ಬರಹಗಾರರು: ಕಾರ್ತೀಕ್ ಬೆಳಗೋಡು
ಮಲೆನಾಡಿನ ಸೆರಗಲ್ಲಿ ಅರಳಿದ ಹತ್ತು ಕತೆಗಳು ಇಲ್ಲಿವೆ. ಇವುಗಳಲ್ಲಿ ನಗರಗಳ ಕಡೆಗೆ ವಲಸೆ ಹೋಗುತ್ತಿರುವ ಪ್ರಸ್ತುತ ತಲೆಮಾರಿನಿಂದಾಗಿ ಅನಾಥವಾಗುತ್ತಿರುವ ಮಲೆನಾಡಿನ ಹಲವು ಊರುಗಳ ನಿಟ್ಟುಸಿರಿದೆ, ನೀರಿಲ್ಲದ ಕಾರಣಕ್ಕೆ ಹೆಣ್ಣು ಕೊಡದ ಬಯಲು ಸೀಮೆ ಭಾಗದ ಊರೊಂದರ ಬವಣೆಯಿದೆ, ಒಟ್ಟಾರೆ ಮಲೆನಾಡಿನ ಬದುಕಿನ ಗಾಢವಾದ ಪರಿಮಳವೊಂದಿದೆ.