ಅರಮನೆ ಗುಡ್ಡದ ಕರಾಳ ರಾತ್ರಿಗಳು

ಅರಮನೆ ಗುಡ್ಡದ ಕರಾಳ ರಾತ್ರಿಗಳು

Regular price
$8.99
Sale price
$8.99
Regular price
Sold out
Unit price
per 
Shipping does not apply

ಬರಹಗಾರರು: ಗಿರಿಮನೆ ಶ್ಯಾಮರಾವ್

ಓದು, ಮನರಂಜನೆಯ ಜೊತೆಗೆ ಕುತೂಹಲ ಸೃಷ್ಟಿಸಿ ಯೋಚನೆಗೆ ಹಚ್ಚುತ್ತದೆ. ನೈಜತೆಯ ಹಿನ್ನೆಲೆಯಿರುವ ಕೃತಿಗಳಾದರೆ ನಂತರ ಅದು ಓದುಗರನ್ನು ವಿಚಾರವಂತರನ್ನಾಗಿ ಮಾಡಿ ಪ್ರಬುದ್ಧರನ್ನಾಗಿಸುತ್ತದೆ. ಈ ಮಲೆನಾಡಿನ ರೋಚಕ ಕತೆಗಳ ಸರಣಿಯ ಒಂಭತ್ತು ಭಾಗಗಳಲ್ಲೂ ಇವೆಲ್ಲವನ್ನೂ ಗಿರಿಮನೆ ಶ್ಯಾಮರಾವ್ ಅವರು ಅಳವಡಿಸಲು ಪ್ರಯತ್ನಿಸಿದ್ದಾರೆ. ಇದರಲ್ಲಿ ಅವರದೇ ಬದುಕಿನ ಅನುಭವದ ಕೃತಿಗಳಿವೆ. ಜೊತೆಗೆ ಕಾಲ್ಪನಿಕ ಕಾದಂಬರಿಗಳೂ ಇವೆ. ಆದರೆ ಅವುಗಳಲ್ಲೂ ಪಾತ್ರಗಳ ಹೊರತಾಗಿ ಮಲೆನಾಡಿನ, ಪಶ್ಚಿಮಘಟ್ಟದ ಅದ್ಭುತವಾದ ಬೆಟ್ಟ-ಗುಡ್ಡ-ಕಾಡಿನ, ರೌದ್ರ ರಮಣೀಯ ಮಳೆಗಾಲದ, ಕಾಫಿ, ಕಿತ್ತಳೆ, ಏಲಕ್ಕಿ, ಕಾಳುಮೆಣಸು, ಭತ್ತದ ಜೊತೆಗೆ ಜೇನು, ಆನೆ, ಹಾವು, ಮಂಗ ಇತ್ಯಾದಿ ಪಶು, ಪಕ್ಷಿಗಳ ಒಡನಾಟದ ರಂಗು ರಂಗಿನ ಕುತೂಹಲಕರ ಸಂಗತಿಗಳಿವೆ. ಡ್ರಗ್ಸ್ ಮಾಫಿಯಾ, ಮರಳು ಮಾಫಿಯಾ, ಬೇಡವಾದ ಅಣೆಕಟ್ಟು ಇತ್ಯಾದಿಗಳಿಂದ ಮಲೆನಾಡು ಏರು ಪೇರಾಗುತ್ತಿರುವುದಕ್ಕೆ ಕಾರಣಗಳನ್ನು ವಿವರಿಸಲಾಗಿದೆ. ಅವು ಕತೆಯ ಜೊತೆಗೇ ಸಾಗುವುದರಿಂದ ಕುತೂಹಲದ ಜೊತೆಗೇ ಮಲೆನಾಡು ಎಂದರೆ ಎಂತಹಾ ಅದ್ಭುತವಾದ ಸೃಷ್ಟಿ ಎನ್ನುವುದು ಓದಿದ ನಂತರ ನಿಮಗೇ ತಿಳಿಯುತ್ತದೆ.