ಜಂಗಲ್ ಡೈರಿ

ಜಂಗಲ್ ಡೈರಿ

Regular price
$7.99
Sale price
$7.99
Regular price
Sold out
Unit price
per 
Shipping does not apply

ವಿನೋದ್ ಪಕ್ಷಿಗೆ ಕಲ್ಲೆಸೆದು ನಂತರ ಆ ಪಕ್ಷಿ ಸೈಬೀರಿಯಾದಿಂದ ಸಾವಿರಾರು ಮೈಲು ಹಾರಿ ಬಂದದ್ದು ತಿಳಿದು ಕಲ್ಲನ್ನು ಬದಿಗಿಟ್ಟು ಪಕ್ಷಿಪ್ರೇಮಿಯಾದವರು, ನಂತರ ಮೃಗಾಲಯದಲ್ಲಿ ಪ್ರಾಣಿಗಳ ಒಡನಾಟ, ಗೆಳೆಯರೊಂದಿಗೆ ಕಾಡಿನ ಓಡಾಟ ಇವರನ್ನು ಸಂಪೂರ್ಣ ಬದಲಿಸಿತು. ಅವರು ತಮ್ಮ ಅನುಭವಗಳನ್ನು ತಾವಿದ್ದೆಡೆಯೆಲ್ಲಾ ಹೊತ್ತು ಸಾಗಿದ್ದಾರೆ. ಹಾಗಾಗಿ ಪತ್ರಿಕೆ, ಟೆಲಿವಿಷನ್‍ಗೆ ಕಾಲಿಟ್ಟಾಗಲೂ ಅವರ ವನ್ಯ ಪ್ರೇಮವನ್ನು ಹೊತ್ತೇ ತಂದಿದ್ದಾರೆ. ವಿನೋದಕುಮಾರ್ ಅಪರೂಪದ ಪತ್ರಕರ್ತ. ವನ್ಯಜೀವಿ ಕ್ಷೇತ್ರದಲ್ಲಿ ಪರಿಣಿತಿ ಪಡೆದ ಪತ್ರಕರ್ತರು ಇಲ್ಲವೇ ಇಲ್ಲ ಎನ್ನಬಹುದು. ಅವರು ಕಾಡು ಮತ್ತು ನಾಡಿಗೆ ಕನ್ನಡಿ ಹಿಡಿದ ಕಾರಣಕ್ಕಾಗಿಯೇ ನನಗೆ ಇಷ್ಟ. ಪ್ರಾಣಿಗಳೆಲ್ಲಾ ನಾಡಿಗೆ ನುಗ್ಗುತ್ತಿರುವ ವೇಳೆಯಲ್ಲಿ ಕಾಡು ಹೊಕ್ಕವರು ವಿನೋದಕುಮಾರ್ ನಾಯ್ಕ್. ಕಾಡಿನ ಬದುಕು, ಅಲ್ಲಿನ ಕಲರವ, ಅಲ್ಲಿನ ಬದಲಾಗುತ್ತಿರುವ ಬದುಕು, ಅಲ್ಲಿನ ಸಂಕಟ ತೊಳಲಾಟ ಎಲ್ಲವನ್ನೂ ಬಲ್ಲ ವಿನೋದ್ ಕನ್ನಡ ಪತ್ರಿಕೋದ್ಯಮ ಕಂಡ ಅಪರೂಪದ ಪತ್ರಕರ್ತ. 

ಪತ್ರಿಕೋದ್ಯಮ ಎನ್ನುವುದು ಅಧಿಕಾರದ ಗದ್ದುಗೆಯ ಸುತ್ತಾ ಗಿರಕಿ ಹೊಡೆಯುತ್ತಿರುವ ಈ ದಿನಗಳಲ್ಲಿ ವಿನೋದ್ ಕಾಡು- ನಾಡಿಗೆ ಕೊಂಡಿಯಾಗಿದ್ದಾರೆ. `ಕನ್ನಡಪ್ರಭ' ಪತ್ರಿಕೆಯಲ್ಲಿ `ಜಂಗಲ್ ಡೈರಿ' ಹೆಸರಿನಲ್ಲಿ ಪ್ರಕಟವಾದ ಅಂಕಣ ಬರಹಗಳನ್ನು ನಿಮ್ಮ ಕೈಗಿಡುತ್ತಿದ್ದೇವೆ. ಇದನ್ನು ಓದಿ ಮುಗಿಸುವ ವೇಳೆಗೆ ನಿಮಗೂ ಚಂದ್ರಶೇಖರ ಕಂಬಾರರು ಬಣ್ಣಿಸಿದಂತೆ `ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ..' ಎಂದು ಅನಿಸದಿದ್ದರೆ ಕೇಳಿ.. 
-ಜಿ ಎನ್ ಮೋಹನ್ 

ಪುಟಗಳು: 128