ಬರಹಗಾರರು: ಸೋಮು ರೆಡ್ಡಿ
ಕುಸುಮಿ ಎಂಬ ಹೆಣ್ಣು ಪಾತ್ರವು ತನ್ನ ಕುಲಕಸುಬನ್ನು ನಂಬಿ ಬದುಕು ಕಟ್ಟಿಕೊಳ್ಳಲು ಸಮಾಜದ ಮುಂದೆ ಪಟ್ಟ ಪಡಿಪಾಟಲಗಳ ಮಿಶ್ರಣವೇ ಈ ಕಾದಂಬರಿಯ ದ್ರವ್ಯ. ಅಪ್ಪಟ ಉತ್ತರ ಕರ್ನಾಟಕದ ಭಾಷೆಯ ಸೊಗಡಿನಲ್ಲಿ ಅರಳಿರುವ ಈ ಕಾದಂಬರಿ ಓದುಗನಲ್ಲಿ ಬೆರಗೊಂದನ್ನು ಮೂಡಿಸುವುದಲ್ಲದೇ ಓದಿದ ನಂತರವೂ ಪಾತ್ರಗಳ ಗುಂಗಿನಲ್ಲಿ ಹೊರ ಬರದಂತೆ ಕಟ್ಟಿ ಹಾಕುವಷ್ಟು ಸಶಕ್ತವಾಗಿದೆ.