Collection: ಗಿರಿಮನೆ ಶ್ಯಾಮರಾವ್

ಕನ್ನಡದಲ್ಲಿ ಬರವಣಿಗೆ ನಂಬಿ ಬದುಕುವುದು ಕಷ್ಟ ಅನ್ನುವ ಅನಿಸಿಕೆಗಳೇ ಇರುವ ದಿನಗಳಲ್ಲಿ ಸಕಲೇಶಪುರದಂತಹ ಚಿಕ್ಕ ಊರಿನಲ್ಲಿ ಕೂತು 25ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದು, ದಾಖಲೆಯ ಪ್ರಮಾಣದಲ್ಲಿ ಮಾರಾಟವನ್ನೂ ಮಾಡಿ ಒಬ್ಬ ಯಶಸ್ವಿ ಲೇಖಕರಾಗಿ ಕನ್ನಡ ಜನತೆಯ ಮುಂದೆ ನಿಂತಿರುವವರು ನಮ್ಮೆಲ್ಲರ ನೆಚ್ಚಿನ ಬರಹಗಾರರಾದ ಗಿರಿಮನೆ ಶ್ಯಾಮರಾವ್ ಅವರು. ಮಕ್ಕಳ ಬೆಳವಣಿಗೆಯ ಕುರಿತ ಪುಸ್ತಕಗಳು, ಕಮ್ಯೂನಿಕೇಶನ್ ಸ್ಕಿಲ್ಸ್ ಬಗೆಗಿನ ಪುಸ್ತಕಗಳು, ವೇದಗಳ ಕುರಿತ ಹೊಸ ಬಗೆಯ ವ್ಯಾಖ್ಯಾನದ ಪುಸ್ತಕಗಳು ಹಾಗೂ ಮಲೆನಾಡಿನ ಬದುಕನ್ನು ಗಾಢವಾಗಿ ತಟ್ಟುವಂತೆ ಬರೆದ ಮಲೆನಾಡಿನ ಕೌತುಕ ಕತೆಗಳ ಸರಣಿ ಕಾದಂಬರಿಗಳು ಅತ್ಯಂತ ಜನಪ್ರಿಯವಾಗಿವೆ. ಅವರ ಬರವಣಿಗೆಯ ಪಯಣವೇ ಒಂದು ಕತೆಯಾಗುವಷ್ಟು ತೀವ್ರವಾಗಿದೆ. ಅವರ ಎಲ್ಲ ಪುಸ್ತಕಗಳೂ ಇಬುಕ್/ಆಡಿಯೋ ರೂಪದಲ್ಲಿ ಮೈಲ್ಯಾಂಗ್ ಅಲ್ಲಿ ಈಗ ಮೊಬೈಲಿನಲ್ಲೇ ಓದಬಹುದು, ಕೇಳಬಹುದು.
34 products

Sorry, there are no products in this collection