ನು ಬಿಟ್ಟು ಹೋಗೋಣ.
ಪುಟಗಳು: 160