ಹುಣ್ಸ್‌ಮಕ್ಕಿ ಹುಳ (ನಾನ್‌ ತಿಂದದ್‌ ಬದ್ಕ್) (ಇಬುಕ್)

ಹುಣ್ಸ್‌ಮಕ್ಕಿ ಹುಳ (ನಾನ್‌ ತಿಂದದ್‌ ಬದ್ಕ್) (ಇಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

 

ಪ್ರಕಾಶಕರು: ಕಾನ್ ಕೇವ್ ಮೀಡಿಯಾ ಮತ್ತು ಪ್ರಕಾಶಕರು

Publisher: Concave Media and Publisher 

 

ಒಬ್ಬ ಕನ್ನಡ ಮಾಧ್ಯಮದಲ್ಲಿ ಓದಿದ ಹೆಣ್ಮಗಳು ಬೆಂಗಳೂರಿನಂತಹಾ ಮಹಾನಗರಿಯಲ್ಲಿ ಕೆಲಸ ಹುಡುಕುವ ಕಷ್ಟದ ಬಗ್ಗೆ ಇದರಲ್ಲಿ ಬರೆಯಲಾಗಿದೆ. ಅದರಲ್ಲೇನು ಮಹಾ ಅಂತೀರಾ? ಹೌದು. ನಮಗೆಲ್ಲರಿಗೂ ಸಹ ಕೆಲಸ ಹುಡುಕುವ ಕಷ್ಟ ಎದುರಾಗಿದೆ, ನಾವೂ ಸಹ ಇಂಗ್ಲೀಷ್ ಬರದೇ ಪರದಾಡಿದ್ದೀವಿ. ಹೆಚ್ಚುಗಾರಿಕೆ ಏನೂ ಇಲ್ಲ.

ಆದರೆ ಲೇಖಕಿಯ ಸಂಕಷ್ಟ ಬೇರೆ ಬಗೆಯದು.

ಚಿಕ್ಕ ವಯಸ್ಸಿನಿಂದಾದ ಅಗ್ನಿಯ ಅವಘಡದಿಂದ ಮುಖ ಸುಟ್ಟು ಹೋಗಿರುವುದರಿಂದ ಕೆಲಸ ಕೇಳಲು ಹೋಗುವುದು ಎಂತಹಾ ಹಿಂಸೆ ಎಂಬ ಬಗ್ಗೆ ಯಾರಿಗಾದರೂ ಊಹೆ ಇದೆಯೇ...??

ಮುಖ ನೋಡಿ ಮಣೆ ಹಾಕುವ ಜನರೇ ತುಂಬಿರುವಾಗ ಪ್ರೀತಿ ತುಂಬಿದ ಹೃದಯ ಗಮನಿಸುವಷ್ಟು ತಾಳ್ಮೆ ಯಾರಿಗಾದರೂ ಇದೆಯೇ‌...?

ಎದುರಿನವರು ಏನು ತಿಳಿದುಕೊಳ್ಳುತ್ತಾರೆಯೋ, ನಮ್ಮ ಮಾತಿನಿಂದ ನೊಂದುಕೊಳ್ಳುತ್ತಾರೆಯೋ ಎಂಬುದನ್ನು ಅರಿಯದೇ ಮಾತನಾಡುವ ಜನರಿಗೆ ಒಡಲ ಸಂಕಟ ಅರ್ಥವಾಗುತ್ತದೆಯೇ....?

ಇಂತಹಾ ಕಷ್ಟಕರ ಪರಿಸ್ಥಿತಿಯನ್ನು ಲೇಖಕಿ ಬಹಳ ಸಹಜ ಎಂಬಂತೆ ನಮ್ಮ ಮುಂದೆ ಇಡುತ್ತಾ ಹೋಗುತ್ತಾರೆ. ತಮಗಾದ ಅನುಭವಗಳನ್ನು ಸರಳವಾಗಿ ನಮಗೂ ತಿಳಿಸುತ್ತಾ ಸಾಗುತ್ತಾರೆ. ಜೀವನವನ್ನು ಬಹಳ ಸುಂದರವಾಗಿ ಅರ್ಥ ಮಾಡಿಕೊಂಡಿರುವ ಆಕೆ ನಮ್ಮಲ್ಲಿಯೂ ಆತ್ಮವಿಶ್ವಾಸವನ್ನು ತುಂಬುತ್ತಾ ಬರುತ್ತಾರೆ. ಒಂದೊಂದು ಅಂಕ ಮುಗಿಸಿದ ಮೇಲೆ ಲೇಖಕಿ ನಮಗೆ ಆಪ್ತವಾಗುತ್ತಲೇ ಹೋಗುತ್ತಾರೆ.

ಆದರೆ 'ಬದುಕು' ಎನ್ನುವುದು ಬರೆದಷ್ಟು ಸುಲಭವಲ್ಲ.

ಇದು ಬರೀ ಬರಹವಲ್ಲ. ಲೇಖಕಿಯ ನಿಜ ಬದುಕು. ಕೂತು ಓದಿದಂತಲ್ಲ ಇದನ್ನು ಬದುಕುವುದು. ಆದರೆ ಅದನ್ನು ನಿಜ ಬದುಕಿದ್ದಾರೆ ಲೇಖಕಿ. ಆದರೆ ಅವರ ಬರಹ ಎಷ್ಟು ಸ್ಟ್ರಾಂಗ್ ಇದೆ ಎಂದರೆ ಬಹಳ ಖುಷಿಯಾಗುತ್ತದೆ. ನೊಂದವರಿಗೆ ಇವರ ಕೃತಿ ಒಂದು ಮಾರ್ಗದರ್ಶಿ ಆಗಬಲ್ಲದು.

ಒಂದೊಂದೇ ಅಧ್ಯಾಯ ಮುಗಿಸುತ್ತಿದ್ದಂತೆ ಲೇಖಕಿ ಅನುಭವಿಸಿದ ಸಿಹಿ-ಕಹಿ ಅನುಭವಗಳನ್ನು ಓದುತ್ತಾ, ಅದನ್ನು ನಾವೂ ಸಹ ಅನುಭವಿಸುತ್ತಾ ಬರುತ್ತೇವೆ. ಖುಷಿಯಾದಾಗ ಸಮಾಧಾನ ಪಟ್ಟುಕೊಳ್ಳುತ್ತೇವೆ. ದುಃಖವಾದಾಗ ಬಿಕ್ಕುತ್ತೇವೆ. ಏಕೆಂದರೆ ಎದುರಾಗುವ ಪ್ರತಿಯೊಬ್ಬರಿಗೂ 'ತನ್ನ ಮುಖಕ್ಕೇನಾಗಿತ್ತು' ಅಂತ ವಿವರಿಸುತ್ತಾ ಬರುವುದು ಎಂದರೆ ಅಷ್ಟು ಸುಲಭವಲ್ಲ. ಜನರೂ ಸಹ ಯಾರಾದರೂ ಒಬ್ಬರನ್ನು ನೋಡಿದ ಕೂಡಲೇ ದೈಹಿಕವಾಗಿ ಅಳೆಯುವುದನ್ನು ನಿಲ್ಲಿಸಬೇಕು. ಅವರನ್ನು ಕೇವಲ ಮನುಷ್ಯರೆಂದು ಗುರುತಿಸುವುದನ್ನು ಕಲಿಯಬೇಕು.

ಲೇಖಕಿಯಲ್ಲಿ ಮೊದಲಿದ್ದ ಕೀಳರಿಮೆ, ನಂತರ ಆಕೆ ಅದನ್ನು ತೊಡೆದು ಹಾಕಿದ ರೀತಿ ಅನನ್ಯವಾಗಿದೆ. ಅದರಂತೆ ಮೊದಲ ಪ್ರೀತಿ, ಅದರ ವೈಫಲ್ಯ, ಅದನ್ನು ಆಕೆ ಮೆಟ್ಟಿ ನಿಂತ ಪರಿ ಆಶ್ಚರ್ಯ ಹುಟ್ಟಿಸುತ್ತದೆ. ಹದಿಹರೆಯದ ಹೆಣ್ಣುಮಕ್ಕಳೆಲ್ಲರೂ ಈ ಕೃತಿ ಓದಲೇಬೇಕು. ಅವರಿಗೆ ಅತ್ಯಗತ್ಯವಾದ ಆಪ್ತ ವಿಷಯಗಳಿವೆ ಇದರಲ್ಲಿ.

ಉಳಿದಂತೆ ಇಡೀ ಕೃತಿಯಲ್ಲಿರುವುದು
ಆತ್ಮವಿಶ್ವಾಸ.... ಆತ್ಮವಿಶ್ವಾಸ... ಆತ್ಮವಿಶ್ವಾಸ....

ನಾವು ಓದುವ ಕೃತಿಯಲ್ಲಿ ನಮ್ಮ ಬದುಕಿಗೆ ಸಾಮ್ಯತೆ ಇದ್ದರೆ, ಆ ಕೃತಿ ಮತ್ತಷ್ಟು ಆಪ್ತವಾಗುತ್ತದೆ.‌ ಯಾವುದೋ ಅರಿಯದ ಕೀಳರಿಮೆಯಿಂದ ಬದುಕುವ ನಾವು ಇಂಥದ್ದನ್ನು ಓದಿ ಚೈತನ್ಯ ಪಡೆಯುತ್ತೇವೆ.

ಇಷ್ಟು ಸಣ್ಣ ವಯಸ್ಸಿ್ಗೆಗೆ ಆತ್ಮಕಥನ ಬರೆಯುವುದು ಅಂದ್ರೆ ಸುಲಭವಲ್ಲ. ಪುಸ್ತಕದಲ್ಲಿ ಇರುವ ಪಾತ್ರಗಳು ಇನ್ನೂ ಜೀವಂತ ಇರುವಾಗ ಅವರ ಬಗ್ಗೆ ಬರೆದು ಜಯಿಸಿದ್ದಾರೆ ಲೇಖಕಿ.

"ಆಲ್ ದಿ ಬೆಸ್ಟ್" ಹೇಳೋಣ.

************
ಕೆ.ಎ.ಸೌಮ್ಯ
ಮೈಸೂರು

 

ಕೃಪೆ - https://www.goodreads.com/  

ಪುಟಗಳು: 176

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !